Advertisement

ಸಿದ್ದರಾಮೇಶ್ವರ ಜಯಂತಿ ಅದ್ಧೂರಿ ಆಚರಣೆಗೆ ನಿರ್ಧಾರ

10:14 AM Jan 09, 2019 | |

ಕಲಬುರಗಿ: ಶರಣ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿಯನ್ನು ಕಲಬುರಗಿ ನಗರ ಹಾಗೂ ತಾಲೂಕು ಕೇಂದ್ರಗಳಲ್ಲಿ ಜ. 15ರಂದು ಅದ್ಧೂರಿಯಾಗಿ ಆಚರಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ನಿರ್ಧರಿಸಲಾತು.

Advertisement

ಜ. 15ರಂದು ಬೆಳಗ್ಗೆ 11:30ಕ್ಕೆ ನಗರದ ಡಾ| ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಪೂಜೆ ನೆರವೇರಿಸುವ ಮೂಲಕ ಜಿಲ್ಲಾ ಮಟ್ಟದ ಜಯಂತಿ ಆಚರಿಸಲಾಗುವುದು. ಶಿಷ್ಟಾಚಾರದಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಚುನಾಯಿತ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು.

ಆಳಂದ ತಾಲೂಕಿನ ಮಾಡಿಯಳ ಅಲ್ಲಂಪ್ರಭು ಪೀಠದ ಪೂಜ್ಯ ಶಿವರಾಯ ಒಡೆಯರ ಅವರಿಗೆ ಸಾನ್ನಿಧ್ಯ ವಹಿಸಲು ಹಾಗೂ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರ ಜೀವನ ಚರಿತ್ರೆ ಕುರಿತು ನ್ಯಾಯವಾದಿ ಶಂಕರರಾವ ಜಿ.ಉಲ್ಲೂರ ಅವರಿಂದ ವಿಶೇಷ ಉಪನ್ಯಾಸ ಆಯೋಜಿಸಲು ಸಭೆ ಒಪ್ಪಿಗೆ ಸೂಚಿಸಿತು.

ಕಾರ್ಯಕ್ರಮದ ನಂತರ ಕಲಾ ತಂಡಗಳೊಂದಿಗೆ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರ ಭಾವಚಿತ್ರದ ಭವ್ಯ ಮೆರವಣಿಗೆ ಡಾ| ಎಸ್‌.ಎಂ. ಪಂಡಿತ ರಂಗಮಂದಿರದಿಂದ ಜಗತ್‌ ವೃತ್ತ-ಗೋವಾ ಹೋಟೆಲ್‌-ಕುಂಬಾರ ಗಲ್ಲಿ-ಶಾಸ್ತ್ರಿ ಚೌಕ್‌-ಭಗತ ಸಿಂಗ್‌ ಚೌಕ್‌ ಮಾರ್ಗವಾಗಿ ಬ್ರಹ್ಮಪುರ ವಡ್ಡರಗಲ್ಲಿಯಲ್ಲಿರುವ ಶಿವದಾಸ ಮಹಾರಾಜರ ಮಠದ ವರೆಗೆ ಸಂಚರಿಸಲು ನಿರ್ಧರಿಸಿತು.

ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಹಾಗೂ ಮೆರವಣಿಗೆಯಲ್ಲಿ ಭಾಗವಹಿಸುವವರಿಗೆ ಸೂಕ್ತ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಕಾರ್ಯಕ್ರಮ ಸ್ಥಳ ಮತ್ತು ಮೆರವಣಿಗೆ ಸಂಪನ್ನಗೊಳ್ಳುವ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು.

Advertisement

ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಸೂಕ್ತ ಪೊಲೀಸ್‌ ಬಂದೋಬಸ್ತ್ ಮಾಡಬೇಕು. ಇದಲ್ಲದೆ ಶಾಲಾ ಕಾಲೇಜುಗಳಲ್ಲಿ ಹಾಗೂ ಆಯಾ ತಾಲೂಕಿನಲ್ಲಿ ತಾಲೂಕು ಆಡಳಿತದಿಂದ ಜಯಂತಿ ಆಚರಣೆಗೆ ಕ್ರಮ ವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಭೀಮಾಶಂಕರ ತೆಗ್ಗೆಳ್ಳಿ ಅವರು ಸೂಚಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ ಅವರು ಜಯಂತಿ ಅಂಗವಾಗಿ ಇಲಾಖೆ ಕೈಗೊಂಡ ಪೂರ್ವಸಿದ್ಧತೆ ಬಗ್ಗೆ ಸಭೆಗೆ ವಿವರಿಸಿದರು.

ಡಿವೈಎಸ್‌ಪಿ. ಶಿವಲಿಂಗಪ್ಪ ಪಟ್ಟಣ, ಜಿಲ್ಲಾ ಭೋವಿ ವಡ್ಡರ ಸಮಾಜದ ಜಿಲ್ಲಾಧ್ಯಕ್ಷ ತಿಪ್ಪಣ್ಣ ಒಡೆಯರ, ಗೌರವಾಧ್ಯಕ್ಷ ರಾಮು ನಂದೂರ, ಜಿಲ್ಲಾ ಭೋವಿ ವಡ್ಡರ ಸಮಾಜ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿದ್ಧರಾಮ ದಂಡಗುಳಕರ, ಡಾ| ಟಿ. ಭಾಗ್ಯ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next