Advertisement

Siddaramaiah ಭಾವನೆಗಳ ಜತೆ ಚೆಲ್ಲಾಟವಾಡುತ್ತಿದ್ದಾರೆ: ಡಾ| ಅಶ್ವತ್ಥ ನಾರಾಯಣ

12:21 AM Dec 27, 2023 | Team Udayavani |

ಕಡಬ: ಹಿಜಾಬ್‌ ನಿಷೇಧ ಹಿಂದೆಗೆದುಕೊಳ್ಳುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನಿರ್ಧಾರ ಸದುದ್ದೇಶದಿಂದ ಕೂಡಿಲ್ಲ, ಮಕ್ಕಳಲ್ಲಿ ಧರ್ಮಾಧಾರಿತ ವಿಭಜನೆಯನ್ನು ಮಾಡುವ ಪ್ರಯತ್ನ ಅವರು ಮಾಡುತ್ತಿದ್ದಾರೆ. ರಾಜ್ಯದ ಜನರ ಭಾವನೆಯ ಜತೆ ಚೆಲ್ಲಾಟವಾಡುತ್ತಿದ್ದಾರೆ. ಇದು ತುಷ್ಟೀಕರಣದ ರಾಜಕಾರಣ ಎಂದು ಮಾಜಿ ಉಪಮುಖ್ಯಮಂತ್ರಿ ಡಾ| ಅಶ್ವತ್ಥನಾರಾಯಣ ಅಕ್ರೋಶ ವ್ಯಕ್ತಪಡಿಸಿದರು.

Advertisement

ಅವರು ಮಂಗಳವಾರ ಕಡಬದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಹಿಜಾಬ್‌ ನಿಷೇಧ ಕಾನೂನನ್ನು ಈ ಹಿಂದೆ ರಾಜ್ಯ ಸರಕಾರ ಸದುದ್ದೇಶದಿಂದ ಮಾಡಿತ್ತು. ಅದು ಬಿಜೆಪಿಯವರು ತಂದಿರುವುದಲ್ಲ. ಒಂದು ಸರಕಾರವಾಗಿ ಮಕ್ಕಳಲ್ಲಿ ವ್ಯತ್ಯಾಸಗಳು ಇರಬಾರದು. ಶಾಲೆಗೆ ಬರುವ ಎಲ್ಲ ಮಕ್ಕಳು ಒಂದಾಗಿರಬೇಕು. ಒಂದು ಧರ್ಮಾಧಾರಿತವಾಗಿ ಇರಬಾರದು ಎಂದು ಸಮವಸ್ತ್ರ ತರಲಾಗಿತ್ತು. ಅದರ ಆಧಾರದಲ್ಲಿ ಸರಕಾರ ಅಂದು ಕ್ರಮ ಕೈಗೊಂಡಿದೆ. ಈಗಾಗಲೇ ಹೈಕೋರ್ಟ್‌ ಸರಕಾರದ ಕ್ರಮವನ್ನು ಎತ್ತಿಹಿಡಿದಿದೆ.

ಸುಪ್ರೀಂ ಕೋರ್ಟ್‌ನಲ್ಲೂ ತೀರ್ಪು ಕೊಡುವುದು ಬಾಕಿ ಇದೆ. ಇದರ ಮಧ್ಯದಲ್ಲಿ ರಾಜಕೀಯ ಪ್ರೇರಿತವಾಗಿ ಸಿದ್ದರಾಮಯ್ಯ ಗೊಂದಲ ನಿರ್ಮಾಣ ಮಾಡುವ ಹೇಳಿಕೆ ನೀಡಿ ಓಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿದ್ದಾರೆ. ಅದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅವರ ನಿಲುವನ್ನು ವಿರೋಧಿಸಿ ಹೋರಾಟ ಮಾಡಲಾಗುವುದು ಎಂದು ಡಾ| ಅಶ್ವತ್ಥ ನಾರಾಯಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next