ಬೆಂಗಳೂರು: ರಾಜ್ಯದಲ್ಲಿ ಅಧಿಕಾರ ನಡೆಸಲು ಮತ್ತು ಬಜೆಟ್ ಮಂಡಿಸಲು ಬಿ ಎಸ್ ಯಡಿಯೂರಪ್ಪಗೆ ನೈತಿಕತೆ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ
ಬಜೆಟ್ ಅಧಿವೇಶನಕ್ಕೂ ಮುನ್ನ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ:Live; ರಾಜ್ಯ ಬಜೆಟ್ ಮಂಡಿಸಿದ ಬಿಎಸ್ ವೈ; ಬಜೆಟ್ ಮಂಡನೆ ವಿರೋಧಿಸಿ ಕಾಂಗ್ರೆಸ್ ಸಭಾತ್ಯಾಗ
26 ಎಕರೆ ಬಡಾವಣೆ ಯೋಜನೆಯಲ್ಲಿ ಡಿನೋಟಿಫೈ ಗೆ ಸಂಬಂಧಿಸಿದ ಅವ್ಯವಹಾರ ಕೇಳಿಬಂದಿತ್ತು. ಈ ವಿಚಾರದಲ್ಲಿ ಬಿಎಸ್ ವೈ ಮತ್ತು ಮುರುಗೇಶ್ ನಿರಾಣಿ ವಿರುದ್ಧ ತನಿಖೆ ನಡೆಸುವಂತೆ ಹೈಕೋರ್ಟ್ ಸೂಚಿಸಿ್ತು. ಅದನ್ನು ಪ್ರಶ್ನಿಸಿ ಸುಪ್ರೀಂ ಮೊರೆ ಹೋದರು ಅಲ್ಲಿಯೂ ಅವರಿಗೆ ರಿಲೀಫ್ ಸಿಕ್ಕಿಲ್ಲ. ಸಿಎಂ ಯಡಿಯೂರಪ್ಪ ಸದ್ಯ ನಿರೀಕ್ಷಣಾ ಜಾಮೀನಿನ ಮೇಲೆ ಹೊರಗಿದ್ದಾರೆ. ಹಾಗಾಗಿ ಅವರಿಗೆ ಬಜೆಟ್ ಮಂಡಿಸಲು ನೈತಿಕತೆಯಿಲ್ಲ ಎಂದು ಆರೋಪಿಸಿದರು.
ಸಿಡಿ ಪ್ರಕರಣದ ಬಳಿಕ ರಾಜ್ಯದ ಆರು ಸಚಿವರು ಕೋರ್ಟ್ ನಲ್ಲಿ ತಮ್ಮ ವಿರುದ್ಧದ ಯಾವುದೇ ಸುದ್ದಿ ಪ್ರಸಾರ ಮಾಡದಂತೆ ತಡೆ ತಂದಿದ್ದಾರೆ. ಯಾಕೆ ಭಯದಿಂದ ಓಡಿ ಹೋಗಬೇಕು. ಹೀಗೆ ಹೋಗಿದ್ದಾರೆ ಅಂದರೆ ಅದರ ಹಿಂದೆ ಏನೋ ಇರಬೇಕು. ಅದಕ್ಕೆ ಭಯಗೊಂಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಇದನ್ನೂ ಓದಿ: ಬಜೆಟ್ ಗೂ ಮುನ್ನ ಬಿಎಸ್ ವೈ ಗೆ ಪ್ರತಿಭಟನೆ ಬಿಸಿ: ಸಿಎಂ ನಿವಾಸದೆದುರು ಮಹಿಳೆಯರ ಪ್ರತಿಭಟನೆ
ಕಾಂಗ್ರೆಸ್ ಸಭಾತ್ಯಾಗ: ರಾಜ್ಯ ಬಜೆಟ್ ಕಲಾಪವನ್ನು ಕಾಂಗ್ರೆಸ್ ವಿರೋಧಿಸಿದ್ದು, ಬಜೆಟ್ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.