ಬೆಂಗಳೂರು: ಕೊಡಗಿನ ಜನ ಒಳ್ಳೆಯವರು. ನಾನು ಮಡಿಕೇರಿ ಜನರ ವಿರುದ್ಧ ಹೋರಾಟ ಮಾಡಲು ಮುಂದಾಗಲಿಲ್ಲ. ಬಿಜೆಪಿ ಆರ್ ಎಸ್ ಎಸ್ ಪ್ರೇರಿತ ಕಿಡಿಗೇಡಿ ಪುಂಡಾಟಿಕೆ ವಿರುದ್ಧ ನಮ್ಮ ಹೋರಾಟ ಮಾಡುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಮಾಂಸ ಸೇವಿಸಿಲ್ಲ. ಅಕ್ಕಿರೊಟ್ಟಿ ಕಳಲೆ ಪಲ್ಯ ತಿಂದಿದ್ದೆ. ಕೋಳಿಸಾರು ತಂದಿದ್ದರು ತಿಂದಿರಲಿಲ್ಲ. ಆಹಾರ ಪದ್ಧತಿ ಬಗ್ಗೆ ಪ್ರೆಶ್ನೆ ಮಾಡಿದ್ದಕ್ಕೆ ನಾನು ಮಾಂಸಾಹಾರ ತಿಂತೇನೆ ನೀವ್ಯಾರೂ ಕೇಳೋಕ್ಕೆ ಅಂದಿದ್ದೆ ಅಷ್ಟೇ ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಮಡಿಕೇರಿ ಚಲೋ ಪಾದಯಾತ್ರೆ ರದ್ದು: ಸಿದ್ದರಾಮಯ್ಯ ಘೋಷಣೆ
ನಾನು ಕಾನೂನಿಗೆ ಗೌರವ ಕೊಡುತ್ತೇನೆ. ಅಲ್ಲಿನ ಶಾಸಕರು ಕುಮ್ಮಕ್ಕು ನೀಡಿ ಪ್ರಚೋದನೆ ಮಾಡಿ ಪ್ರತಿಭಟನೆ ಮಾಡಿಸಿದ್ದಾರೆ ಎಂದು ಗುಡುಗಿದರು.
ಸಿದ್ದರಾಮಯ್ಯ ಕೊಡಗಿನಲ್ಲಿ ಹುಟ್ಟಿದ್ರಾ ಅಂತಾರೆ. ಹಾಗಾದ್ರೆ ಸಾವರ್ಕರ್ ಕೊಡಗಿನಲ್ಲಿ ಹುಟ್ಟಿದ್ರಾ? ಹಂದಿ ಮಾಂಸ ಪ್ರತಾಪ್ ಸಿಂಹ ತಿನ್ನಲಿ, ಯತ್ನಾಳ್ ತಿನ್ನಲಿ. ನಾನು ನಾನು ಹಂದಿ ದನದ ಮಾಂಸ ತಿನ್ನಲ್ಲ ಎಂದು ತಿರುಗೇಟು ನೀಡಿದರು.