ಬಾದಾಮಿ: ಮುಖ್ಯಮಂತ್ರಿ ಯಡಿಯೂರಪ್ಪ ಕುರ್ಚಿ ಅಲುಗಾಡಲು ಶುರುವಾಗಿದ್ದು ಸದ್ಯ ಬಿಎಸ್ ವೈ ತನ್ನ ಕುರ್ಚಿ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಇದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
. ಯಡಿಯೂರಪ್ಪ ಕುರ್ಚಿ ಅಲುಗಾಡುತ್ತಿದ್ದು, ಅದು ಅಲುಗಾಡಲು ಶುರುವಾಗಿ ಬಹಳ ದಿನವಾಯ್ತು ಎಂದು ಬಾದಾಮಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬಾದಾಮಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರಿಗೆ ಕುರ್ಚಿ ಉಳಿಸಿಕೊಳ್ಳುವುದು. ಅವರ ಮಗ ದುಡ್ಡು ಹೊಡೆಯುವುದು. ಇವೆರಡೆ ಕೆಲಸ ಮಾಡ್ತಿದ್ದಾರೆ. ನಾನು ಅಸೆಂಬ್ಲಿಯಲ್ಲಿ ಈ ವಿಷಯ ರೈಜ್ ಮಾಡಿದ್ದೆ. ಕುರ್ಚಿ ಉಳಿಸಿಕೊಳ್ಳಲು ಏನ್ಮಾಡಬೇಕೆನ್ನುವ ಪ್ರಯತ್ನ ಮಾಡ್ತಿದ್ದಾರೆ. ಅಕ್ರಮ ಗಣಿಗಾರಿಕೆ ರಾಜ್ಯದಲ್ಲೇ ನಡೀತಿದೆ. ಯಡಿಯೂರಪ್ಪ ಕ್ಷೇತ್ರ ಶಿವಮೊಗ್ಗ, ಈಶ್ವರಪ್ಪ ಕ್ಷೇತ್ರ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲೂ ಅಕ್ರಮ ಗಣಿಗಾರಿಕೆ ನಡೀತಿದೆ ಎಂದು ಗಂಭೀರ ಆರೋಪ ಮಾಡಿದರು.
ಇದನ್ನೂ ಓದಿ :ಪ್ರವಾಸಿ, ಧಾರ್ಮಿಕ ಸ್ಥಳದಲ್ಲಿ ಜನಜಂಗುಳಿ; ಕೋವಿಡ್ 3ನೇ ಅಲೆಗೆ ಆಹ್ವಾನ: ಐಎಂಎ ಕಳವಳ
ಇತ್ತೀಚಿಗೆ ಚಿಕ್ಕಬಳ್ಳಾಪುರ ಹಾಗೂ ಶಿವಮೊಗ್ಗದಲ್ಲಿ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಸ್ಪೋಟದಿಂದ ಹಲವಾರು ಮಂದಿ ಸಾವನ್ನಪ್ಪಿದರು ಸರಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎಂದರು.
ನಾನು ಬಾದಾಮಿಯಿಂದಲೇ ಸ್ಪರ್ಧಿಸೋದು ಎಂದು ಬೆಂಗಳೂರಿನಲ್ಲೆ ಹೇಳಿದಿನಿ.ಮುಂದಿನ ಚುನಾವಣೆ ಸ್ಪರ್ಧೆ ಬಾದಾಮಿಯಿಂದಲೇ ಎಂದು ಸಿದ್ದರಾಮಯ್ಯ ಹೇಳಿದರು.