Advertisement

ಬಹಿರಂಗ ಚರ್ಚೆಗೆ ಬರಲು ಬೊಮಾಯಿಗೆ ಧಮ್ಮಿಲ್ಲ : ಆಡಳಿತ ಪಕ್ಷದ ವಿರುದ್ಧ ಗುಡುಗಿದ ಸಿದ್ದು

01:13 PM Dec 09, 2021 | Team Udayavani |

ಮೈಸೂರು: ನನ್ನ ಆಡಳಿತದಲ್ಲಿ 5 ವರ್ಷಗಳ ವರ್ಷಕ್ಕೆ 3 ಲಕ್ಷದಂತೆ 15 ಲಕ್ಷ ಮನೆ ನೀಡಿದ್ದೆ. ಕುಮಾರಸ್ವಾಮಿ, ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ 3.5 ವರ್ಷಗಳ ಆಡಳಿತದಲ್ಲಿ ಒಂದು ಮನೆ ಕೊಟ್ಟಿಲ್ಲ. ಈ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಿದೆ. ಅವರಿಗೆ ಧಮ್ಮಿಲ್ಲ. ಆದರೂ ಅಭಿವೃದ್ಧಿಗೆ ಮತ ನೀಡಿ
ಎಂದು ನಾಚಿಕೆ ಇಲ್ಲದೇ ಕೇಳುತ್ತಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹರಿಹಾಯ್ದರು.

Advertisement

ನಗರದಲ್ಲಿನ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷಕ್ಕೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇದೆ. ಬಿಜೆಪಿ ಇದಕ್ಕೆ ವಿರುದ್ಧವಾಗಿದೆ. ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೊಡುಗೆ ಏನು? ಎಂದು ಪ್ರಶ್ನಿಸಿದರು. ಬಿಜೆಪಿ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ವಿರೋಧಿಯಾಗಿದ್ದು,
ಹಿಂದುಳಿದ ವರ್ಗಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಬಿಜೆಪಿ ಸರ್ಕಾರದ ಕೊಡುಗೆ ಶೂನ್ಯ ಎಂದು ಹೇಳಿದರು.

ಕುಮಾರಸ್ವಾಮಿ ಸೇರಿ ಯಾರ ಬಗ್ಗೆ ದ್ವೇಷ ಇಲ್ಲ. ರಾಜ್ಯದ ಸಮಸ್ಯೆಗಳ ಮೇಲೆ ರಾಜಕೀಯ ಮಾಡ  ಬೇಕು. ಸಿದ್ಧಾಂತದ ಮೇಲೆ ಭಿನ್ನಾಭಿಪ್ರಾಯ ಇರುತ್ತೆ. ಒಂದು ಕಡೆ ಕುಮಾರಸ್ವಾಮಿ ಆರ್‌ಎಸ್‌ಎಸ್‌ ಬೈಯುವುದು, ಬಿಜೆಪಿಯೊಂದಿಗೆ ಸೇರಿ ಆಡಳಿತ ನಡೆಸುವುದು. ಜಾತ್ಯತೀತ ಪಕ್ಷದವರು ಕೋಮುವಾದಿಗಳೊಂದಿಗೆ ಸೇರಬಹುದೆ ಎಂದು ಪ್ರಶ್ನಿಸಿದರು.

ಮೀಸಲಾತಿ: ರಾಜೀವ್‌ ಗಾಂಧಿ ಅವರು 73 ಮತ್ತು 74ನೇ ವಿಧಿಗಳಿಗೆ ತಿದ್ದುಪಡಿ ತಂದು ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ಕಲ್ಪಿಸಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಲ್ಲಿ ಮೀಸಲಾತಿ ನೀಡಿದರು. ಹಿಂದುಳಿದ ವರ್ಗಗಳಿಗೆ ಶೇ. 31, ದಲಿತರಿಗೆ ಶೇ. 18 ಮೀಸಲಾತಿ ಕೊಟ್ಟದ್ದು ಕಾಂಗ್ರೆಸ್‌. ಮನಮೋಹನ ಸಿಂಗ್‌ ಅವರು ಪ್ರಧಾನ ಮಂತ್ರಿಯಾಗಿದ್ದಾಗ ನರೇಗಾ ತಂದರು. ಆಹಾರ ರಕ್ಷಣೆ ಕಾಯಿದೆ, ಮಾಹಿತಿ ಹಕ್ಕು, ಕಡ್ಡಾಯ ಶಿಕ್ಷಣ ಕಾಯಿದೆಗಳನ್ನು ಜಾರಿಗೊಳಿಸಿದರು. ಆದರೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಕೊಡುವುದು ಅಸಂವಿಧಾನಿಕ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ರಾಮ ಜೋಯಿಸರು ಸುಪ್ರೀಂಕೋರ್ಟಿನಲ್ಲಿ ದಾವೆ ಹೂಡಿದ್ದರು. ಹಾಗಾಗಿ ಬಿಜೆಪಿ
ಮತ್ತು ಜೆಡಿಎಸ್‌ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿವೆ ಎಂದು ಟೀಕಿಸಿದರು.

ಇದನ್ನೂ ಓದಿ : ಮೊದಲ ಡೋಸ್ ವ್ಯಾಕ್ಸಿನೇಷನ್ ನಲ್ಲಿ ಕರ್ನಾಟಕ ನಂ. 1 ಸ್ಥಾನಕ್ಕೆ: ಸಚಿವ ಸುಧಾಕರ್

Advertisement

ಸಾಲ: ಸ್ವಾತಂತ್ರ್ಯ ಬಂದಾಗಿಂದ 2014ರ ತನಕ ದೇಶದ ಒಟ್ಟು ಸಾಲ 51 ಲಕ್ಷದ 33 ಸಾವಿರ ಕೋಟಿ ಸಾಲಯಿತ್ತು. ಈಗ ಒಟ್ಟು ಸಾಲ 135 ಲಕ್ಷ ಕೋಟಿ, 8 ವರ್ಷಗಳಲ್ಲಿ 82 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇದನ್ನು ಅದಕ್ಷತೆ ಎಂದು ಹೇಳದೆ ಮತ್ತೇನೆಂದು ಹೇಳಬೇಕು? ತೈಲಬೆಲೆ ಹೆಚ್ಚಾಗಿದೆ. ಪಿಎಂ ಕೇರ್‌ ಫ‌ಂಡ್‌ ಏನಾಯಿತು? ನಿರುದ್ಯೋಗ ಸಮಸ್ಯೆ ಯಾಕೇ ಹೆಚ್ಚಾಗಿದೆ? ಇವುಗಳ
ಬಗ್ಗೆ ವಿತ್ತ ಸಚಿವರು ಉತ್ತರ ನೀಡಬೇಕು ಎಂದರು. ಮೇಕೆದಾಟು ಯೋಜನೆ ಶೀಘ್ರ ಆರಂಭಿಸುವಂತೆ ಒತ್ತಾಯಿಸಿ ಮೇಕೆದಾಟಿನಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಡಿ.ಕೆ.ಶಿವಕುಮಾರ್‌ ನಾನು ಇಬ್ಬರು ಸೇರಿ ತೀರ್ಮಾನಿಸಿದ್ದೇವೆ. ಮೇಕೆದಾಟು ಸಮಗ್ರ ಯೋಜನಾ ವರದಿ(ಡಿಪಿಆರ್‌) ಮಾಡಿದ್ದು ಸಿದ್ದರಾಮಯ್ಯ ಸರ್ಕಾರ. ವಿಳಂಬ ಮಾಡದೇ ಕಾಮಗಾರಿ
ಆರಂಭಿಸುವಂತೆ ಒತ್ತಾಯಿಸಿ ಪಾದಯಾತ್ರೆ ಮಾಡಲಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಬಿಜೆಪಿ ಕಾಲದಲ್ಲಿ ಅದಾನಿ ಏಷ್ಯಾದಲ್ಲೇ ನಂಬನ್‌ ಒನ್‌ ಶ್ರೀಮಂತಆಗಿದ್ದಾನೆ. ಬಡ ಬೋರೇಗೌಡ ಶ್ರೀಮಂತ ಆಗಿದ್ದಾನಾ? ರಾಜ್ಯದಲ್ಲಿ ಕಳೆದ ಮೂರುವರೆ ವರ್ಷದಲ್ಲಿ ಬಡವರಿಗೆ ಒಂದೇ ಒಂದು ಮನೆ ನೀಡಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯ ಮಾಡದಿದ್ದರೂ ಅಭಿವೃದ್ಧಿಗೆ ಓಟು ಕೊಡಿ ಎಂದು ನಾಚಿಕೆ ಬಿಟ್ಟು ಕೇಳುತ್ತಿದ್ದಾರೆ.

ಈ ಸಂದರ್ಭ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ, ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್‌, ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್‌, ನಗರಾಧ್ಯಕ್ಷ ಆರ್‌. ಮೂರ್ತಿ, ಮುಖಂಡರಾದ ಬಸವರಾಜು, ಡಿ.ರವಿ ಶಂಕರ್‌, ಕೆ.ಮರೀಗೌಡ, ಎಂ.ಲಕ್ಷ್ಮಣ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next