Advertisement

ಸಿದ್ಧೇಶ್ವರ ಶ್ರೀಗಳ ಚಿತಾಭಸ್ಮ ಸಂಗ್ರಹ: ಕೂಡಲಸಂಗಮ, ಗೋಕರ್ಣದಲ್ಲಿ ವಿಸರ್ಜನೆ

05:55 PM Jan 05, 2023 | Team Udayavani |

ವಿಜಯಪುರ : ಗುರುವಾರ ಸೂರ್ಯೋದಯಕ್ಕೆ ಮುನ್ನ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಅಗ್ನಿಗರ್ಪಿತ ಸ್ಥಳದಲ್ಲಿ ಚಿತಾಭಸ್ಮ ಸಂಗ್ರಹಿಸಲಾಗಿದೆ. ಸಂಗ್ರಹಿತ ಚಿತಾಭಸ್ಮವನ್ನು ಕೃಷ್ಣಾ ತ್ರಿವೇಣಿ ಸಂಗಮ ಕೂಡಲಸಂಗಮ ಹಾಗೂ ಗೋಕರ್ಣದ ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸಲು ನಿರ್ಧರಿಸಲಾಗಿದೆ.

Advertisement

ಜ್ಞಾನಯೋಗಾಶ್ರಮದ ಅಧ್ಯಕ್ಷರಾದ ಬಸವಲಿಂಗ ಶ್ರೀಗಳ ನೇತೃತ್ವದಲ್ಲಿ ಗುರುವಾರ ಸೂರ್ಯೋದಯಕ್ಕೆ ಮುನ್ನವೇ ಬೆ.5 ಗಂಟೆಗಳ ಬಳಿಕ ಭ್ರಾಹ್ಮೀ ಮಹೂರ್ತದಲ್ಲಿ ಚಿತಾಭಸ್ಮವನ್ನು ಸಂಗ್ರಹ ಕಾರ್ಯ ಆರಂಭಿಸಲಾಯಿತು. ಸಂಗ್ರಹಿ ಅಸ್ಥಿಯನ್ನು ಬಿಂದಿಗೆಗಳಲ್ಲಿ ಸಂಗ್ರಹಿಸಲಾಯಿತು.

ಶ್ರೀಗಳ ಸಂಗ್ರಹಿತ ಚಿತಾಭಸ್ಮವನ್ನು ದೇಶದ ನಾಲ್ಕು ನದಿಗಳು, ಒಂದು ಸಾಗರದಲ್ಲಿ ವಿಸರ್ಜನೆ ಮಾಡಲು ನಿರ್ಧರಿಸಲಾಗಿದೆ. ಕೃಷ್ಣೆಯಲ್ಲಿ ಘಟಪ್ರಭಾ, ಮಲಪ್ರಭಾ ಸಂಗಮವಾಗುವ ತ್ರಿವೇಣಿ ಸಂಗಮ ಕೂಡಲಸಂಗಮ ಹಾಗೂ ಗೋಕರ್ಣದಲ್ಲಿ ಅರಬ್ಬಿ ಸಮುದ್ರದಲ್ಲಿ ವಿಸರ್ಜಿಲಾಗುತ್ತದೆ.

ಚಿತಾಭಸ್ಮಕ್ಕೆ ಹಾಲು, ನೀರು, ತುಪ್ಪ ಹಾಕಿ ಶಾಂತ ಮಾಡಲಾಗುತ್ತದೆ. ಮಡಿಕೆಗಳಲ್ಲಿ ಸಂಗ್ರಹಿಸಿ ಅಸ್ಥಿಯನ್ನು ಐದನೇ ದಿನವಾದ ಭಾನುವಾರ ವಿಸರ್ಜನೆ ಮಾಡಲಾಗುತ್ತದೆ ಎಂದು ಬಸವಲಿಂಗ ಶ್ರೀಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಭಾನುವಾರ ಬೆಳಿಗ್ಗೆ 5 ಗಂಟೆಗೆ ಜ್ಞಾನಯೋಗಾಶ್ರಮದಿಂದ ಸಿದ್ಧೇಶ್ವರ ಶ್ರೀಗಳ ಚಿತಾಭಸ್ಮವನ್ನು ವಿಸರ್ಜಿಸಲು ಕೂಡಲಸಂಗಮಕ್ಕೆ ತೆರಳಲಾಗುತ್ತದೆ. ಬಳಿಕ ಅಲ್ಲಿಂದ ಗೋರ್ಕಣಕ್ಕೆ ತೆರಳಲಾಗುತ್ತದೆ ಎಂದು ವಿವರಿಸಿದ್ದಾರೆ.

Advertisement

ಶ್ರೀಗಳ ಚಿತಾಭಸ್ಮ ವಿಸರ್ಜನೆಗೆ ಆಗಮಿಸುವ ಭಕ್ತರು ನಿಗದಿತ ಸಮಯಕ್ಕೆ ಆಶ್ರಮದಲ್ಲಿ ಇರಬೇಕು. ತಮ್ಮ ವಾಹನ ಹಾಗೂ ಉಟೋಪಚಾರದ ವ್ಯವಸ್ಥೆಯನ್ನು ತಾವೇ ಮಾಡಿಕೊಳ್ಳಬೇಕು ಎಂದು ಬಸವಲಿಂಗಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಇ ಕಾಮರ್ಸ್ ದೈತ್ಯ ಅಮೇಜಾನ್ 18 ಸಾವಿರ ಉದ್ಯೋಗಿಗಳನ್ನು ವಜಾ ಮಾಡುತ್ತಾ? ಕಂಪೆನಿ ಹೇಳಿದ್ದೇನು

Advertisement

Udayavani is now on Telegram. Click here to join our channel and stay updated with the latest news.

Next