Advertisement

ಅಭಿವೃದ್ಧಿ ಕಾಣದ ಕವಿ ಸಮಾಧಿ ಸಿದ್ಧಶೈಲ

01:17 PM Aug 21, 2018 | Team Udayavani |

ಬಸವಕಲ್ಯಾಣ: ಕನ್ನಡದ ಕವಯತ್ರಿ, ಕನ್ನಡ ಮತ್ತು ಮರಾಠಿಯಲ್ಲಿ ಸಾಹಿತ್ಯ ರಚಿಸಿ ಎರಡೂ ಭಾಷಿಕರ ಮಧ್ಯೆ ಸೇತುಯಾಗಿ ನಿಂತಿದ್ದ ಹಾಗೂ 1974ರಲ್ಲಿ ಮಂಡ್ಯದಲ್ಲಿ ನಡೆದ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷೆಯಾಗಿದ್ದ ಡಾ| ಜಯದೇವಿತಾಯಿ ಲಿಗಾಡೆ ಅವರ ಇಲ್ಲಿನ ಸಮಾಧಿ ಸ್ಥಳ ಸಿದ್ಧಶೈಲ ಅಭಿವೃದ್ಧಿಗಾಗಿ ಕಾಯುತ್ತಿದೆ.

Advertisement

ಲಿಗಾಡೆಯವರು ಮಹಾರಾಷ್ಟ್ರದ ಸೊಲ್ಲಾಪೂರದ ಶ್ರೀಮಂತ ಮನೆತನವಾದ ಅರಮನೆಯಂಥ ಇಂದ್ರಭುವನದಲ್ಲಿ 1912 ಜೂ.23ರಂದು ಜನಿಸಿದ್ದರು. ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ನಡೆಸಿದ್ದ ಈ ಧೀಮಂತ ಮಹಿಳೆ ಶಿಕ್ಷಣ ಮತ್ತು
ಆಡಳಿತದಲ್ಲಿ ಕನ್ನಡ ಭಾಷೆ ಅನುಷ್ಠಾನ ಸೊಲ್ಲಾಪೂರ ಮತ್ತು ಇತರೆ ಕನ್ನಡ ಭಾಷಿಕರ ಪ್ರದೇಶಗಳು ಕರ್ನಾಟಕಕ್ಕೆ ಸೇರಬೇಕು ಎಂದು ಸಾಕಷ್ಟು ಪ್ರಯತ್ನ ನಡೆಸಿದವರು.

ತ್ರಿಪದಿಯಲ್ಲಿ ಸಿದ್ಧರಾಮ ಪುರಾಣ ಬರೆದರು. ಜಯಗೀತ ಸಾವಿರದ ಪದಗಳು ಸೇರಿದಂತೆ ವಚನಗಳನ್ನು ಮಠಾರಿಗೆ ಅನುವಾದಿಸಿ ಪ್ರಚಾರ ಮಾಡಿದವರು. ಕನ್ನಡ ಸಾಹಿತ್ಯ ಪ್ರಕಟಣೆಗಾಗಿ ಕನ್ನಡ ಕೋಟೆ ಎನ್ನುವ ಪ್ರಕಾಶನ ಸಂಸ್ಥೆ ಸ್ಥಾಪಿಸಿದ್ದ ಕೀರ್ತಿ ಇವರಿಗೆ ಸಲ್ಲುತ್ತದೆ.

ಆದರೆ ಸೊಲ್ಲಾಪೂರ ಕರ್ನಾಟಕಕ್ಕೆ ಸೇರುವುದಿಲ್ಲ ಎಂಬುದು ಗೊತ್ತಾದಾಗ ಅಲ್ಲಿನ ಶ್ರೀಮಂತಿಕೆ ಮತ್ತು ಮನೆಯನ್ನು ಬಿಟ್ಟು 1982ರಲ್ಲಿ ಬಸವಕಲ್ಯಾಣಕ್ಕೆ ಬಂದು ಅನುಭವ ಮಂಟಪಕ್ಕೆ ಹೋಗುವ ರಸ್ತೆಯಲ್ಲಿ ಭಕ್ತಿ-ಭವನ ಮನೆ ನಿರ್ಮಿಸಿ, ಕೊನೆ ಉಸಿರುವವರೆಗೂ ಬಸವಕಲ್ಯಾಣದಲ್ಲಿ ವಾಸವಾಗಿದ್ದರು.

ಇವರು ವಾಸವಾಗಿದ್ದ ಮನೆ ಕೇವಲ ಮನೆಯಾಗಿರಲಿಲ್ಲ. ಮಾಹಿತಿಯ ಭಂಡಾರವಾಗಿತ್ತು. ಕನ್ನಡ ಮತ್ತು ಮರಾಠಿಗರ ಅನೇಕ ಮಹತ್ವದ ಕೃತಿಗಳನ್ನು ಅವರು ಸಂಗ್ರಹಿಸಿ ಇಟ್ಟಿದ್ದರು. ಹಾಗಾಗಿ ಸಂಶೋಧಕರು ಮತ್ತು ಬರಹಾಗಾರರು ಅವರ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಕನ್ನಡ ಮರಾಠಿಗರಿಗೆ ಸೇತುವೆಯಾಗಿ ಕೆಲಸ ಮಾಡಿದ್ದ ಡಾ| ಲಿಗಾಡೆತಾಯಿ 1986 ಜು.25ರಂದು ನಿಧನರಾದರು. ಅವರು ವಾಸವಾಗಿದ್ದ ಮನೆಯ ಹಿಂಭಾದಲ್ಲಿ ಸಮಾ ಧಿ ಸಿದ್ಧಶೈಲ ಕಟ್ಟಲಾಗಿದೆ. 

Advertisement

ಆದರೆ ಈವರೆಗೆ ಸರಕಾರ ಮತ್ತು ಜನಪ್ರತಿನಿಧಿಗಳು ಸಮಾಧಿಸ್ಥಳದತ್ತ ಗಮನ ಹರಿಸಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ. ಇದರಿಂದ ಪ್ರವಾಸಿ ತಾಣವಾಗಬೇಕಾಗಿದ್ದ ಸಮಾಧಿಸ್ಥಳದಲ್ಲಿ ಗಿಟಗಳು ಬೆಳೆದು ನಿಂತಿವೆ. ಭಕ್ತಿ-ಭವನ ಹಿಂದಿನ ಭಾಗ ಶಿಥಿಲಾವಸ್ಥೆಗೆ ತಲುಪಿದೆ. ಸ್ಥಳಕ್ಕೆ ಭೇಟಿ ನೀಡಿದರೆ, ಲಿಗಾಡೆತಾಯಿ ಸಮಾಧಿಇದೇನಾ ಎನ್ನುವ ಹಂತಕ್ಕೆ ತಲುಪಿದೆ. ಅಲ್ಲಿ ಡಾ| ಲಿಗಾಡೆತಾಯಿ ಅವರನ್ನು ನೆನಪಿಸುವಂತಹ ಯಾವುದೇ ಕುರುಹುಗಳು ಇಲ್ಲ. ಹೀಗೆ ರಾಜ್ಯಕ್ಕೆ ಮತ್ತು ದೇಶಕ್ಕೆ ಮಾದರಿಯಾಬೇಕಾದ ಡಾ| ಜಗದೇವಿ ಲಿಗಾಡೆ ತಾಯಿ ಸಮಾ  ಸಿದ್ಧಶೈಲ ನಿರ್ಲಕ್ಷಕ್ಕೆ ಒಳಗಾಗಿರುವುದು ವಿಷಾದನೀಯ ಎನ್ನಬಹುದು.

ಡಾ| ಜಗದೇವಿತಾಯಿ ಲಿಗಾಡೆ ಸಮಾಧಿ ಸ್ಥಳ ಸಿದ್ಧಶೈಲದಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕು. ಮತ್ತು ಗ್ರಂಥಾಲಯ
ಅಥವಾ ವಸ್ತು ಸಂಗ್ರಾಲಯ ನಿರ್ಮಿಸುವ ಮೂಲಕ ಇವರ ಜೀವನ ಚರಿತ್ರೆ ಮುಂದಿನ ಪೀಳಿಗೆಗೆ ಮಾದರಿ ಆಗುವಂತೆ ಮಾಡಬೇಕು.  ದೇವೇಂದ್ರ ಬರಗಾಲೆ ಡಾ| ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನ ಅಧ್ಯಕ್ಷ

ಡಾ| ಜಯದೇವಿತಾಯಿ ಲಿಗಾಡೆ ಕೃತಿಗಳು ಸಂಪುಟವಾಗಿ ಪುನಃ ಮುದ್ರಣವಾಗಬೇಕು. ಹಾಗೂ ಸಮಾಧಿಸಿದ್ಧಶೈಲ ಸಂರಕ್ಷಣೆ ಮಾಡುವ ಹೊಣೆಗಾರಿಕೆಯನ್ನು ಸರಕಾರ ವಹಿಸಿಕೊಳ್ಳಬೇಕು. ಕನ್ನಡದ ವಿಮರ್ಶಕರು ಲಿಗಾಡೆ ಅವರ ಸಾಹಿತ್ಯ ಕುರಿತು ಗಂಭೀರ ಚರ್ಚೆ ಮಾಡಬೇಕು.
 ಡಾ. ಭೀಮಾಶಂಕರ ಬಿರಾದಾರ್‌

„ವೀರಾರೆಡ್ಡಿ ಆರ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next