Advertisement
ಪಟ್ಟಣದ ಕನಕ ಸಮುದಾಯ ಭವನದಲ್ಲಿ ಶುಕ್ರವಾರ ಸಿದ್ದರಾಮಯ್ಯ ನವರ 74 ನೇ ಹುಟ್ಟು ಹಬ್ಬದ ಅಂಗವಾಗಿ ಪಿರಿಯಾಪಟ್ಟಣ ಬ್ಲಾಕ್ ಕಾಂಗ್ರೆಸ್ ಹಾಗೂ ಬೆಟ್ಟದಪುರ ಬ್ಲಾಕ್ ವತಿಯಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಯಾವುದೇ ತಾರತಮ್ಯ ನೀತಿ ಅನುಸರಿದೆ ಎಲ್ಲಾ ವರ್ಗದ, ಎಲ್ಲಾ ಪ್ರದೇಶಗಳ ಅಭಿವೃದ್ಧಿಗೆ ಶ್ರಮಿಸಿರುವ ಇವರು ಅನ್ನಭಾಗ್ಯದಂತಹ ಯೋಜನೆಯನ್ನು ಅನುಷ್ಠಾನಗೊಳಿಸಿ ಹಸಿವು ಮುಕ್ತ ಕರ್ನಾಟಕವನ್ನಾಗಿ ಮಾಡಿದ ಕೀರ್ತಿ ತನ್ನದಾಗಿಸಿಕೊಂಡಿದ್ದಾರೆ.
ಬಾಲ್ಯದ ನೆನಪು:
ಕಡು ಬಡತನದಲ್ಲಿ ಹುಟ್ಟಿ, ದನ ಕಾಯುತ್ತಿದ್ದ ಸಿದ್ದರಾಮಯ್ಯ ನವರು ಪ್ರಾಥಮಿಕ ಶಿಕ್ಷಣ ಪಡೆಯಲು ಸಾಧ್ಯವಾಗದೆ ನೇರವಾಗಿ 5 ನೇ ತರಗತಿಗೆ ಸೇರಿಕೊಂಡು ವಕೀಲರಾಗಿ ವೃತ್ತಿ ಆರಂಭಿಸಿದ ಸಿದ್ದರಾಮಯ್ಯ ನವರು ಹಂತಹಂತವಾಗಿ ಮೇಲೆ ಬಂದು, ತಾಲ್ಲೂಕು ಬೋರ್ಡ್ ಸದಸ್ಯರಾಗುವ ಮೂಲಕ ರಾಜಕಾರಣ ಆರಂಭಿಸಿ ಶಾಸಕರಾಗಿ, ಸಚಿವರಾಗಿ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿ ಈಗ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಯಾರೂ ಕೂಡ ಹಸಿವಿನಿಂದ ಬಳಲಬಾರು ಎಂಬ ಕಾರಣಕ್ಕೆ ಬಡವರಿಗೆ ಉಚಿತವಾಗಿ ಅಕ್ಕಿ ನೀಡಲು ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರುವ ಮೂಲಕ ಬಡವರ ಪಾಲಿನ ಅನ್ನದಾತರಾದರು ಎಂದಿದ್ದಾರೆ.
ಸಮಾಜದಲ್ಲಿ ನೊಂದವರ ಕಷ್ಟಗಳನ್ನು ಅರಿತುಕೊಂಡು ಕೆಲಸ ಮಾಡುತ್ತಿರುವ ಇವರು ಕೃಷಿ, ತೋಟಗಾರಿಕೆ, ಪಶುಪಾಲನೆ, ಸಹಕಾರ, ವಿದ್ಯಾಸಿರಿ, ಯಶಶ್ವಿನಿ, ಮನಸ್ವಿನಿ, ಶಾದಿ ಭಾಗ್ಯ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಆರೋಗ್ಯ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಸತಿ, ಕಾರ್ಮಿಕ, ಉದ್ಯೋಗ ಮತ್ತು ತರಬೇತಿ ಇಲಾಖೆ, ಇಂಧನ, ಗ್ರಾಮೀಣಾಭಿವೃದ್ಧಿ, ಕಂದಾಯ ಸೇರಿದಂತೆ ಎಲ್ಲಾ ಇಲಾಖೆಗಳಲ್ಲೂ ಮಹತ್ತರವಾದ ಬದಲಾವಣೆ ತರುವ ಮೂಲಕ ರೈತರು ಮತ್ತು ಬಡ ವರ್ಗದ ಜನರಿಗೆ ಆಶ್ರಯವಾಗಿದ್ದಾರೆ ಇವರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವೆ ಮಾಡುವ ಅವಕಾಶಗಳು ಲಭಿಸಲಿ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು ಮಾತನಾಡಿ ದಾನದಾನಗಳಲ್ಲಿ ರಕ್ತದಾನ ಅತ್ಯಂತ ಶ್ರೇಷ್ಠ ಹಾಗೂ ಮಹತ್ವವಾದದ್ದು, ರಕ್ತದಾನ ಮತ್ತೊಬ್ಬರ ಪ್ರಾಣ ಉಳಿಸುವ ಜತೆಗೆ ವ್ಯಕ್ತಿ ಆರೋಗ್ಯಯುತ ಜೀವನ ನಡೆಸಲು ಸಹಕಾರಿಯಾಗಲಿದೆ
ರಕ್ತಕ್ಕೆ ಪರ್ಯಾಯವಾಗಿ ಯಾವುದೂ ಇಲ್ಲ, ಎಷ್ಟೋ ಬಾರಿ ಸಾವಿನ ಅಂಚಿನಲ್ಲಿರುವವರ ಜೀವ ಉಳಿಸಲು ರಕ್ತವೇ ವರದಾನವಾಗಿದೆ ಆದ್ದರಿಂದ ಪ್ರತಿಯೊಬ್ಬರೂ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರಬೇಕು. 18 ರಿಂದ 60 ವರ್ಷ ವಯಸ್ಸಿನ ಆರೋಗ್ಯವಂತ ಪುರುಷರು ಹಾಗೂ ಮಹಿಳೆಯರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದು ರೂಢಿಸಿಕೊಳ್ಳಬೇಕು ಎಂದರು.
ಒಂದು ಯೂನಿಟ್ ರಕ್ತದಿಂದ ನಾಲ್ಕು ಜನರ ಪ್ರಾಣ ಉಳಿಸಬಹುದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಉತ್ಸಾಹದಿಂದ ರಕ್ತದಾನ ಮಾಡಲು ಮುಂದೆ ಬರಬೇಕು. ಇದರಿಂದ ಪ್ರಾಣ ಹಾನಿಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. ರಕ್ತದಾನ ಇತರರಿಗೆ ಮರುಜನ್ಮನೀಡುವ ಶ್ರೇಷ್ಠ ಮತ್ತು ಸಾರ್ಥಕ ಸೇವೆಯಾಗಿದೆ’ ಎಂದರು.
ಈ ಸಂದರ್ಭದಲ್ಲಿ 85 ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.
ಇದನ್ನೂ ಓದಿ : ಚೀನಾ ಟು ಟರ್ಕಿ, ಜಪಾನ್…ಭಾರೀ ಮಳೆ, ಪ್ರವಾಹಕ್ಕೆ ತತ್ತರ, ಜನಜೀವನ ಅಸ್ತವ್ಯಸ್ತ
ಕಾರ್ಯಕ್ರಮಕ್ಕೂ ಮುನ್ನ ಪಿರಿಯಾಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಮಸಣಿಕಮ್ಮ ದೇವಾಲಯದಲ್ಲಿ ಸಿದ್ದರಾಮಯ್ಯ ನವರಿಗೆ ಇನ್ನೂ ಹೆಚ್ಚಿನ ಆರೋಗ್ಯ, ಆಯಸ್ಸು ಹಾಗೂ ಅಧಿಕಾರ ಲಭಿಸಲಿ ಎಂದು ಕೆ.ವೆಂಕಟೇಶ್ ನೇತೃತ್ವದಲ್ಲಿ ಸಿದ್ದರಾಮಯ್ಯ ನವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪಿರಿಯಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮುತ್ತುರಾಣಿ, ಪುರಸಭಾ ಸದಸ್ಯರಾದ ಮಂಜುನಾಥ್, ರವಿ, ಪ್ರಕಾಶ್, ಅಬ್ದುಲ್ ಹರ್ಷದ್, ಚಾಮರಾಜ್, ಮುಖಂಡರಾದನಿತಿನ್ ವೆಂಕಟೇಶ್, ರಹಮತ್ ಜಾನ್ ಬಾಬು, ಪಿ.ಎಸ್.ವಿಷಕಂಠಯ್ಯ, ಬೂತನಹಳ್ಳಿ ಕರೀಗೌಡ, ಚಂದ್ರೇಗೌಡ, ಸೀಗೂರು ವಿಜಯ ಕುಮಾರ್, ಬಿರ್ಲಾ ಹರೀಶ್, ಪಿ.ಮಹದೇವ್, ಬಸವರಾಜು, ತೆಲುಗಿನಕುಪ್ಪೆ ನಾಗಣ್ಣ, ಅನಿಲ್ ಕುಮಾರ್, ಪಿ.ಪಿ.ಮಹದೇವ್,ಡಿ.ಎ. ಜವರಪ್ಪ, ಪಿ.ಡಿ.ತ್ರಿನೇಶ್, ಎಂ. ಮಂಜು, ಆರ್.ಟಿ.ರೇವಣ್ಣ, ರಾಮಚಂದ್ರ, ಜಯಣ್ಣ, ಜೆ.ಮೋಹನ್, ಸ್ಟೂಡಿಯೋ ಆನಂದ್, ಮುರುಳೀಧರ್, ಕಣಗಾಲ್ ರಮೇಶ್, ಸಾಲುಕೊಪ್ಪಲು ಪುಟ್ಟರಾಜು, ಕೋಮಲಾಪುರ ಹರೀಶ್, ಶಿವರಾಜ್, ಹಬಟೂರು ರಘು, ಕೃಷ್ಣೇಗೌಡ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.
ಇದನ್ನೂ ಓದಿ : 250 ಅಭ್ಯರ್ಥಿಗಳಿಗೆ ಸೇನಾ ತರಬೇತಿ; 225 ಬಾಲಕ-25 ಬಾಲಕಿಯರು ಆಯ್ಕೆ