Advertisement
ಹುಣಸೂರು ಬೈಪಾಸ್ ರಸ್ತೆಯಲ್ಲಿ ನಿರ್ಮಿಸಲುದ್ದೇಶಿಸಿರುವ ಕಾವೇರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ತಮ್ಮ ಅವಧಿಯಲ್ಲಿ ಹಳ್ಳಿಜನರಿಗೆ ಸೌಲಭ್ಯ ಕಲ್ಪಿಸಿದಲ್ಲಿ ಅಭಿವೃದ್ದಿ ಕಾಣಬಹುದೆಂಬ ದೃಷ್ಟಿಯಿಂದ ತಾವು ಆರೋಗ್ಯ ಕ್ಷೇತ್ರ ಸೇರಿದಂತೆ ಎಲ್ಲ ಜಾತಿ, ಧರ್ಮದವರಿಗೂ ಸಮನಾಗಿ ಸೌಲಭ್ಯ ಕಲ್ಪಿಸಿದ್ದೆ, ಎಂದೂ ಸಹ ಧರ್ಮದ ಹೆಸರಲ್ಲಿ ರಾಜಕಾರಣ ನಡೆಸಿರಲಿಲ್ಲ. ಧರ್ಮವನ್ನು ಮನೆಯಲ್ಲಿ ಆಚರಿಸಿಕೊಳ್ಳಲಿ ಆದರೆ ಆಡಳಿತ ನಡೆಸುವವರು ಧರ್ಮದ ಹೆಸರಲ್ಲಿ ರಾಜಕಾರಣ ಮಾಡಿದರೆ ಅದು ಸಂವಿಧಾನಕ್ಕೆ ಅಪಚಾರವೆಸಗಿದಂತೆ ಎಂದರು.
Related Articles
Advertisement
ಆಸ್ಪತ್ರೆಯ ಮುಖ್ಯಸ್ಥ ಡಾ.ಲೋಹಿತ್ ಮಾತನಾಡಿ ವರ್ಷದಲ್ಲಿ ಕೆಲ ಬಡವರಿಗಾಗಿ 1200 ಆಪರೇಷನ್ ನಡೆಸಿದ್ದು, ಕೋವಿಡ್ ಸಂದರ್ಭದಲ್ಲಿ ಉಚಿತ ಸೇವೆಯೂ ನೀಡಿದ್ದೇವೆ. ಹುಣಸೂರು ಸುತ್ತಮುತ್ತಲಿನ ನಾಲ್ಕು ತಾಲೂಕನ್ನು ಕೇಂದ್ರವಾಗಿಸಿಕೊಂಡು ನೂರು ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ನಿರ್ಮಿಸಬೇಕೆಂದು ಆರಂಭಿಸಲಾಗುತ್ತಿದ್ದು, ಆಸ್ಪತ್ರೆಯಲ್ಲಿ ತೀವ್ರ ನಿಗಾಘಟಕ, ತುರ್ತುಚಿಕಿತ್ಸೆ, ಸಿಟಿ ಸ್ಕ್ಯಾನಿಂಗ್, ಸುಸಜ್ಜಿತ ಆಪರೇಷನ್ ಥಿಯೇಟರ್ ಹಾಗೂ 24*7 ಮಾದರಿಯಲ್ಲಿ ನುರಿತ ತಜ್ಞರಾದ ಡಾ.ವಿಶ್ವಾಸ್, ಡಾ. ಅರ್ಜುನ್, ಡಾ.ಸೋಮಶೇಖರ್ ಮತ್ತಿತರರು ತಮ್ಮೊಂದಿಗೆ ಸೇವೆ ನೀಡಲಿದ್ದು, ಬಳಸಿಕೊಳ್ಳುವಂತೆ ಮನವಿ ಮಾಡಿ, ಆಸ್ಪತ್ರೆ ನಿರ್ಮಾಣದ ನಂತರದಲ್ಲಿ ಸಿದ್ದರಾಮಯ್ಯ ನರ್ಸಿಂಗ್ ಕಾಲೇಜು ಆರಂಭಿಸಿ, ಬಡ ವಿದ್ಯಾರ್ಥಿಗಳಿಗೆ ನೆರವಾಗುವುದಾಗಿ ವಾಗ್ದಾನ ಮಾಡಿದರು. ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ದಾವಣಗೆರೆಯ ತಿಪ್ಪಣ್ಣ, ಶಂಭಯ್ಯ, ಮೇಠಿ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಗೋವಿಂದೇಗೌಡ, ಮುಖಂಡರಾದ ರವಿಶಂಕರ್, ನಗರಸಭೆ ಅಧ್ಯಕ್ಷ ದೇವನಾಯ್ಕ, ಮಾಜಿ ಅಧ್ಯಕ್ಷರಾದ ಸೌರಭಸಿದ್ದರಾಜು, ಅನುಷಾ, ಹುಡಾ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ರಾಕೇಶ್‌ಪಾಪಣ್ಣ, ದಸಂಸದ ಹರಿಹರ ಆನಂದಸ್ವಾಮಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದರು. ಎರಡು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಸಿದ್ದುಗೆ ಆಹ್ವಾನ: ಅಭಿಮಾನಿಗಳು ಸಿದ್ದರಾಮಯ್ಯರನ್ನು ತಮ್ಮ ಕ್ಷೇತ್ರಕ್ಕೆ ಕರೆಯುತ್ತಿದ್ದಾರೆ, ತಮ್ಮ ಯಶಸ್ಸಿಗೆ ಕಾರಣರಾಗಿರುವ ಸಿದ್ದರಾಮಯ್ಯನವರು ಅರಸರ ಕರ್ಮಭೂಮಿಯಿಂದ ಸ್ಪರ್ಧಿಸುವುದಾದಲ್ಲಿ ತುಂಬು ಹೃದಯತಿಂದ ಸ್ವಾಗತಿಸುವುದಾಗಿ ಸಭೆಯಲ್ಲಿ ಶಾಸಕ ಎಚ್.ಪಿ.ಮಂಜುನಾಥ್ ಘೋಷಿಸಿದರು.