Advertisement

ಸಿದ್ದು ಅಸ್ತ್ರಕ್ಕೆ ಎಚ್‌ಡಿಡಿ ಪ್ರತ್ಯಸ್ತ್ರ !

01:39 AM Jun 26, 2019 | sudhir |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಅಹಿಂದ’ ಮತಗಳ ಕ್ರೋಡೀಕರಣಕ್ಕೆ ಮುಂದಾಗಿರುವ ಬೆನ್ನಲ್ಲೇ ಇದಕ್ಕೆ ಪ್ರತ್ಯುತ್ತರವಾಗಿ ತಮ್ಮ ನೆಲೆ ಗಟ್ಟಿಗೊಳಿಸುವ ಕೆಲಸಕ್ಕೆ ಕೈ ಹಾಕಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು, ಅಹಿಂದ ಮತ ತಮ್ಮ ಕೈಜಾರದಂತೆ ಕಾರ್ಯತಂತ್ರ ರೂಪಿಸಿದ್ದಾರೆ.

Advertisement

ಇದರಿಂದಾಗಿ ರಾಜ್ಯ ರಾಜಕಾರಣದಲ್ಲಿ ಮತ್ತೂಮ್ಮೆ ಗುರು- ಶಿಷ್ಯರ ಹೋರಾಟ ನಡೆಯಲಿದ್ದು, ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಸರಕಾರಕ್ಕೆ ಸೀಮಿತವಾಗಿ ಎರಡೂ ಪಕ್ಷಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ರಂಗಕ್ಕೆ ಇಳಿದಿವೆ.

ಗೌಡರ ಕಾರ್ಯತಂತ್ರ
ಸಿದ್ದರಾಮಯ್ಯ ಅವರು ಮತ್ತೆ ಅಹಿಂದ ವರ್ಗದ ಕ್ರೋಡೀಕರಣಕ್ಕೆ ಚಾಲನೆ ನೀಡಿದರೆ ಅಲ್ಪಸಂಖ್ಯಾಕ, ಹಿಂದುಳಿದ ಮತ್ತು ದಲಿತ ಸಮುದಾಯದತ್ತ ಚಿತ್ತ ಹರಿಸಬಹುದು. ಸಮ್ಮಿಶ್ರ ಸರಕಾರ ಮುಂದುವರಿಸಿಕೊಂಡೇ ಕಾಂಗ್ರೆಸ್‌ ಸಚಿವರು-ಶಾಸಕರ ನೆರವಿನಿಂದ ಸಿದ್ದರಾಮಯ್ಯ ತಮ್ಮ ಬಲ ಹೆಚ್ಚಿಸಿಕೊಂಡು ಆ ಮೂಲಕ ಕಾಂಗ್ರೆಸ್‌ಗೆ ಮತಬ್ಯಾಂಕ್‌ ಗಟ್ಟಿಗೊಳಿಸಬಹುದು. ಜೆಡಿಎಸ್‌ ಈ ಹಂತದಲ್ಲಿ ಸುಮ್ಮನಿದ್ದರೆ ಆ ಸಮುದಾಯಗಳ ನಾಯಕರು ಸಿದ್ದರಾಮಯ್ಯ ಜತೆ ವಾಲಬಹುದು. ಭವಿಷ್ಯದಲ್ಲಿ ಜೆಡಿಎಸ್‌ಗೆ ಇದರಿಂದ ಸಂಕಷ್ಟ ಎದುರಾಗಬಹುದು ಎಂಬ ಆತಂಕ ದೇವೇಗೌಡರದ್ದು.

ಹೀಗಾಗಿ ತಮ್ಮ ಪಕ್ಷದಿಂದಲೂ ಜಾತಿವಾರು- ಸಮುದಾಯವಾರು ಮುಖಂಡರ ಸಭೆ, ವಿಧಾನಸಭೆ-ಲೋಕಸಭೆ ಚುನಾವಣೆಯಲ್ಲಿ ಸೋತವರ ಸಭೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಗೆದ್ದವರಿಗೆ ಸಮ್ಮಾನ, ಆಶ್ಚರ್ಯ ಎಂಬಂತೆ ಸೋತವರಿಗೂ ಅಭಿನಂದನೆ ಸಮಾವೇಶ ಆಯೋಜಿಸಿ ಪಕ್ಷ ನಿಮ್ಮನ್ನು ಗುರುತಿಸುತ್ತದೆ. ಪಕ್ಷ ನಿಮ್ಮ ಜತೆಗಿದೆ ಎಂಬ ಸಂದೇಶ ರವಾನೆ ಮಾಡುತ್ತಿದ್ದಾರೆ.

ನಿರಂತರ ಸಂಪರ್ಕ
ಸಿದ್ದರಾಮಯ್ಯ ಅವರು ದಿಲ್ಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಯವರನ್ನು ಭೇಟಿಮಾಡಿ ಬರುತ್ತಿದ್ದಂತೆ ಅಹಿಂದ ಮತಗಳ ಕ್ರೋಢೀಕರಣಕ್ಕೆ ಚಾಲನೆ ನೀಡಿರುವ ಬೆನ್ನಲ್ಲೇ ಮಾಜಿ ಪ್ರಧಾನಿ ದೇವೇಗೌಡ ಅವರು ಮಾಜಿ ಶಾಸಕರು ಹಾಗೂ ಜಿಲ್ಲಾ ಮಟ್ಟದ ನಾಯಕರ ಜತೆ ನಿರಂತರ ಸಂಪರ್ಕ ದಲ್ಲಿದ್ದಾರೆ. ಲೋಕಸಭೆ ಚುನಾವಣೆ ಸೋಲಿನ ಅನಂತರ ಆತಂಕಗೊಂಡಿದ್ದವರನ್ನು ಖುದ್ದಾಗಿ ದೂರ ವಾಣಿ ಮೂಲಕ ಸಂಪರ್ಕ ಮಾಡುತ್ತಿದ್ದಾರೆ. ವಾರದಲ್ಲಿ ಮೂರು ದಿನ ಪಕ್ಷದ ಕಚೇರಿಗೂ ಭೇಟಿ ನೀಡುತ್ತಿದ್ದಾರೆ.

Advertisement

– ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next