Advertisement

ರಾಜೀನಾಮೆ ನೀಡದ ಭಂಡರಿಗೆ ಜನರೇ ಬುದ್ಧಿ ಕಲಿಸುತ್ತಾರೆ :ಈಶ್ವರಪ್ಪ ವಿರುದ್ಧ ಸಿದ್ದು ವಾಗ್ದಾಳಿ

07:01 PM Apr 13, 2022 | Team Udayavani |

ಬೆಳಗಾವಿ : ತಮ್ಮದೇ ಪಕ್ಷದ ಕಾರ್ಯಕರ್ತನಿಂದ ಕಮಿಷನ್ ಕೇಳಿದ ಸಚಿವ ಈಶ್ವರಪ್ಪ ರಾಕ್ಷಸಿ ಪ್ರವೃತ್ತಿಯುಳ್ಳವನು. ರಾಜೀನಾಮೆ ನೀಡದ ಭಂಡರಿಗೆ ಜನರೇ ಬುದ್ಧಿ ಕಲಿಸುತ್ತಾರೆ
ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

Advertisement

ಬೆಳಗಾವಿಯಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಸಚಿವ ಈಶ್ವರಪ್ಪ ಹೇಳದೆ ಯಾರೂ ಕೆಲಸ ಮಾಡುವದಿಲ್ಲ. ಈ ವಿಷಯದಲ್ಲಿ ಹಿಂಡಲಗಾ ಗ್ರಾಮ ಪಂಚಾಯತ್
ಅಧ್ಯಕ್ಷರು ಹೇಳಿರುವುದು ಸತ್ಯ ಎಂದರು.

ಸಂತೋಷ ಪಾಟೀಲ ಕಳೆದ ನವಂಬರ್‌ ನಲ್ಲಿಯೇ ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದರು. ಆಗ ಏಕೆ ಕ್ರಮಕೈಗೊಳ್ಳಲಿಲ್ಲ. ಸಂತೋಷ ಪಾಟೀಲ ಸಂಬಂಧ ಪಟ್ಟ ಎಲ್ಲ
ಸಚಿವರಿಗೆ ಪತ್ರ ಬರೆದಿದ್ದರು.. ಬಿ ಜೆ ಪಿ ನಾಯಕರ ಗಮನಕ್ಕೆ ತಂದಿದ್ದರು.. ಆದರೆ ಯಾರೂ ಇದಕ್ಕೆ ಪ್ರತಿಕ್ರಿಯಿಸಲಿಲ್ಲ. ಇದು ಸರಕಾರದ ಭಂಡತನ ಎಂದು ಟೀಕಿಸಿದರು.

ನಾನು ರಾಜೀನಾಮೆ ಕೊಡುವುದಿಲ್ಲ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಭಂಡರು, ಮಾನ ಮರ್ಯಾದೆ ಇಲ್ಲದವರಿಗೆ ಏನೂ ಹೇಳಲು ಆಗುವದಿಲ್ಲ. ಜನರೇ ಅವರಿಗೆ ಪಾಠ
ಕಲಿಸುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ : ಯಡಿಯೂರಪ್ಪ ಸಮ್ಮುಖದಲ್ಲೇ ತೇರದಾಳ ಬಿಜೆಪಿ ಭಿನ್ನಮತ ಸ್ಫೋಟ

Advertisement

ಸಚಿವ ಈಶ್ವರಪ್ಪ ಅವರು ಸಂತೋಷ ಪಾಟೀಲ ಅವರಿಗೆ ಕಾಮಗಾರಿಗಳ ಕಾರ್ಯದೇಶ ನೀಡಿಲ್ಲ. ಆದರೆ ಸಾಲ ಸೋಲ ಮಾಡಿ ಸಂತೋಷ ಕೆಲಸ ಮಾಡಿದ್ದಾರೆ. ಪತ್ನಿಯ ಒಡವೆಗಳನ್ನು ಅಡವಿಟ್ಟು ಸಾಲ ಮಾಡಿದ್ದಾರೆ. ಇಷ್ಟಾದರೂ ಈಶ್ವರಪ್ಪ ಕಾಮಗಾರಿಯ ಹಣ ನೀಡಲಿಲ್ಲ. ಬದಲಾಗಿ ಶೇ.40 ಕಮಿಷನ್ ಕೇಳಿದರು. ಇದು ರಾಕ್ಷಸಿ ಪ್ರವೃತ್ತಿಗೆ ಉದಾಹರಣೆ ಎಂದು
ಟೀಕಾಪ್ರಹಾರ ನಡೆಸಿದರು.

ಸಂತೋಷ ಪಾಟೀಲ ಅವರು ಕಮಿಷನ್ ಬಗ್ಗೆ ಪ್ರಧಾನಿಗೆ ದೂರು ನೀಡಿದರು. ಇದಾದ ಮೇಲೆ ನರೇಂದ್ರ ಮೋದಿ ಅವರು ತನಿಖೆ ಮಾಡಿಸಲಿಲ್ಲ. ಮುಖ್ಯಮಂತ್ರಿಗಳಿಗೆ ಪರಿಶೀಲಿಸಿ
ಕ್ರಮಕೈಗೊಳ್ಳುವಂತೆ ಸೂಚಿಸಲಿಲ್ಲ. ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಲು ಅವಕಾಶ ಕೊಡದೆ ಸದನವನ್ನೇ ಮುಂದೂಡಿದರು ಎಂದು ಸಿದ್ದರಾಮಯ್ಯ ಸರಕಾರದ ವಿರುದ್ದ
ಹರಿಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next