Advertisement

ರಾಜ್ಯದ ಬಡವರ ಹೃದಯ ತಟ್ಟಿದ ಸಿದ್ದರಾಮಯ್ಯ

02:45 PM Jul 07, 2017 | |

ಜಗಳೂರು: ಸಿದ್ದರಾಮಯ್ಯನವರು ಈ ರಾಜ್ಯದ ಬಡವರ ಹೃದಯ ತಟ್ಟಿದ್ದಾರೆ. ಅವರು ನೀಡಿದ ಕಾರ್ಯಕ್ರಮಗಳು ದೀನ ದಲಿತರ ಮೆಚ್ಚುಗೆ ಪಾತ್ರವಾಗಿವೆ ಎಂದು ಎಐಸಿಸಿ ಕಾರ್ಯದರ್ಶಿ ಅಸಗೋಡು ಜಯಸಿಂಹ ತಿಳಿಸಿದರು.

Advertisement

ಪಟ್ಟಣದ ವಾಲ್ಮೀಕಿ ಭವನದಲ್ಲಿ ಗುರುವಾರ ಜಗಳೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ನೀಡಿದ ಅನುದಾನ ರಾಜ್ಯದ ಇತಿಹಾಸದಲ್ಲಿ ನೀಡಿಲ್ಲ. ಪ್ರತಿಯೊಂದು
ಗ್ರಾಮದಲ್ಲಿ ಸಿಸಿ ರಸ್ತೆಯಂತಹ ಮೂಲ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದಾರೆ
ಎಂದರು.

ಸಿದ್ದರಾಮಯ್ಯನವರ 150ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಜನತೆಗೆ ನೀಡಿದ್ದಾರೆ. ಕಾರ್ಯಕ್ರಮಗಳು ಜಾರಿಗೆ ಬಂದ ಹೊಸದರಲ್ಲಿ
ಸಣ್ಣ ಪುಟ್ಟ ದೋಷಗಳು ಆಗುವುದು ಸಹಜ. ಸರಿಯಾಗಿ ಅನುಷ್ಠಾನವಾಗಿಲ್ಲ ಎಂದರೆ ಅದರಲ್ಲಿ ಅಯೋಗ್ಯ ಅಧಿಕಾರಿಗಳು ಮತ್ತು
ರಾಜಕಾರಣಿಗಳು ಮೋಸದ ಕೈ ವಾಡವಿರುತ್ತದೆ. ಅಂತಹವರಿಗೆ ಮತದಾರರಾದ ನೀವುಗಳು ಬುದ್ಧಿ ಕಲಿಸಬೇಕು. ಇದರಿಂದ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದರು.

ಯಾರಲ್ಲಿ ಅತಿ ಹೆಚ್ಚು ಪ್ರಾಮಾಣಿಕತೆ ಇರುತ್ತದೋ ಅಂತಹವರನ್ನು ಕಾಂಗ್ರೆಸ್‌ ಪಕ್ಷ ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳಲಿದೆ. ಅಂತಹವರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲಿದೆ. ಪಕ್ಷದ ಸೂಚಿಸಿದ ಕೆಲಸಗಳನ್ನು ಚಾಚು ತಪ್ಪದೇ ನಿರ್ವಹಿಸಬೇಕು. ಪಕ್ಷವನ್ನು ಸಂಘಟಿಸಬೇಕು. ಪಕ್ಷದ ಸಂಘಟನೆಯ ಪ್ರಬಲವಾಗಿದ್ದಾರೆ ಮಾತ್ರ ಗೆಲುವು ಸಾಧಿ ಸಲು ಸುಲಭವಾಗುತ್ತದೆ ಎಂದರು. ದೇವರಾಜ್‌ ಅರಸ್‌ ಅಭಿವೃದ್ಧಿ ನಿಗಮದ ಅಧ್ಯಕ್ಷ ಹುಚ್ಚಪ್ಪ ಮಾತನಾಡಿ, ಜಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರ ಹುಮ್ಮಸ್ಸು ನೋಡಿದರೆ ಸಂಘಟನೆ ಪ್ರಬಲವಾಗಿದೆ ಎಂದು ಅನಿಸುತ್ತದೆ. ಪಕ್ಷದಲ್ಲಿರುವ ಸಣ್ಣಪುಟ್ಟ ಸಮಸ್ಯೆಗಳನ್ನು ಕುಳಿತು 
ಬಗೆಹರಿಸಿಕೊಳ್ಳಬೇಕು. ಬೂತ್‌ ಮಟ್ಟದಲ್ಲಿ ಸದಸ್ಯತ್ವವನ್ನು ಮಾಡಿಸಬೇಕು. ಮುಂದಿನ ವಾರವೇ ಎಐಸಿಸಿ ವೀಕ್ಷಕರು ದಾವಣಗೆರೆ
ಜಿಲ್ಲೆಗೆ ಬರಲಿದ್ದಾರೆ. ಆ ವೇಳೆಗೆ ನಾವು ಎಲ್ಲ ರೀತಿಯಲ್ಲಿ ತಯಾರಿಯಾಗಬೇಕೆಂದರು.

ಶಾಸಕ ಎಚ್‌.ಪಿ.ರಾಜೇಶ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಬಿ.ಮಂಜಪ್ಪ, ಜಿಪಂ ಮಾಜಿ ಸದಸ್ಯ ಕೆ.ಪಿ.ಪಾಲಯ್ಯ, ಅರಸಿಕೆರೆ
ದೇವೇಂದ್ರಪ್ಪ, ಪುಷ್ಪ ಲಕ್ಷ ಣಸ್ವಾಮಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ತಿಪ್ಪೇಸ್ವಾಮಿಗೌಡ, ಮುಖಂಡರಾದ ಬಿಸ್ತುವಳ್ಳಿ ಬಾಬು, ಎಪಿಎಂಸಿ
ಅಧ್ಯಕ್ಷ ಶಿವಕುಮಾರ ಸೇರಿದಂತೆ ಮತ್ತಿತರರು ಮಾತನಾಡಿದರು. ತಾಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಮುದೇಗೌಡ್ರಬಸವರಾಜಪ್ಪ, ಜಿಪಂ ಸದಸ್ಯೆ ಉಮಾ ವೆಂಕಟೇಶ್‌, ಪಪಂ ಸದಸ್ಯರಾದ ಹಾಲಸ್ವಾಮಿ, ಚಂದ್ರಪ್ಪ, ಅಪ್ಸರಾ
ಮಂಜು, ಮುಖಂಡರಾದ ಲತ್ತೀಪ್‌ಸಾಬ್‌, ಕರಿಬಸಪ್ಪ, ಶಿವನಗೌಡ, ಪಲ್ಲಾಗಟ್ಟೆ ಶೇಖರಪ್ಪ, ಕೇಶವಮೂರ್ತಿ ಸೇರಿದಂತೆ ಮತ್ತಿತರರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next