Advertisement

ಕೇಂದ್ರ ಸರ್ಕಾರದಿಂದ ಎಸ್ಸಿ ಎಸ್ಟಿ ಹಿಂದುಳಿದ ವರ್ಗಗಳ ದಮನ ನೀತಿ: ಸಿದ್ಧರಾಮಯ್ಯ

11:33 AM Jun 27, 2022 | Team Udayavani |

ಗಂಗಾವತಿ: ಕೇಂದ್ರ ಸರ್ಕಾರ ಎಸ್ಸಿ ಎಸ್ಟಿ ಹಿಂದುಳಿದ ವರ್ಗದ ಜನರಿಗೆ ಸಾಮಾಜಿಕ ಭದ್ರತೆ ಮತ್ತು ಉದ್ಯೋಗ ಸೇರಿದಂತೆ ಇತರ ವಿಷಯಗಳಲ್ಲಿ ದಮನಕಾರಿ ನೀತಿಯನ್ನು ಅನುಸರಿಸುತ್ತಿದೆ ಇದರಿಂದ ಎಸ್ಸಿ ಎಸ್ಟಿ ಹಿಂದುಳಿದ ವರು ಇನ್ನಷ್ಟು ಹಿಂದುಳಿಯಲು ಕಾರಣವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಖಂಡಿಸಿದರು.

Advertisement

ಅವರು ಗಂಗಾವತಿಯ ಮೂಲಕ ಮಸ್ಕಿಗೆ ತೆರಳುವ ಮಾರ್ಗ ಮಧ್ಯೆ ಕಾಂಗ್ರೆಸ್ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಅಗ್ನಿಪಥ್ ಯೋಜನೆ ಮೂಲಕ ಯುವಕರಿಗೆ ಉದ್ಯೋಗ ನೀಡಿದಂತೆ ಮಾಡಿ 4 ವರ್ಷಗಳ ನಂತರ ಅವರನ್ನು ಮನೆಗೆ ಕಳಿಸುವ ಅವೈಜ್ಞಾನಿಕ ನೀತಿ ಸರಿಯಲ್ಲ .ಬಹುತೇಕ ಎಸ್ಸಿ ಎಸ್ಟಿ ಹಿಂದುಳಿದ ವರು ಹೆಚ್ಚಾಗಿ ಸೈನ್ಯವನ್ನು ಸೇರುತ್ತಾರೆ .ಅವರಿಗೆ ಸೇವಾ ಭದ್ರತೆ ಒದಗಿಸಬೇಕು. ಅಗ್ನಿಪಥ್ ಸೇರಿದಂತೆ ಅನೇಕ ವಿಷಯಗಳಲ್ಲಿ ಎಸ್ಸಿ ಎಸ್ಟಿ ಹಿಂದುಳಿದ ವರ್ಗದವರಿಗೆ ಅನ್ಯಾಯವಾಗುತ್ತಿದೆ ಕೇಂದ್ರ ಸರಕಾರ ದಮನಕಾರಿ ನೀತಿಗಳನ್ನು ಯೋಜನೆಗಳನ್ನು ಕೈಬಿಟ್ಟು  ಯುವಕರಿಗೆ ಉದ್ಯೋಗ ಒದಗಿಸುವ ಯೋಜನೆಗಳನ್ನು ಅನುಷ್ಠಾನ ಮಾಡಬೇಕು .ಚುನಾವಣಾ ವರ್ಷವಾಗಿರೋದ್ರಿಂದ ಇದೀಗ ತರಾತುರಿಯಲ್ಲಿ ಅಗ್ನಿಪಥ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಹುದ್ದೆಗಳ ಭರ್ತಿ ಮಾಡಲು ಪ್ರಧಾನಮಂತ್ರಿಗಳು ಸೂಚನೆ ನೀಡಿದ್ದು ಎಸ್ಸಿ ಎಸ್ಟಿ ಹಿಂದುಳಿದವರಿಗೆ ಹೆಚ್ಚಿನ ಹುದ್ದೆಗಳು ಸಿಗುವಂತೆ ಅವಕಾಶಗಳನ್ನು ಕಲ್ಪಿಸಬೇಕು ಎಂದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತೀಹೆಚ್ಚು ಸ್ಥಾನಗಳನ್ನು ಕರ್ನಾಟಕದ ಗಳಿಸಿ ಆಡಳಿತಕ್ಕೆ ಬರಲಿದೆ ಬಿಜೆಪಿಯವರು ಮಾಡುವ ಎಲ್ಲಾ ಗಿಮಿಕ್ ಗಳನ್ನು  ಜನರು ನಂಬುವುದಿಲ್ಲ. ಕಾಂಗ್ರೆಸ್ ಪಕ್ಷದ ಈ ಹಿಂದಿನ ಆಡಳಿತವನ್ನು ಜನತೆ ಇದೀಗ ನೆನಪಿಸಿಕೊಳ್ಳುತ್ತಿದ್ದಾರೆ ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ .ಕೇಂದ್ರ ಸರ್ಕಾರ ಇಡೀ ಸೇರಿದಂತೆ ಸ್ವಾಯತ್ತ ತನಿಖಾ ಸಂಸ್ಥೆಗಳ ಮೂಲಕ ವಿಪಕ್ಷ ಮುಖಂಡರನ್ನು ಟಾರ್ಗೆಟ್ ಮಾಡಿ ಕೇಸ್ ಗಳ ನೆಪದಲ್ಲಿ ತನಿಖೆ ನಡೆಸುತ್ತಿದೆ.ಇದರಿಂದ ಸಂವಿಧಾನದ ಆಶಯಗಳಿಗೆ ತಿಲಾಂಜಲಿ ಇಟ್ಟಂತಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಆಡಳಿತ ವಿಪಕ್ಷ ಎರಡೂ ಸಹ ದೇಶದ ಪ್ರಗತಿಗೆ ಚಿಂತನೆ ನಡೆಸಬೇಕು ತನಿಖೆ ಹೆಸರಿನಲ್ಲಿ  ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರನ್ನು ಟಾರ್ಗೆಟ್ ಮಾಡಿ ಸತತ ತನಿಖೆಗೆ ಒಳಪಡಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು .

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡ ಸರ್ವೇಶ್ ಮಲ್ಲಿಕಾರ್ಜುನಾಗಪ್ಪ ಮಾಂತಗೊಂಡ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಯುವ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next