ಕುಳಗೇರಿ ಕ್ರಾಸ್ (ಬಾಗಲಕೋಟೆ): ಚಂದ್ರು ಹತ್ಯೆ ಪ್ರಕರಣ ಸಂಬಂಧ ಮಾಹಿತಿ ಇಲ್ಲ ಎಂದ ಸಿಎಂ ಬೊಮ್ಮಾಯಿ ಹತ್ತಿರ ಇಂಟಿಲಿಜನ್ಸಿ ಇಲ್ಲವೇ? ಬೆಳಿಗ್ಗೆ ಸಾಯಂಕಾಲ ಇವರಿಗೆ ಇಂಟಲಿಜನ್ಸಿ ಮಾಹಿತಿ ನೀಡಲ್ವಾ? ಇಂಟಲಿಜೆನ್ಸಿ ನೇರವಾಗಿಯೇ ಇದೆಯೆಲ್ಲಾ, ಮಾಹಿತಿ ಇಲ್ಲಾ ಅಂದ್ರೆ ಏನು ಹೇಳಬೇಕು ಎಂದು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ಆಲೂರ ಎಸ್.ಕೆ. ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗಬೇಕು. ನಾನು ಮಾಡಲಿ, ನೀವು ಮಾಡಲಿ, ಯಾವ ಧರ್ಮದವರೇ ಮಾಡಲಿ ಶಿಕ್ಷೆಯಾಗಬೇಕು. ಯಾವ ಧರ್ಮದ ಪರನೂ ಮಾತನಾಡುವುದಿಲ್ಲ. ಯಾರೇ ತಪದಪು ಮಾಡಿದರೂ ಶಿಕ್ಷೆಯಾಗಬೇಕು ಎಂದು ಹೇಳಿದರು.
ಇದನ್ನೂ ಓದಿ:ಉರ್ದು ಮಾತನಾಡದ ಕಾರಣಕ್ಕೇ ಚಂದ್ರು ಕೊಲೆ: ಪುನರುಚ್ಚರಿಸಿದ ಬಿಜೆಪಿ
ಅಲ್ ಖೈದಾ ಮುಖಂಡ ಮಂಡ್ಯ ಯುವತಿ ಅಲ್ಲಾ ಹೋ ಅಕ್ಬರ್ ಹೇಳಿಕೆಗೆ ಬೆಂಬಲ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಇದನ್ನೆಲ್ಲ ಬಿಜೆಪಿಗರೇ ಹುಟ್ಟಿ ಹಾಕಿರುವುದು. ಎಲ್ಲಿರಿ ಉಗ್ರ, ಯಾರೀ ಉಗ್ರ ಇದನ್ನೆಲ್ಲ ಆರ್ ಎಸ್ ಎಸ್ ನವರೇ ಕಳಿಸಿರುವುದು. ಸಮಾಜದಲ್ಲಿ ಅಶಾಂತಿ ಉಂಟುಮಾಡಲಿಕ್ಕೆ, ಸಾಮರಸ್ಯ ಹಾಳು ಮಾಡಲಿಕ್ಕೆ , ಮತಗಿಟ್ಟಿಸಿಕೊಳ್ಳೋಕೆ ಹೀಗೆ ಹುಟ್ಟು ಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಗೃಹ ಸಚಿವರು ಮೋಸ್ಟ್ ಇನ್ ಎಫಸಿಯೆಂಟ್ ಹೋಮ್ ಮಿನಿಸ್ಟರ್.ಅವರು ಈ ತರಹ ಹೇಳಿಕೆ ಕೊಡುವುದು ಇದೆ ಮೊದಲೇನಲ್ಲ. ಒಬ್ಬ ಹೋಮ್ ಮಿನಿಸ್ಟರ್ ಆದವರು ಸರಿಯಾಗಿ ಮಾಹಿತಿ ತಗೆದುಕೊಂಡು ಮಾತಾಡುಬೇಕು. ಇವರ ತಲೆಯಲ್ಲಿ ಕೋಮುವಾದ ವಿಚಾರ ತುಂಬಿಕೊಂಡಿದೆ ಎಂದರು.
ಒಬ್ಬ ಹಿಂದೂ ಹುಡುಗ ಸತ್ತಿದ್ದಾನೆ, ಅದು ಆಕ್ಸಿಡೆಂಟ್ ಆಗಿ ಸತ್ತಿರುವುದು ಅಂತ ಪೊಲೀಸ್ ವರದಿ ಇದೆ. ಇವರು ಚಾಕು ತಗೊಂಡು ಚುಚ್ಚಿದ್ರು ಅಂತ ಹೇಳಿದರು. ಜನರನ್ನು ಉದ್ರೇಕ ಮಾಡೋದಕ್ಕೆ ಹಿಜಾಬ್ ವಿಷಯ, ಹಲಾಲ್, ಮಾವಿನ ಹಣ್ಣು, ಭಗವತ್ ಗೀತೆ ವಿಚಾರ, ಈಗ ಮಸೀದಿಯಲ್ಲಿ ಮೈಕ್ ವಿಚಾರವನ್ನಿಟ್ಟುಕೊಂಡು ಇವರು ಈ ರೀತಿ ಮಾಡುತ್ತಿದ್ದಾರೆ. ಇವರು ಅಧಿಕಾರದಲ್ಲಿ ಇರೋಕೆ ಲಾಯಕ್ ಇಲ್ಲ ಎಂದು ವಾಗ್ದಾಳಿ ನಡೆಸಿದರು.