ಬೆಂಗಳೂರು : 2017-18 ನೇ ಸಾಲಿನ ನಿರ್ಣಾಯಕ ಬಜೆಟ್ ಮಂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನಿವಾಸದಿಂದ ವಿಧಾನ ಸೌಧಕ್ಕೆ ಹೊರಟಿದ್ದಾರೆ. ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಎನ್.ಎಸ್.ಪ್ರಸಾದ್ ಅವರು ಬಜೆಟ್ ಪ್ರತಿಗಳನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಿದ್ದಾರೆ.
12 ನೇ ಬಾರಿ ಬಜೆಟ್ ಮಂಡಿಸುತ್ತಿರುವ ಸಿದ್ದರಾಮಯ್ಯ ಅವರು ಟ್ವೀಟರ್‌ನಲ್ಲಿ
‘ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುವ ಬಜೆಟ್ ಮಂಡಿಸಲು ಹೊರಟಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.
‘ರಾಜ್ಯದ ಜನತೆ 12 ನೇ ಬಾರಿ ಬಜೆಟ್ ಮಂಡಿಸಲು ಸಾರ್ಥಕ ಅವಕಾಶ ನೀಡಿದ್ದಾರೆ. ರಾಜ್ಯದ ಜನರನ್ನು ನೆನೆಯುತ್ತಾ ಬಜೆಟ್ ಮಂಡಿಸುತ್ತೇನೆ.ಬಜೆಟ್ ಸಾಮನ್ಯ ಜನತೆ, ಮಹಿಳೆಯರು, ರೈತರು, ಯುವಜನತೆ ಮತ್ತು ಉದ್ಯಮಿಗಳ ಪರವಾಗಿರಲಿದೆ’ ಎಂದು ಬರೆದಿದ್ದಾರೆ.