Advertisement

ಸಿದ್ದರಬೆಟ್ಟದ ಶ್ರೀ ಸಿದ್ದೇಶ್ವರ ಸ್ವಾಮಿ ರಥೋತ್ಸವ

04:42 PM Apr 12, 2022 | Team Udayavani |

ಕೊರಟಗೆರೆ: ಸಂಜೀವಿನಿ ತಾಣವಾದ ಸಿದ್ದರಬೆಟ್ಟದ ಶ್ರೀ ಸಿದ್ದೇಶ್ವರಸ ಸ್ವಾಮಿ ರಥೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದ್ದು, ವಿಶ್ವಕ್ಕೆ ಯಾವುದೇ ಮಾರಕ ಖಾಯಿಲೆ ಹರಡದಂತೆ ಸಿದ್ದೇಶ್ವರ ಸ್ವಾಮಿಯ ಕೃಪೆ ನಮ್ಮ ಮೇಲಿರಲಿ ಎಂದು ಸಿದ್ದರಬೆಟ್ಟದ ಶ್ರೀ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಜಿ ತಿಳಿಸಿದರು.

Advertisement

ತಾಲ್ಲೂಕಿನ ಸುಪ್ರಸಿದ್ದ ಪುಣ್ಯ ಕ್ಷೇತ್ರ ಸಂಜೀವಿನಿ ಕ್ಷೇತ್ರವೆಂದೇ ಪ್ರಸಿದ್ದಿ ಪಡೆದಿರುವ ಸಿದ್ದರಬೆಟ್ಟದಲ್ಲಿ ನಡೆದ ಶ್ರೀ ಸಿದ್ದೇಶ್ವರ ಸ್ವಾಮಿ ರಥೋತ್ಸವ ಮತ್ತು ಜಾತ್ರಾ ಮಹೋತ್ಸವದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಸಿದ್ದೇಶ್ವರ ಸ್ವಾಮಿಯ ಕೃಪೆಯಿಂದ ಸಕಾಲಕ್ಕೆ ಮಳೆ ಬೆಳೆಯಾಗಿ, ಗ್ರಾಮೀಣ ಪ್ರದೇಶದ ರೈತಾಪಿ ವರ್ಗ ನೆಮ್ಮದಿಯ ಜೀವನ ಸಾಗಿಸಲಿ. ಮುಜರಾಯಿ ಇಲಾಖೆಯಿಂದ ರಥೋತ್ಸವ ಕಾರ್ಯಕ್ರಮ ನಡೆದರೆ ಭಕ್ತರಿಂದ ಮೂರು ದಿನ ಅನ್ನ ಸಂತರ್ಪಣೆ ನಡೆಯಲಿದೆ. ಸಿದ್ದರಬೆಟ್ಟ ಕ್ಷೇತ್ರದಲ್ಲಿ ಮೂರು ದಿನಗಳ ಕಾಲ ಜಾತ್ರಾ ಮಹೋತ್ಸವವು ಭಕ್ತರ ಸಹಕಾರದಿಂದ ವಿಜೃಂಭಣೆಯಿಂದ ನೆರವೇರಲಿದೆ ಎಂದು ಹೇಳಿದರು.

ತಹಶೀಲ್ದಾರ್ ನಹೀದಾ ಜಮ್ ಜಮ್ ಮಾತನಾಡಿ, ಇತಿಹಾಸ ಪ್ರಸಿದ್ದ ಪುಣ್ಯ ಕ್ಷೇತ್ರವಾದ ಸಿದ್ದರಬೆಟ್ಟದ ಶ್ರೀ ಸಿದ್ದೇಶ್ವರ ಸ್ವಾಮಿಯ ರಥೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿದೆ. ಸ್ವಾಮಿಯ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಮುಜರಾಯಿ ಇಲಾಖೆಯಿಂದ ದಾಸೋಹ ವ್ಯವಸ್ಥೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

Advertisement

ಶ್ರೀ ಸಿದ್ದೇಶ್ವರ ದೇವಾಲಯ ಆರ್ಚಕ ಮಹೇಶ್ ಮಾತನಾಡಿ, ರಾಮ ನವಮಿ ಹಬ್ಬದ ಮಾರನೇ ದಿನ ಸಿದ್ದರಬೆಟ್ಟದ ಕ್ಷೇತ್ರದ ಶ್ರೀ ಸಿದ್ದೇಶ್ವರ ಸ್ವಾಮಿಯ ರಥೋತ್ಸವ ಕಾರ್ಯಕ್ರಮ ನೆರವೇರಿದೆ. ಗ್ರಾಮಸ್ಥರಿಂದ ದಾಸೋಹ, ಹೆಸರು ಬೇಳೆ  ಮತ್ತು ಪಾನಕದ  ವ್ಯವಸ್ಥೆ ನಡೆಯಲಿದೆ. ಸಂಜೆ ಸಿದ್ದೇಶ್ವರ ಸ್ವಾಮಿಯ ಉತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಬೂದಗವಿ, ಕುರಂಕೋಟೆ, ಮತ್ತು ತೋವಿನಕೆರೆ ಗ್ರಾಪಂ ನೇತೃತ್ವದಲ್ಲಿ ಮೂರು ದಿನ ಜಾತ್ರೆ ನಡೆಯಲಿದೆ‌ ಎಂದು ತಿಳಿಸಿದರು.

ಇನ್ನೂಓದಿ :  ಈಶ್ವರಪ್ಪ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಬಂಧಿಸಬೇಕು: ಸುರ್ಜೇವಾಲ

ಕಾರ್ಯಕ್ರಮದಲ್ಲಿ ಬೂದಗವಿ ಗ್ರಾಪಂ ಅದ್ಯಕ್ಷೆ ವಿನೋದಾ, ಉಪಾಧ್ಯಕ್ಷ ಅಖಂಡರಾಧ್ಯ, ಪಿಡಿಒ ವಿಜಯಲಕ್ಷ್ಮಿ, ಉಪ ತಹಶಿಲ್ದಾರ್ ರಾಜು.ಎ.ಜೆ, ನರಸಿಂಹಮೂರ್ತಿ,ಮುಖಂಡರಾದ ನಂಜಾರಾಧ್ಯ, ವಿಜಯ್ ಶಂಕರ್,ಶಿವಕುಮಾರ್, ಮರಿ ಸಿದ್ದಪ್ಪ, ಗಿರೀಶ್, ಸಿದ್ದನಂಜಯ್ಯ, ಬಸವರಾಜು, ಸಿಬ್ಬಂದಿ ಕಲ್ಪನಾ, ಸೌಭಾಗ್ಯಮ್ಮ ಇತರರು ಇದ್ದರು.

 

 

Advertisement

Udayavani is now on Telegram. Click here to join our channel and stay updated with the latest news.

Next