Advertisement

ಸಿದ್ದರಾಮಯ್ಯ ಅವರು ಸೆಲ್ಯೂಲರ್ ಜೈಲಿಗೆ ಒಮ್ಮೆ ಹೋಗಿ ಬರಬೇಕು: ಸಚಿವ ಸುನಿಲ್ ಕುಮಾರ್

06:39 PM Aug 19, 2022 | Team Udayavani |

ಮಣಿಪಾಲ: ಅರ್ಧಂಬರ್ಧ ತಿಳಿದವರು, ಅಂತಃಸತ್ವ ಇಲ್ಲದವರು ಮಾತ್ರ ಸಾವರ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ಸಿದ್ದರಾಮಯ್ಯ ಅವರು ಬಿಡುವು ಮಾಡಿಕೊಂಡು ಅಂಡಮಾನಿನ ಸೆಲ್ಯೂಲರ್ ಜೈಲನ್ನು ಒಮ್ಮೆ ನೋಡಿ ಬರಬೇಕು. ಸಾವರ್ಕರ್ ಅವರ ಹೋರಾಟ, ಬ್ರಿಟಿಷರು ಅವರಿಗೆ ನೀಡಿದ ಕ್ರೂರ ಶಿಕ್ಷೆಯ ಬಗ್ಗೆೆ ತಿಳಿಯುತ್ತದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದರು.

Advertisement

ಮಣಿಪಾಲದ ಕಂಟ್ರಿಇನ್ ಹೊಟೇಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ವಿರುದ್ಧ ಜನರು ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಯಾರೋ ಹೇಳಿಕೊಟ್ಟು ಮಾಡಿಸುತ್ತಿರುವುದಲ್ಲ. ಜನರ ಮನಸ್ಸಿನಲ್ಲಿ ಇರುವ ಭಾವನೆ ಸ್ಫೋಟಗೊಂಡಾಗ ಈ ರೀತಿ ಆಗುತ್ತದೆ. ಸಿದ್ದರಾಮಯ್ಯ ಅವರು ಸಾವರ್ಕರ್ ಬಗ್ಗೆ ಇಷ್ಟು ಅವಹೇಳನಕಾರಿಯಾಗಿ ಮಾತಾಡಿದರೆ ಅದನ್ನು ಸಹಿಸಿಕೊಳ್ಳಲು ಇವತ್ತಿನ ಯುವ ಸಮೂಹಕ್ಕೆ ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರಿಗೆ ಹಣೆ ಮೇಲೆ ಕುಂಕುಮ ಇಟ್ಟವರನ್ನು ಕಂಡರೆ ಆಗುವುದಿಲ್ಲ. ಸಾವರ್ಕರ್ ಭಾವಚಿತ್ರ ಹಾಕಿದರೆ ಮುಸ್ಲಿಂ ಏರಿಯಾದಲ್ಲಿ ಯಾಕೆ ಹಾಕಿದ್ದಿರಿ ಎನ್ನುತ್ತಾರೆ. ಈ ರೀತಿ ಪ್ರತ್ಯೇಕತೆಯ ಭಾವನೆಯನ್ನೇ ತನ್ನ ನಡವಳಿಕೆ, ಹೇಳಿಕೆ, ಆಡಳಿತದಲ್ಲಿ ನೀಡುತ್ತಲೇ ಬಂದಿರುವ ಪರಿಣಾಮವಾಗಿ ಇಂದು ಇಷ್ಟು ದೊಡ್ಡ ಪ್ರಮಾಣದಲ್ಲಿ ಅಂತರ ನಿರ್ಮಾಣವಾಗಿದೆ. ಇನ್ನು ಕರ್ನಾಟಕ ಜನ ಇದನ್ನು ಸಹಿಸಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಪ್ರತಿಭಟನೆ ಆಗಿದೆ. ಹೇಳಿಕೆ ನೀಡುವ ಅವರಿಗೆ ಪ್ರತಿಭಟನೆ ಸಹಿಸಿಕೊಳ್ಳುವ ಶಕ್ತಿಯೂ ಇರಬೇಕು. ಸುಮ್‌ಸುಮ್ನೆ ಏನೋ ಹೇಳಿಕೆ ನೀಡಿ ಜೀರ್ಣಿಸಿಕೊಳ್ಳುತ್ತೇನೆ ಎಂಬ ಕಾಲ ಈಗ ಇಲ್ಲ ಎಂದರು.

ಸಾವರ್ಕರ್ ಅವರಿಗೆ ವೀರ ಸಾವರ್ಕರ್ ಎಂಬ ಬಿರುದಿದೆ. ಹೋರಾಟದ ಕಾರಣಕ್ಕೆ ವೀರ ಎಂದು ಕರೆಯಲಾಗಿದೆ. ಅವರ ಬಗ್ಗೆ ಇಷ್ಟು ಹಗುರವಾಗಿ ಮಾತಾಡುತ್ತಿದ್ದಾರೆ ಎಂದರೆ, ಸಿದ್ದರಾಮಯ್ಯ ಅವರಿಗೆ ಇತಿಹಾಸದ ಬಗ್ಗೆೆ ಅರ್ಧಂಬರ್ಧ ಗೊತ್ತಿದೆ. ಪೂರ್ತಿ ಗೊತ್ತಿದ್ದರೆ ಹೀಗೆ ಮಾತನಾಡಲು ಸಾಧ್ಯವಿಲ್ಲ ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ಅವಹೇಳನೆ ಮಾಡಲು ಸಾಧ್ಯವಿಲ್ಲ. ಅಂಡಮಾನಿನ ಸಲ್ಯೂಲರ್ ಜೈಲನ್ನು ಒಮ್ಮೆ ನೋಡಿಬನ್ನಿ. ಸಮಾಜವಾದಿ ಎನ್ನುತ್ತಲೇ ವೈಭವದಿಂದ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಿರಿ. ಸಾರ್ವಕರ್ ಅವರು ಇದ್ದ ಜೈಲು ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ಬ್ರಿಟಿಷ್ ವಿರುದ್ಧದ ಹೋರಾಟ, ಅವರಿಗೆ ನೀಡಿದ ಕ್ರೂರ ಶಿಕ್ಷೆಯ ಬಗ್ಗೆೆ ತಿಳಿಯುತ್ತದೆ. ಬಿಡುವು ಮಾಡಿಕೊಂಡು ಅಲ್ಲಿಗೆ ಹೋಗಿ ನೋಡಿ ಬರುವುದು ಒಳ್ಳೆಯದು. ಆ ಮೇಲೆ ಸಾವರ್ಕರ್ ಬಗ್ಗೆ ಮಾತನಾಡಿ. ಅವರು ಈ ದೇಶದ ರಾಷ್ಟ್ರೀಯತೆಯ ಪ್ರತೀಕ. ಸಾವರ್ಕರ್ ಬಗ್ಗೆೆ ಅವಹೇಳನಕಾರಿಯಾಗಿ ಮಾತನಾಡಿದ್ದು ಮೆರವಣಿಗೆ, ಬ್ಯಾನರ್, ಪುತ್ಥಳಿ, ರಸ್ತೆ ಹೆಚ್ಚಾಗಲಿದೆ. ಎಲ್ಲೆಡೆ ಸಾವರ್ಕರ್ ಹೆಸರು ಬರಲು ಪರೋಕ್ಷವಾಗಿ ಸಿದ್ದರಾಮಯ್ಯ ಅವರೂ ಕಾರಣವಾಗಲಿದ್ದಾರೆ ಎಂದು ಕಿಡಿಕಾರಿದರು.

ಹಿಂಸೆ ಮೇಲೆ ನಮಗೆ ನಂಬಿಕೆ ಇಲ್ಲ ಮತ್ತು ಅದನ್ನು ಒಪ್ಪುವುದು ಇಲ್ಲ. ಸಿದ್ದರಾಮಯ್ಯ ಅವರಿಗೆ ಜೀವ ಬೇದರಿಕೆ ಇದ್ದರೆ ಲಿಖಿತ ದೂರು ನೀಡಲಿ ಖಂಡಿತ ಅವರಿಗೆ ಸರಕಾರ ಈಗಲೂ ಭದ್ರತ ನೀಡಿದೆ, ಮುಂದೆಯೂ ನೀಡಲಿದೆ. ಪ್ರತಿಭಭಟನೆ ಮಾಡಬಾರದು ಎನ್ನುವುದು ಸರಿಯಲ್ಲ. ಇದು ಪ್ರಜಾಪ್ರಭುತ್ವ ದೇಶ ಎಂದು ತಿರುಗೇಟು ನೀಡಿದರು.

ನಮಾಜ್‌ಗೆ ಅವಕಾಶವಿಲ್ಲ
ಈ ದೇಶದ ಸಂಪ್ರದಾಯ, ಪರಂಪರೆ ಉಳಿಸಬೇಕು. ಅನಗತ್ಯವಾಗಿ ಎಲ್ಲವನ್ನು ವಿವಾದ ಮಾಡುವುದು ಸರಿಯಲ್ಲ. ಗಣೇಶೋತ್ಸವ ಅನೇಕ ದಶಕಗಳಿಂದ ಸರಕಾರಿ ಮೈದಾನ, ಶಾಲಾವರಣದಲ್ಲಿ ನಡೆದುಕೊಂಡು ಬರುತ್ತಿದೆ. ಇದನ್ನು ಇನ್ಯಾವುದೋ ವಿಚಾರಕ್ಕೆ ಹೋಲಿಕೆ ಮಾಡಿ ವಿವಾದ ಸೃಷ್ಟಿಸುವುದು ಸರಿಯಲ್ಲ. ಶಾಲೆಗಳಲ್ಲಿ ನಮಾಜ್‌ಗೆ ಅವಕಾಶ ನೀಡುವುದಿಲ್ಲ. ಈ ಬಗ್ಗೆ ಸರಕಾರ ಸ್ಪಷ್ಟ ನಿಲುವು ಹೊಂದಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next