Advertisement

ಬಿಟ್ ಕಾಯಿನ್ ವಿಚಾರ ಇಬ್ಬರು ಕಾಂಗ್ರೆಸ್ ನಾಯಕರ ರಾಜಕೀಯ ವೈಷಮ್ಯದ ಪ್ರತಿಫಲನ: ಬಿಜೆಪಿ

04:33 PM Nov 14, 2021 | Team Udayavani |

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಉಂಟು ಮಾಡಿರುವ ಬಿಟ್ ಕಾಯಿನ್ ಹಗರಣ ವಿವಾದದಲ್ಲಿ ದಿನಕ್ಕೊಂದು ವಿಚಾರ ಹೊರಬರುತ್ತದೆ, ಪಕ್ಷಗಳು ಒಂದರ ಮೇಲೊಂದು ಆರೋಪಗಳನ್ನು ಮಾಡುತ್ತಿದೆ. ಇದೀಗ ಬಿಜೆಪಿ ಇದೇ ವಿಚಾರವಾಗಿ ‘ಕೂ’ ಮಾಡಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಬಿಟ್ ಕಾಯಿನ್ ವಿಚಾರ ಆರಂಭಿಸಿದ್ದೇ ಡಿಕೆಶಿ ಬಣದ ನಲಪಾಡ್‌ಗೆ ಅಧಿಕಾರ ತಪ್ಪಿಸಲು ಎಂದು ಆರೋಪಿಸಿದೆ.

Advertisement

ಕಾಂಗ್ರೆಸ್ ನಾಯಕರ ಶಂಕಿತ ಬಿಟ್ ಕಾಯಿನ್ ಹಗರಣದಲ್ಲಿ ರಾಜಕೀಯ ನಾಯಕರ ಕೈವಾಡ ಇದೆ ಎಂಬುದಕ್ಕೆ ಇದುವರೆಗೆ ದೊರೆತ ಅತಿದೊಡ್ಡ ಸಾಕ್ಷ್ಯ ಯಾವುದು? ಆ ಸಾಕ್ಷ್ಯವನ್ನು ಕಾಂಗ್ರೆಸ್ ನಾಯಕರು ಏಕೆ ಮುಚ್ಚಿಡುತ್ತಿದ್ದಾರೆ? ಹೂ ಆರ್ ದಿ ಆಕ್ಟರ್, ಯಾರಿಗಾಗಿ ಈ ಬೃಹನ್ನಾಟಕ ಎಂಬುದನ್ನು ನಾವು ಬಿಚ್ಚಿಡುತ್ತೇವೆ ಎಂದು ಬಿಜೆಪಿ ಹೇಳಿದೆ.

2018 ರಲ್ಲೇ ಹಗರಣದ ಆರೋಪಿ ಕಾಂಗ್ರೆಸ್ ಶಾಸಕ ಹ್ಯಾರೀಸ್ ಪುತ್ರ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಜೊತೆ ಸ್ನೇಹ ಸಂಬಂಧ ಹೊಂದಿದ್ದ. ರಾಬಿನ್ ಖಂಡೇವಾಲ್ ಹೇಳಿಕೆ ಪ್ರಕಾರ ನಲಪಾಡ್ ಜೊತೆ ಸ್ನೇಹ ಇರುವ ಅವಧಿಯಲ್ಲೇ ಆರೋಪಿಯು ಬಿಟ್ ಕಾಯಿನ್ ಹ್ಯಾಕ್ ಮಾಡಿ ತನ್ನ ವ್ಯಾಲೆಟ್‌ ನಲ್ಲಿಟ್ಟುಕೊಂಡಿರುವ ವಿಚಾರ ತಿಳಿಸಿದ್ದ. ಪ್ರಸ್ತಾವಿತ ಬಿಟ್ ಕಾಯಿನ್ ಹಗರಣದಲ್ಲಿ ಇದುವರೆಗೆ ಲಭ್ಯ ಇರುವ ದಾಖಲೆ ಪ್ರಕಾರ ಯುವ ಕಾಂಗ್ರೆಸ್‌ ಮುಂದಿನ ಅಧ್ಯಕ್ಷ ನಲಪಾಡ್ ಒಬ್ಬರೇ ಆರೋಪಿ ಶ್ರೀಕಿ ಜೊತೆಗೆ ಸ್ನೇಹ ಸಂಬಂಧ ಹೊಂದಿದ್ದ ರಾಜಕೀಯ ಹಿನ್ನೆಲೆಯ ವ್ಯಕ್ತಿ. ಇವರನ್ನು ಬಿಟ್ಟರೆ ಬೇರೆ ಇನ್ಯಾರು ಇಲ್ಲ, ಕಾಂಗ್ರೆಸ್‌ ಇದನ್ನೇಕೆ ಮರೆ ಮಾಚುತ್ತಿದೆ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ:ಉದ್ಯೋಗವಿಲ್ಲದ್ದಕ್ಕೆ ಕೈ ನಾಯಕರಿಂದ ಬಿಟ್‌ಕಾಯಿನ್‌ ಪ್ರಸ್ತಾಪ

“ಮೊಹಮ್ಮದ್ ನಲಪಾಡ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಆಪ್ತ. ಡಿಕೆಶಿ ಅವರು ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ, ಪ್ರಭಾವಿ ಅಳಿಯ ರಾಬರ್ಟ್ ವಾದ್ರಾಗೆ ಆಪ್ತ. ಹಾಗಾದರೆ ಈ ಪ್ರಕರಣದ ರೂವಾರಿಗಳು..‌.? ಜಾಯಿನ್‌ ದ ಡಾಟ್ಸ್…” ಎಂದು ಬಿಜೆಪಿ ಸುಳಿವು ನೀಡಿದೆ.

Advertisement

ಜನವರಿಯಲ್ಲಿ ನನಗೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸಿಗುತ್ತದೆ ಎಂಬ ಕಾರಣಕ್ಕಾಗಿ ನನ್ನನ್ನು ಸಿಲುಕಿಸಲಾಗುತ್ತಿದೆ ಎಂದು ನಲಪಾಡ್ ಆರೋಪಿಸುತ್ತಿದ್ದಾರೆ. ತಮ್ಮ ಆಪ್ತನ ಪುತ್ರ ರಕ್ಷಾ ರಾಮಯ್ಯಗಾಗಿ ಸಿದ್ದರಾಮಯ್ಯ ಅವರು ನಲಪಾಡ್ ವಿರೋಧಿಸಿದ್ದು ರಾಜ್ಯಕ್ಕೆ ತಿಳಿದಿದೆ. ಹಾಗಾದರೆ ಇದರ ಹಿಂದಿರುವುದು ಯಾರು? ಬಿಟ್ ಕಾಯಿನ್ ವಿಚಾರ ಮೊದಲು ಪ್ರಸ್ತಾಪಿಸಿದ್ದು ಸಿದ್ದರಾಮಯ್ಯ. ಡಿಕೆಶಿ ಬಣದ ನಲಪಾಡ್‌ಗೆ ಅಧಿಕಾರ ತಪ್ಪಿಸುವುದು, ವಿನಾಕಾರಣ ಒಂದು ರಾಜಕೀಯದ ಹುಯಿಲೆಬ್ಬಿಸುವುದೇ ಇದರ ಉದ್ದೇಶ. ಬಿಟ್ ಕಾಯಿನ್ ವಿಚಾರ ಕಾಂಗ್ರೆಸ್ ನಾಯಕರಿಬ್ಬರ ನಡುವೆ ಇರುವ ರಾಜಕೀಯ ವೈಷಮ್ಯದ ಪ್ರತಿಫಲನವಷ್ಟೇ. ಅದರಿಂದಾಚೆಗೆ ಬೇರೇನಿಲ್ಲ ಎಂದು ಬಿಜೆಪಿ ಹೇಳಿದೆ.

ಶಂಕಿತ ಬಿಟ್ ಕಾಯಿನ್ ಹಗರಣದಿಂದ ಸಿದ್ದರಾಮಯ್ಯ ಒಂದೇ ಕಲ್ಲಿನಲ್ಲಿ ಹಲವು ಹಕ್ಕಿ ಹೊಡೆದಿದ್ದಾರೆ. ತಮ್ಮನ್ನು ಸುತ್ತಿಕೊಂಡ ದಲಿತ ವಿರೋಧಿ ಆರೋಪದಿಂದ ತಪ್ಪಿಸಿಕೊಳ್ಳುವುದು, ಬಿಜೆಪಿ ವಿರುದ್ಧ ಸಲ್ಲದ ಅಪಪ್ರಚಾರ ನಡೆಸುವುದು, ಡಿಕೆಶಿ ವಿರುದ್ಧ ಮಾತನಾಡಿದ್ದ ತಮ್ಮ ಆಪ್ತ ಉಗ್ರಪ್ಪ ಅವರನ್ನು ಶಿಸ್ತುಕ್ರಮದಿಂದ ರಕ್ಷಿಸುವುದು, ಮೊಹಮ್ಮದ್ ನಲಪಾಡ್ ಅವರಿಗೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತಪ್ಪಿಸುವುದು, ಡಿಕೆಶಿ ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವುದು ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆರೋಪಗಳ ಸುರಿಮಳೆಗೈದಿದೆ.

Koo App

ಕಾಂಗ್ರೆಸ್ ನಾಯಕರ ಶಂಕಿತ #Bitcoin ಹಗರಣದಲ್ಲಿ ರಾಜಕೀಯ ನಾಯಕರ ಕೈವಾಡ ಇದೆ ಎಂಬುದಕ್ಕೆ ಇದುವರೆಗೆ ದೊರೆತ ಅತಿದೊಡ್ಡ ಸಾಕ್ಷ್ಯ ಯಾವುದು?

ಆ ಸಾಕ್ಷ್ಯವನ್ನು ಕಾಂಗ್ರೆಸ್ ನಾಯಕರು ಏಕೆ ಮುಚ್ಚಿಡುತ್ತಿದ್ದಾರೆ?

ಹೂ ಆರ್ ದಿ ಆಕ್ಟರ್, ಯಾರಿಗಾಗಿ ಈ ಬೃಹನ್ನಾಟಕ ಎಂಬುದನ್ನು ನಾವು ಬಿಚ್ಚಿಡುತ್ತೇವೆ.

#CONgressFakeNewsFactory

BJP KARNATAKA (@BJP4Karnataka) 14 Nov 2021

Advertisement

Udayavani is now on Telegram. Click here to join our channel and stay updated with the latest news.

Next