Advertisement

ಸಿದ್ದರಾಮೋತ್ಸವಕ್ಕೆ ಬಾದಾಮಿ ತಾಲೂಕಿನಿಂದ 25 ಸಾವಿರ ಕಾರ್ಯಕರ್ತರು ಭಾಗಿ: ಹೊಳಬಸು ಶೆಟ್ಟರ

02:28 PM Aug 02, 2022 | Team Udayavani |

ಬಾಗಲಕೋಟೆ: ಆ.3 ರಂದು  ದಾವಣಗೆರೆಯಲ್ಲಿ ನಡೆಯಲಿರುವ ಮಾಜಿ ಸಿಎಂ, ಕ್ಷೇತ್ರದ ಶಾಸಕರಾಗಿರುವ ಸಿದ್ದರಾಮಯ್ಯನವರ ಜನ್ಮದಿನದ ಅಮೃತ ಮಹೋತ್ಸವ ಸಮಾರಂಭಕ್ಕೆ ಬಾದಾಮಿ ತಾಲೂಕಿನಿಂದ 25 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಯುವ ಮುಖಂಡ ಹೊಳಬಸು ಶೆಟ್ಟರ ಹೇಳಿದರು.

Advertisement

ಅವರು ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಬಾದಾಮಿಯಿಂದ ಒಟ್ಟು 600 ಕ್ಕೂ ಹೆಚ್ಚಿನ ವಾಹನಗಳಲ್ಲಿ ಜನತೆ ತೆರಳಲಿದ್ದು, ಅವರಿಗೆ ಮಾರ್ಗ ಮಧ್ಯದಲ್ಲಿ ಉಪಹಾರದ ವ್ಯವಸ್ಥೆಯನ್ನು ಕೂಡಾ ಅಲ್ಲಿನ ಅಭಿಮಾನಿಗಳು ಮಾಡಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಸಾಹೇಬ್ರು ಸಿಎಂ ಆಗಿದ್ದಾಗ ಮಾಡಿದ ಅಭಿವೃದ್ದಿ ಮತ್ತು ಜನಪರ ಕಾರ್ಯಗಳು ಜನ ಮಾನಸದಲ್ಲಿ ಉಳಿದಿವೆ. ಹೀಗಾಗಿ ಜನರು ಲಕ್ಷಾಂತರ ಸಂಖ್ಯೆಯಲ್ಲಿ ಪಾಲ್ಗೋಳ್ಳಲಿದ್ದಾರೆ ಎಂದು ತಿಳಿಸಿದರು.

ವಾಹನಗಳ ವ್ಯವಸ್ಥೆ ಮಾಡಲಾಗಿದೆ, ಅದೇ ರೀತಿ ಬಾದಾಮಿ ಮತಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ನಂತರ ಐತಿಹಾಸಿಕ, ಧಾರ್ಮಿಕ ತಾಣಗಳು, ವಿವಿಧ ಸಮುದಾಯಗಳ ಸೇರಿದಂತೆ ಅಭಿವೃದ್ದಿಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದು ಅವುಗಳನ್ನು ಅನುಷ್ಟಾನಗೊಳಿಸುವ  ಮೂಲಕ  ಬಾದಾಮಿ ಕ್ಷೇತ್ರದ ಜನರಿಗೆ ಭಾಗ್ಯವಿಧಾತರಾಗಿದ್ದಾರೆ ಎಂದು ಹೇಳಿದರು.

ಬ್ಲಾಕ್ ಅಧ್ಯಕ್ಷ ಹನಮಂತಗೌಡ ಯಕ್ಕಪ್ಪನವರ ಮಾತನಾಡಿ‌, ಮಾಜಿ ಸಿಎಂ ಹಾಗೂ ಕ್ಷೇತ್ರದ ಶಾಸಕಾಗಿರುವ ಸಿದ್ದರಾಮಯ್ಯ ಅವರ ಹುಟ್ಟು ಹಬ್ಬಕ್ಕೆ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

Advertisement

ಮುಚಖಂಡಯ್ಯ ಹಂಗರಗಿ, ಡಾ.ಎಂ.ಎಚ್. ಚಲವಾದಿ,  ಪಿ.ಆರ್.ಗೌಡರ, ರಾಜಮ್ಮದ ಬಾಗವಾನ, ಮಹೇಶ ಹೊಸಗೌಡರ, ಮಲ್ಲಣ್ಣ ಯಲಿಗಾರ ಮಾತನಾಡಿ,ಸಿದ್ದರಾಮಯ್ಯನವರು ಹುಟ್ಟು ಹಬ್ಬವನ್ನು ಎಂದಿಗೂ ಆಚರಿಸಿ ಕೊಂಡವರಲ್ಲ ಆದರೆ ಇವರ ಜನ್ಮೋತ್ಸವ ಮತ್ತು ನಮ್ಮ ಕಾಂಗ್ರೆಸ್ ಪಕ್ಷವು ಕೂಡಾ 75 ವಸಂತಗಳನ್ನು ಪೂರೈಸಿದ್ದರ ಹಿನ್ನಲೆಯಲ್ಲಿ ಈ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದೆ ಎಂದರು.

ರಾಜ್ಯ ಹೊರ ರಾಜ್ಯಗಳಲ್ಲಿಂದ ಸಿದ್ದರಾಮಯ್ಯ ಅವರ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಅದೇ ರೀತಿ ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲೂಕಿನಿಂದ ಲಕ್ಷಾಂತರ ಜನರು ಭಾಗವಹಿಸುವ ಮೂಲಕ ಕಾಂಗ್ರೆಸ್  ಪಕ್ಷದ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿ ಬರುವ ದಿನಗಳಲ್ಲಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಅಭಿವೃದ್ದಿಗೆ ದಿಕ್ಸೂಚಿ ಆಗಲಿದೆ ಎಂದರು.

ಎಫ್.ಆರ್. ಪಾಟೀಲ, ಅಶೋಕ ಕೋಟನಕರ, ಶಶಿ ಉದಗಟ್ಟಿ, ನಾಗಪ್ಪ ಅಡಪಟ್ಟಿ, ಮಧು ಯಡ್ರಾಮಿ, ಮಹಾಂತೇಶ ಹಟ್ಟಿ, ವೆಂಕಣ್ಣ ಹೊರಕೇರಿ, ಹನಮಂತ ನರಗುಂದ,  ಶೇಖಪ್ಪ ಪವಾಡಿನಾಯ್ಕರ್, ಲಕ್ಷ್ಮಣ್ ದಾದನಟ್ಟಿ ಸೇರಿದಂತೆ ಇನ್ನಿತರು ಮುಖಂಡರು ಉಪಸ್ಥಿತರಿದ್ದರು.

ದಾವಣಗೆರೆಯಲ್ಲಿ ಆ.3 ರಂದು ಆಯೋಜಿಸಲಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಸಾಹೇಬ್ರ  ಅಮೃತ ಮಹೋತ್ಸವ  ಮುಗಿದ ನಂತರ ಬಾದಾಮಿಯಲ್ಲಿಯೂ ಒಂದು ದಿನ ಜನ್ಮದಿನದ ಕಾರ್ಯಕ್ರಮವನ್ನು ಆಯೋಜಿಸಲು ಮುಖಂಡರೊಂದಿಗೆ ಸೇರಿ ನಿರ್ಣಯಿಸಲಾಗಿದೆಹೊಳಬಸು ಶೆಟ್ಟರ, ಕಾಂಗ್ರೆಸ್ ಯುವ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next