ಚಿತ್ರದುರ್ಗ: ತಮಿಳುನಾಡಿನ ಕ್ಯಾತೆಗಾಗಿ ಬಿಜೆಪಿಯವರು ಮೇಕೆದಾಟು ಯೋಜನೆ ಮಾಡುತ್ತಿಲ್ಲ. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರಿಗೆ ಕುಮ್ಮಕ್ಕು ನೀಡುತ್ತಿದ್ದಿರಿ. ತಮಿಳುನಾಡಿನಲ್ಲಿ ನಿಮ್ಮ ಪಕ್ಷ ವಿಸ್ತರಣೆಗೆ ಮೇಕೆದಾಟು ಯೋಜನೆ ಮಾಡುತ್ತಿಲ್ಲ. ಹೀಗಾಗಿ ನಮ್ಮ ಪಾದಯಾತ್ರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಅಜೆಂಡಾ ಅಲ್ಲ, ನಮ್ಮದು ರಾಜಕೀಯ ಪಕ್ಷ. ರಾಜಕೀಯಕ್ಕಾಗಿ ನಾವ ಪಾದಯಾತ್ರೆ ಮಾಡುತ್ತಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಡಿಪಿಆರ್ ತಯಾರಿಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದು 2.5 ವರ್ಷ ಆಯ್ತು. ಮೇಕೆದಾಟು ಯೋಜನೆ ಕಾರ್ಯಗತ ಮಾಡಲು ಯಾವುದೇ ಕಾನೂನು ಅಡೆತಡೆ ಇಲ್ಲ ಎಂದರು.
ಸಿದ್ದರಾಮಯ್ಯ ನಾಡಿನ ಆಸ್ತಿ ಎಂಬ ಸಚಿವ ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವು ಕೋವಿಡ್ ಮುಂಜಾಗ್ರತಾ ಕ್ರಮವಹಿಸುತ್ತೇವೆ. ನಮ್ಮಿಂದ ನಿಮಗೂ ನಿಮ್ಮಿಂದ ನಮಗೂ ಕೋವಿಡ್ ಬರದಿರಲಿ ಎಂದು ಮಾಸ್ಕ್ ಹಾಕಿದ್ದೇವೆ. 144 ಸೆಕ್ಷನ್ ಹಾಕಿ ಜನರನ್ನು ಬರದಂತೆ ಮಾಡಿದರೆ ನಾನು ಮತ್ತು ಡಿಕೆಶಿ ನಡೆಯುತ್ತೇವೆ ಎಂದಿದ್ದೇನೆ ಅಷ್ಟೇ ಎಂದರು.
ಇದನ್ನೂ ಓದಿ:ಕೋವಿಡ್ ನಿರ್ಬಂಧ ಎಲ್ಲರಿಗೂ ಅನ್ವಯ, ಉಲ್ಲಂಘಿಸಿದರೆ ಕಾನೂನು ಕ್ರಮ: ಸಚಿವ ಆರಗ ಜ್ಞಾನೇಂದ್ರ
ಹಿಂದೂ ದೇವಸ್ಥಾನಗಳ ಕುರಿತು ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್. ವಾಜಪೇಯಿ ಪ್ರಧಾನಿಯಾದ ಬಳಿಕ ಮತ್ತೆ ಅಧಿಕಾರಕ್ಕೆ ಬಂದವರು ನಾವು. ನಳಿನ್ ಕುಮಾರ್ ರಾಜಕೀಯವಾಗಿ ಬುದ್ದಿ ಬೆಳೆದಿಲ್ಲ. ದೇವಸ್ಥಾನಗಳು ಮುಜರಾಯಿ ಇಲಾಖೆಯಲ್ಲಿದೆ, ಇವುಗಳನ್ನ ಆರ್ ಎಸ್ಎಸ್ ಕೈಗೆ ಕೊಡಬೇಡಿ ಎಂದು ಹೇಳುತ್ತೇವೆ. ಆರ್ ಎಸ್ಎಸ್ ನವರಿಗೆ ಕೊಡಬೇಡಿ ಎಂದರೆ ಹಿಂದೂಗಳ ವಿರೋಧಿಯಾ? ಆರ್ ಎಸ್ಎಸ್ ಮುಂದೆ ಕೈ ಮುಗಿದು ನಿಲ್ಲಬೇಕಾ, ಇದಕ್ಕೆ ಬೇಡ ಎಂದಿದ್ದೇವೆ ಎಂದರು.