ಶಿರಸಿ: ಹಿಂದೆಲ್ಲ ಇದ್ದ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರ, ಹಗರಣಗಳ ದಾಖಲೆ ಮುರಿದು ಸಿದ್ದರಾಮಯ್ಯ ಅವರು ಮುಡಾ ಹಗರಣದ ಮೂಲಕ ಹೊಸ ದಾಖಲೆ ಬರೆದಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
Advertisement
ಸೋಮವಾರ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಹಗರಣಕ್ಕೆ ಸಂಬಂಧಿಸಿ ಇಡಿ ಸಾಕಷ್ಟು ದಾಖಲೆ ಸಂಗ್ರಹಿಸಿದೆ. ಸಿದ್ದರಾಮಯ್ಯ ಅವರ ಪತ್ನಿಗೆ 14 ಸೈಟು ಕೊಟ್ಟಿರುವುದು ನಿಜ. ಈ ಪ್ರಕರಣಕ್ಕೆ ಸಂಬಂಧಿಸಿ ಲೋಕಾಯುಕ್ತ, ಇಡಿ ತನಿಖೆಗೆ ರಾಜ್ಯ ಸರಕಾರದ ಅ ಧಿಕಾರಿಗಳು ಸಹಕಾರ ಕೊಡಬೇಕು. ಹಾಗೂ ಸಮಗ್ರ ತನಿಖೆಗೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಲೇವಡಿ ಮಾಡಿದರು. ರಾಜ್ಯದಲ್ಲಿರೋದು ಮರ್ಯಾದಗೆಟ್ಟ ಸರಕಾರ. ಸಿದ್ದರಾಮಯ್ಯ ಅವರು ಸೈಟ್ ವಾಪಸ್ ಕೊಟ್ಟ ಬಳಿಕ ಹಗರಣ ಮುಗದೋಗತ್ತಾ? ರಾಜ್ಯದ ಜನರಲ್ಲಿ ಇಂತಹ ಭ್ರಮೆ ಸೃಷ್ಟಿಸುವುದು ಬಿಡಬೇಕು. ಕಾಂಗ್ರೆಸ್ನದ್ದು ಹತಾಶ ಸ್ಥಿತಿ ಆಗಿದೆ. ದ್ವೇಷ ರಾಜಕಾರಣ, ಎಫ್ಐಆರ್, ನ್ಯಾಯಾಲಯದಲ್ಲಿ ದಾವೆ ಇದನ್ನೇ ಮಾಡುತ್ತಿದ್ದು ಇದು ಕಾನೂನು ಕಟ್ಲೆ ಹೆಚ್ಚು ಮಾಡಿಕೊಂಡ ಸರಕಾರವಾಗಿದೆ.
Related Articles
Advertisement
ಅಡಿಕೆ ಅಕ್ರಮ ಆಮದಿಗೆ ಬಿಗಿ ಕ್ರಮ
ಅಡಿಕೆ ಸೇರಿದಂತೆ ಇತರ ಬೆಳೆಗಳಿಗೆ ಬಂದಿರುವ ರೋಗ ನಿಯಂತ್ರಣ ಮಾಡಬೇಕಿದೆ. ರೈತ ಸಮುದಾಯದ ಹಿತ ಕಾಯಬೇಕು. ಅಂತಾರಾಷ್ಟ್ರೀಯ ಒಪ್ಪಂದದ ಕಾರಣದಿಂದ ಅನೇಕ ವಸ್ತುಗಳ ಆಮದು-ರಫ್ತು ಆಗುತ್ತಿದೆ. ಅಧಿಕೃತವಾಗಿ ತರುವುದಕ್ಕೆ ಅಧಿಕ ತೆರಿಗೆ ಹಾಕಲಾಗುತ್ತದೆ.
ಅಡಿಕೆ ಅಕ್ರಮ ಆಮದಿಗೆ ಕೇಂದ್ರ ಸರಕಾರ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಲಿದೆ. ದರ ಹೆಚ್ಚಾಯಿತು ಎನ್ನುವ ಹೊತ್ತಿನಲ್ಲಿನಿಯಂತ್ರಣ ತಪ್ಪಿ ಬೆಳೆ ಬೆಳೆದಿದ್ದರಿಂದಲೂ ಸಮಸ್ಯೆ ಆಗುತ್ತಿದೆ. ಕದ್ದು ತರೋದನ್ನು ನಿಯಂತ್ರಿಸಬಹುದು. ಆದರೆ ಅಡಿಕೆ
ಬೆಳೆಯ ಕ್ಷೇತ್ರ ವಿಸ್ತರಣೆ ಒಂದು ದೊಡ್ಡ ಸವಾಲು. ಗ್ಯಾರಂಟಿ ಹೆಸರಲ್ಲಿ ಮೋಸ-ಅಶಿಸ್ತಿನ ಸರಕಾರ
ಆರ್ಥಿಕವಾಗಿ ರಾಜ್ಯ ದಿವಾಳಿ ಆಗುತ್ತದೆ. ತೆರಿಗೆ ಹೆಚ್ಚಿಸಿ, ಬೆಲೆ ಏರಿಕೆಗೆ ಕಾರಣವಾಗಿ ಜನರ ಜೀವನ ದುಸ್ತರಗೊಳಿಸುತ್ತಿದೆ. ಗ್ಯಾರೆಂಟಿ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದೆ. ಜನ ವಿರೋಧಿ ಸರಕಾರ ಎನ್ನಲು ಹಾಪ್ಕಾಮ್ಸ್ ಮಳಿಗೆ ಬಂದ್ ಮಾಡಿದ್ದು ಉದಾಹರಣೆ. ರಾಜ್ಯದಲ್ಲಿ ನೂರಾರು ಮಳಿಗೆ ಬಂದ್ ಆಗಿದ್ದಕ್ಕೆ ರಾಜ್ಯ ಸರಕಾರ ಸರಕಾರಕ್ಕೆ ಏನು ಹೇಳುತ್ತದೆ? ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕರು ಉದ್ಘಾಟನೆ ಮಾಡುವುದನ್ನು ನೋಡಿದ್ದೇವೆ. ಆದರೆ, ಭೂಮಿಪೂಜೆ ಮಾಡಿದ್ದು ಯಾವುದು ಇದೆ? ರಾಜ್ಯದಲ್ಲಿ ಅಭಿವೃದ್ಧಿ ನಿಂತು ಹೋಗಿದೆ. ಇದರ ಬಗ್ಗೆ ಯೋಚಿಸದ ಸರಕಾರ ದೇಶ ದ್ರೋಹಿಗಳಿಗೆ, ಅಪರಾಧ ಮನೋವೃತ್ತಿಯವರಿಗೆ
ಬೆಂಬಲ, ರಕ್ಷಣೆ ಕೊಡುತ್ತಿದೆ. ಇದೊಂದು ಅಶಿಸ್ತಿನ ಸರಕಾರ ಎಂದು ಕಾಗೇರಿ ಕಿಡಿಕಾರಿದರು. ಮುಡಾ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಯಲು ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು. ಕಾಂಗ್ರೆಸ್ ನಲ್ಲಿ ಪರ್ಯಾಯ ಸಿಎಂ ಮಾಡಿಕೊಳ್ಳಲಿ. ಇಡೀ ಪ್ರಕರಣದ ಸಮಗ್ರ ತನಿಖೆಗೆ ಸಿಬಿಐಗೆ ವಹಿಸಲಿ. ಶಿರಸಿ ಪ್ರತ್ಯೇಕ ಜಿಲ್ಲೆಗೆ ಜನಾಭಿಪ್ರಾಯ ರೂಪಿತವಾದರೆ ಸರಕಾರ ಆ ಕಾಲದ ತೀರ್ಮಾನ ಕೈಗೊಳ್ಳುತ್ತದೆ. ಜನಪ್ರತಿನಿ ಧಿಗಳಲ್ಲಿ, ಜನರಲ್ಲಿ ಹೋರಾಟಗಾರರು ಪ್ರತ್ಯೇಕ
ಜಿಲ್ಲೆಯ ಸ್ಪಷ್ಟತೆ ಮೂಡಿಸುವ ಕಾರ್ಯ ಆಗಲಿ.
●ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ