Advertisement

Mysore; ನಾನು ಯಾವಾಗಲೂ ಗಟ್ಟಿಯಾಗಿಯೇ ಇರುತ್ತೇನೆ: ಸಿಎಂ ಸಿದ್ದರಾಮಯ್ಯ

02:14 PM Sep 26, 2023 | Team Udayavani |

ಮೈಸೂರು: ನಾನು ಯಾವಾಗಲೂ ಗಟ್ಟಿಯಾಗಿಯೇ ಇದ್ದೇನೆ. ಗಟ್ಟಿಯಾಗಿಯೇ ಇರುತ್ತೇನೆ. ನೀವು ನನ್ನನ್ನು ವೀಕ್ ಮಾಡಲು ಯತ್ನಿಸುತ್ತೀರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.

Advertisement

ಚಾಮರಾಜನಗರ ಜಿಲ್ಲೆಯಲ್ಲಿ ಇಂದು ವಾಸ್ತವ್ಯ ಹೂಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆ ಎನ್ನುವ‌ ವಿಚಾರ ಸುಳ್ಳು. ಅಂತಹ ಅಪವಾದ ಇಲ್ಲ ಎಂದರು.

ಸಿದ್ದರಾಮಯ್ಯ ಮಾತಿಗೆ ಸಚಿವ ಮಹದೇವಪ್ಪ ದನಿಗೂಡಿಸಿ ಚಾಮರಾಜನಗರಕ್ಕೆ ಸಿಎಂ ಹೋಗುತ್ತಿರುವುದೇ ಗಟ್ಟಿಯಾಗಿ ಇರುವುದಕ್ಕೆ ಎಂದರು.

ಹಕ್ಕು ರಕ್ಷಣೆ ಕರ್ತವ್ಯ: ಬೆಂಗಳೂರು ಬಂದ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಪ್ರತಿಭಟನೆ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಪ್ರತಿಭಟನೆನಿಂದ ಇನ್ನೊಬ್ಬರಿಗೆ ತೊಂದರೆಯಾಗಬಾರದು. ಪ್ರತಿಭಟನೆ ಹೇಗೆ ಸಂವಿಧಾನಾತ್ಮಕ ಹಕ್ಕೋ ಹಾಗೆಯೇ ಸಾಮಾನ್ಯ ಜನರಿಗೂ ಹಕ್ಕು ಇರುತ್ತದೆ. ಹಾಗಾಗಿ ಅವರ ಹಕ್ಕಿಗೆ ಧಕ್ಕೆ ತರಬೇಡಿ. ಜನರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ 144 ಸೆಕ್ಷನ್ ಜಾರಿ ಮಾಡಿದ್ದೇವೆ. ಜನರ ಹಕ್ಕನ್ನು ರಕ್ಷಿಸಿಸುವುದು ಸರ್ಕಾರದ ಕರ್ತವ್ಯ. ಅದೇ ಕೆಲಸವನ್ನು ನಾವು ಮಾಡಿದ್ದೇವೆ ಎಂದರು.

ದೇವೇಗೌಡರ ಹೊಸ ಪ್ರೇಮ: ಕಾವೇರಿ ನೀರು ವಿಚಾರವಾಗಿ ದೇವೇಗೌಡರ ಪತ್ರವನ್ನು ನಾವು ಸ್ವಾಗತಿಸುತ್ತೇವೆ. ಈಗ ಅವರದು ಬಿಜೆಪಿ ಜೊತೆಗೆ ಹೊಸ ಪ್ರೇಮ. ಅವರು ಸಮಸ್ಯೆ ಬಗೆಹರಿಸುವ ಕಾರ್ಯ ಮಾಡಲಿ. ಆದರೆ ಸರ್ಕಾರ ಸರಿಯಾದ ನಿರ್ಧಾರ ಕೈಗೊಳ್ಳಲಿಲ್ಲ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಿರುವುದನ್ನು ನಾವು ಒಪ್ಪುವುದಿಲ್ಲ. ಸರ್ಕಾರ ಎಲ್ಲ ಅ ಹಂತದಲ್ಲೂ ನಾಡಿನ ಜನರ ರಕ್ಷಣೆಗೆ ಬದ್ಧವಾಗಿಯೇ ಇದೆ. ಕಾನೂನು ತಜ್ಞರು ಸರಿಯಾಗಿ ವಾದ ಮಾಡಿಲ್ಲ ಎಂಬ ಆರೋಪ ಸುಳ್ಳು. ಹಿಂದಿನ ಎಲ್ಲಾ ಸರ್ಕಾರಗಳು ಇದ್ದಾಗಲೂ ಇದ್ದ ಕಾನೂನು ತಂಡವೇ ಈಗಲೂ ಇರುವುದು. ಅವರೇ ವಾದ ಮಾಡಿದ್ದಾರೆ. ಕಾನೂನು ತಜ್ಞರಲ್ಲಿ ಯಾವ ಬದಲಾವಣೆಯಾಗಿಲ್ಲ. ಹೀಗಾಗಿ ಸಮರ್ಥ ವಾದ ಮಂಡಿಸಿಲ್ಲ ಎಂಬುದರಲ್ಲಿ ಅರ್ಥವಿಲ್ಲ‌ ಎಂದರು.

Advertisement

ಬಿಜೆಪಿಯಿಂದ ಚಡ್ಡಿ ಚಳುವಳಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರನ್ನು ಮೊದಲಿನಿಂದಲೂ ಚಡ್ಡಿಗಳು ಎಂದೇ ಕರೆಯುತ್ತಿದ್ದೇವೆ. ಈಗ ಅವರು ಚಡ್ಡಿ ಚಳುವಳಿ ಮಾಡುತ್ತಿದ್ದಾರೆ‌. ಮಾಡಲಿ ಬಿಡಿ ಎಂದರು.

ರಾಜ್ಯ ಕಾಂಗ್ರೆಸ್ ಡಿಎಂಕೆ ಬಿ ಟೀಮ್ ಎಂಬ ಎಚ್ ಡಿಕೆ ಆರೋಪ ವಿಚಾರಕ್ಕೆ ಮಾತನಾಡಿ, ಎಐಡಿಎಂಕೆ ಬಿಜೆಪಿ ಜೊತೆ ಇತ್ತಲ್ಲ ಆಗ ಅದು ಯಾವ ಟೀಮ್..? ಸುಮ್ಮನೆ ರಾಜಕೀಯ ಕಾರಣಕ್ಕೆ ಏನೇನೋ ಹೇಳಿಕೆ ಕೊಡಬಾರದು. ಸುಮ್ಮನೆ ಬಿ ಟೀಮ್ ಎ ಟೀಮ್ ಎನ್ನಬಾರದು ಎಂದರು.

ಕಾವೇರಿ ನೀರು ಪ್ರಸ್ತುತ ವರದಿಗಾಗಿ ಕೇಂದ್ರದ ತಂಡ ಆಗಮಿಸುವ ವಿಚಾರಕ್ಕೆ ಮಾತನಾಡಿದ ಸಿಎಂ, ಪ್ರಧಾನಮಂತ್ರಿ ಮಧ್ಯಸ್ಥಿಕೆ ವಹಿಸಬೇಕು ಕೇಂದ್ರದಿಂದ ತಜ್ಞರ ತಂಡ ಬರಬೇಕು. ಇದನ್ನ ನಾನು ಎರಡು ಬಾರಿ ಕೇಂದ್ರಕ್ಕೆ ಕೇಳಿದ್ದೇನೆ. ದೇವೇಗೌಡರೂ ಕೂಡ ಈಗ ಪತ್ರ ಬರೆದು ಕೇಳಿದ್ದಾರೆ. ಈಗಲಾದರೂ ಕೇಂದ್ರದಿಂದ ತಂಡ ಬರಲಿ. ಯಾಕೆ ಕೇಂದ್ರದ ತಂಡ ಬರುತ್ತಿಲ್ಲವೆಂದು ಬಿಜೆಪಿಯವರು ಹೇಳಲಿ. ಬಿಜೆಪಿಯವರು ಹಾದಿಬೀದಿಯಲ್ಲಿ ಹೋರಾಟ ಮಾಡುವ ಬದಲು ಕೇಂದ್ರದಿಂದ ತಜ್ಞರ ತಂಡ ಕರೆಸಲಿ. ಕೋರ್ಟ್ ಮಧ್ಯಸ್ಥಿಕೆ ಇಲ್ಲದೆ ಎರಡು ರಾಜ್ಯ ಕುಳಿತು ಮಾತುಕತೆಗೆ ಈಗಲೂ ನಾವೂ ಸಿದ್ದವಿದ್ದೇವೆ ಎಂದರು

Advertisement

Udayavani is now on Telegram. Click here to join our channel and stay updated with the latest news.

Next