ತುಮಕೂರು: ರಾಜ್ಯದಲ್ಲಿ ಅನುಷ್ಠಾನದಲ್ಲಿರುವ ಸ್ಮಾರ್ಟ್ ಸಿಟಿಗಳಲ್ಲಿ ಉತ್ತಮ ಎಂಬ ಬಹುಮಾನ ಪಡೆದಿರುವ ತುಮಕೂರು ನಗರ ಮತ್ತಷ್ಟು ಸ್ಮಾರ್ಟ್ ಆಗಲು ನಾಗರಿಕರು, ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಕೈಜೋಡಿಸಬೇಕು ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀಸಿದ್ಧಲಿಂಗಸ್ವಾಮೀಜಿ ಹೇಳಿದರು.
ಸಿದ್ಧಗಂಗಾ ಮಠದಲ್ಲಿ ಮಂಗಳವಾರ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಬಿ.ಜೋತಿಗಣೇಶ್ ಅವರ2 ವರ್ಷದ ಸಾಧನೆ ಅಭಿವೃದ್ಧಿ ಪಥದತ್ತ ತುಮಕೂರು ಎಂಬ ವೆಬ್‌ಸೈಟ್ ಬಿಡುಗಡೆಗೊಳಿಸಿ ಮಾತನಾಡಿ, ನಾಗರಿಕರು ಸ್ಮಾರ್ಟ್ ಆಗುವ ಮೂಲಕ ಈಗಾಗಲೇ ನಡೆದಿರುವಅಭಿವೃದ್ಧಿಕಾರ್ಯಗಳುಜನರ ಉಪಯೋಗಕ್ಕೆ ಬರುವಂತೆ ಮಾಡಬೇಕಿದೆ ಎಂದರು.
ಕಳೆದ ಎರಡು ವರ್ಷಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಗಳಲ್ಲದೆ, ಸರ್ಕಾರದ ಅನುದಾನವನ್ನು ಬಳಸಿ ಶಾಸಕರು,
ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್ ದ್ವೀಪಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಈಗಾಗಲೇ ಕುಡಿಯುವ ನೀರಿ ಗಾಗಿ ತುಮಕೂರಿನ ಅತಿ ದೊಡ್ಡ ಕೆರೆ ಅಮಾನಿಕೆರೆಯನ್ನು ತುಂಬಿಸುವ ಕೆಲಸ ನಡೆದಿದೆ. ಇದೇ ರೀತಿ ಗಂಗಸಂದ್ರ, ಮರಳೂರು ಕೆರೆಗಳನ್ನು ಮುಂದಿನ ದಿನಗಳಲ್ಲಿ ತುಂಬಿಸುವ ಗುರಿ ಹೊಂದಿದ್ದು, ಇದಕ್ಕಾಗಿ ಶಾಸಕ ಜಿ.ಬಿ.ಜೋತಿಗಣೇಶ್, ಸಂಸದ ಜಿ.ಎಸ್.ಬಸವರಾಜು ಅವರನ್ನು ಅಭಿನಂದಿಸುವುದಾಗಿ ಸ್ವಾಮೀಜಿ ನುಡಿದರು.
ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಯಕುಮಾರ್ ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ತುಮಕೂರು ನಗರ ಶಾಸಕರು ರಸ್ತೆ, ಕುಡಿಯುವ ನೀರು, ಚರಂಡಿ, ಆಟದ ಮೈದಾನ ಸೇರಿದಂತೆ ಹಲವಾರು ಅಭಿವೃದ್ಧಿಕಾರ್ಯಗಳನ್ನು ಕೈಗೊಂಡು, ನಗರವನ್ನು ಆದರ್ಶ ನಗರವನ್ನಾಗಿಸಲು ಪಣ ತೊಟ್ಟಿದ್ದಾರೆ. ನಗರದಲ್ಲಿ ಅಭಿವೃದ್ಧಿ ಪರ್ವ, ಎರಡು ವರ್ಷಗಳ ಸಾಧನೆ ಎಂಬ ಕಿರು ಚಿತ್ರ ತಯಾರಿಸಿದ್ದು, ಅಕ್ಟೋಬರ್ 1 ರಿಂದ ಸೋಷಿಯಲ್ ಮೀಡಿಯಾಗಳಲ್ಲಿ ಜನರಿಗೆ ನೋಡಲು ಸಿಗಲಿದೆ ಎಂದರು.