Advertisement
ಸಿದ್ದರಾಮಯ್ಯ ಅವರ ನಾಮಫಲಕ ಕಿತ್ತು ಹಾಕಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ನಂತರ ಸಂಜೆ ವೇಳೆಗೆ ಅಧಿಕಾರಿಗಳು ಆಗಮಿಸಿ ಮತ್ತೆ “ಸಿದ್ದರಾಮಯ್ಯ, ವಿಧಾನಸಭೆ ಪ್ರತಿಪಕ್ಷದ ನಾಯಕ’ ಎಂಬ ನಾಮಫಲಕವನ್ನು “ಕಾವೇರಿ’ ನಿವಾಸದ ಕಾಂಪೌಂಡ್ ಗೋಡೆಗೆ ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ. ಹೊಸ ನಾಮಫಲಕವನ್ನು ಅಳವಡಿಸುವ ದೃಷ್ಟಿಯಿಂದ ಹಳೆಯ ನಾಮಫಲಕವನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದ್ದರೆಂದು ಸಿದ್ದರಾಮಯ್ಯ ಅವರ ಆಪ್ತ ಮೂಲಗಳು ತಿಳಿಸಿವೆ.
Related Articles
ಮೈಸೂರು: “ಕಾವೇರಿ’ ನಿವಾಸ ದಲ್ಲಿ ತಮ್ಮ ಹೆಸರಿದ್ದ ಬೋರ್ಡ್ ತೆರವುಗೊಳಿಸಿರುವು ದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿ, “ಬೋರ್ಡ್ ತೆರವುಗೊಳಿಸುವ ಅಗತ್ಯ ಏನಿತ್ತು’ ಎಂದು ಪ್ರಶ್ನಿಸಿದ್ದಾರೆ. ಸಿಎಂ ಆಗಿದ್ದಾಗಿನಿಂದಲೂ ಕಾವೇರಿಯಲ್ಲಿ ವಾಸವಾಗಿದ್ದೇನೆ. ಈಗ ಪ್ರತಿಪಕ್ಷ ನಾಯಕನಾಗಿರುವುದರಿಂದ ಅದೇ ಮನೆಯನ್ನು ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ.
Advertisement
ಆದರೆ, ಈಗ ನನ್ನ ಹೆಸರಿನ ಬೋರ್ಡ್ ತೆರವುಗೊಳಿಸಿರುವುದು ಏಕೆ ಎಂಬುದು ಗೊತ್ತಿಲ್ಲ. ಒಂದು ವೇಳೆ, ಹೇಳಿದ್ದರೆ ಮನೆ ಬಿಟ್ಟು ಕೊಡುತ್ತಿದ್ದೆ ಎಂದು ಪ್ರತಿಕ್ರಿಯಿಸಿದರು. ಅದು ಸರ್ಕಾರಿ ಬಂಗಲೆ, ಯಾವತ್ತಿದ್ದರೂ ಖಾಲಿ ಮಾಡಲೇ ಬೇಕು. ಹಿಂದೆ ಜಾರ್ಚ್ ಅವರಿಗೆ “ಕಾವೇರಿ’ ನಿಗದಿಪಡಿಸಲಾಗಿತ್ತು. ಆದರೆ, ಸಿಎಂ ಆಗಿ ಅದೇ ಬಂಗಲೆಯಲ್ಲಿ ಇದ್ದುದ್ದರಿಂದ ನಾನೇ ಇರುತ್ತೇನೆಂದು ಜಾರ್ಜ್ ಅವರಲ್ಲಿ ಕೇಳಿದ್ದರಿಂದ ಅವರು ಬಂದಿರಲಿಲ್ಲ ಎಂದರು.