Advertisement

ಖ್ಯಾತ ಬಾಲಿವುಡ್‌ ಗಾಯಕಿ ಮಧುಶ್ರೀಗೆ ಸಿದ್ದಶ್ರೀ ರಾಷ್ಟ್ರೀಯ ಪ್ರಶಸ್ತಿ ವಿತರಣೆ

09:14 AM Jan 16, 2020 | Suhan S |

ಅಮೀನಗಡ (ಬಾಗಲಕೋಟೆ): ಸುಕ್ಷೇತ್ರ ಸಿದ್ದನಕೊಳ್ಳದಲ್ಲಿ ನಡೆದ ಸಿದ್ದಶ್ರೀ ರಾಷ್ಟ್ರೀಯ ಉತ್ಸವ  ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಬಾಲಿವುಡ್ ಗಾಯಕಿ ಮಧುಶ್ರೀ ಭಟ್ಟಾಚಾರ್ಯ ಅವರಿಗೆ  ಸಂಗೀತ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಸಿದ್ದಶ್ರೀ ರಾಷ್ಟ್ರೀಯ ಪ್ರಶಸ್ತಿ ವಿತರಣೆ ಮಾಡಲಾಯಿತು.

Advertisement

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಖ್ಯಾತ  ಬಾಲಿವುಡ್ ಗಾಯಕಿ ಮಧುಶ್ರೀ ಭಟ್ಟಾಚಾರ್ಯ, ಸಿದ್ದನಕೊಳ್ಳ ಕ್ಷೇತ್ರವು ಧಾರ್ಮಿಕವಾಗಿರುವ ಪವಿತ್ರ ಕ್ಷೇತ್ರವಾಗಿದೆ. ನಾನು ಕಳೆದ ವರ್ಷ ಕೂಡಾ ಸಿದ್ದಶ್ರೀ ಉತ್ಸವದಲ್ಲಿ ಈ ಕ್ಷೇತ್ರಕ್ಕೆ ಬಂದು ಹೋಗಿದ್ದು ಇಲ್ಲಿಯ ಶಾಂತಿ ನೆಮ್ಮದಿ ಮತ್ತು ಸಿದ್ದನಕೊಳ್ಳದ ನಿರಂತರ ದಾಸೋಹ ಮಠದಲ್ಲಿ ಡಾ.ಶಿವಕುಮಾರ್ ಶ್ರೀಗಳು ಸಮಾಜ ಸೇವೆ ಜೊತೆಯಲ್ಲಿ ಕಲಾವಿದರನ್ನು ಪ್ರೋತ್ಸಾಹ ನೀಡುವಂತ ಕೆಲಸ ಮಾಡುತ್ತಿದ್ದಾರೆ ಇದು ಶ್ಲಾಘನೀಯ ಕಾರ್ಯ ಎಂದರು.

ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ನನಗೆ ಸಿದ್ದನಕೊಳ್ಳದ ಪವಿತ್ರ ಕ್ಷೇತ್ರದಲ್ಲಿ ಸಿದ್ದಶ್ರೀ ರಾಷ್ಟ್ರೀಯ ಪ್ರಶಸ್ತಿ ವಿತರಣೆ ಮಾಡಿದ್ದು ತುಂಬಾ ಸಂತಸವಾಗಿದೆ. ಪ್ರಶಸ್ತಿ ಜೊತೆಗೆ ಬಂದಿರುವ 25 ಸಾವಿರ ರೂ,ನಗದು ಹಣವನ್ನು ಇತ್ತೀಚಿಗೆ ಹುತಾತ್ಮರಾದ ರೋಣ ತಾಲೂಕಿನ ಕರುಮುಡಿ ಗ್ರಾಮದ ವೀರಯೋಧ ವಿರೇಶ ಕುರಹಟ್ಟಿ ಅವರ ಕುಟುಂಬಕ್ಕೆ ನೀಡುತ್ತೇನೆ. ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಯೋಧರ ಸೇವೆ ಅಪಾರ. ಹುತಾತ್ಮರಾದ ಯೋಧರ ಕುಟುಂಬಗಳಿಗೆ ಪ್ರತಿಯೊಬ್ಬರು ಗೌರವ ಸಲ್ಲಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಹುತಾತ್ಮ ವೀರಯೋದ ವಿರೇಶ ಕುರಹಟ್ಟಿ ಅವರ ಕುಟುಂಬಕ್ಕೆ ಖ್ಯಾತ ಬಾಲಿವುಡ್‌ ಗಾಯಕಿ ಮಧುಶ್ರೀ ಭಟ್ಟಾಚಾರ್ಯ ಅವರು ಸನ್ಮಾನ ಮಾಡಿ 25 ಸಾ‌ವಿರ ರೂ,ಹಣವನ್ನು ನೀಡಿದರು.

ಸಮಾರಂಭದಲ್ಲಿ ಸಿದ್ದನಕೊಳ್ಳದ ಧರ್ಮಾಧಿಕಾರಿ ಡಾ.ಶಿವಕುಮಾರ ಶ್ರೀಗಳು, ಗುಳೇದಗುಡ್ಡ ಮರಡಿ ಮಠದ ಕಾಡಸಿದ್ದೇಶ್ವರ ಶ್ರೀಗಳು, ಬಾಗಲಕೋಟೆ ಜಿಪಂ ಅಧ್ಯಕ್ಷೆ ಬಾಯಕ್ಕೆ ಮೇಟಿ,ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ,ಡಾ.ಸಿ.ಕೆ.ಮೌಲಾ ಶರೀಫ್,ಕಸಾಪ ಅಧ್ಯಕ್ಷ ಮಹಾಂತೇಶ ಹಳ್ಳೂರ,ಯುವ ನಟ ಪ್ರವೀಣ ಪತ್ರಿ ಸೇರಿದಂತೆ ಇನ್ನಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next