Advertisement

ಸಿದ್ದು ಸರ್ವಾನುಮತದ ನಾಯಕರಾಗುವ ಸ್ಥಿತಿಯಲ್ಲಿಲ್ಲ

11:16 PM Oct 08, 2019 | Team Udayavani |

ರಾಮನಗರ: “ಕಾಂಗ್ರೆಸ್‌ ಇಂದು ಒಡೆದ ಮನೆ. ಅಲ್ಲಿ ಸರ್ವಾನುಮತವಿಲ್ಲ. ವಿಪಕ್ಷ ನಾಯಕನ ಆಯ್ಕೆ ವಿಚಾರದಲ್ಲಿ ಅದು ಒಡೆದ ಮನೆಯಾಗಿದೆ’ ಎಂದು ಸಚಿವ ಸಿ.ಟಿ.ರವಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ಸಿಗರದ್ದು ಒಡೆದ ಮನಸ್ಸುಗಳು, ಸಿದ್ದರಾಮಯ್ಯ ಅವರು ಸರ್ವಾನುಮತದ ನಾಯಕರಾಗುವ ಸ್ಥಿತಿಯಲ್ಲಿಲ್ಲ. ಒಂದು ವೇಳೆ ಅವರು ವಿಪಕ್ಷ ನಾಯಕರಾದರೆ ಒಂದು ಗುಂಪಿನ ನಾಯಕರಾಗುತ್ತಾರೆ ಎಂದರು.

Advertisement

ಸಿಎಂ ಬದಲಾವಣೆ ಇಲ್ಲ: ದೇಶದ ಇತಿಹಾಸದಲ್ಲಿ 75 ವರ್ಷ ವಯಸ್ಸು ದಾಟಿರುವವರಿಗೆ ಅಧಿಕಾರ ಕೊಟ್ಟಿರುವುದು ಯಡಿಯೂರಪ್ಪ ಅವರಿಗೆ ಮಾತ್ರ. ಚುನಾವಣೆಯ ಪೂರ್ವದಲ್ಲಿಯೇ ಅವರೇ ಮುಖ್ಯಮಂತ್ರಿ ಎಂದು ಪಕ್ಷ ಘೋಷಣೆ ಮಾಡಿತ್ತು. ಬಿಎಸ್‌ವೈ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದೇವೆ. ಸಿಎಂ ಬದಲಾವಣೆ ಯಾವುದೇ ಕಾರಣಕ್ಕೂ ಆಗೋಲ್ಲ. ಯಡಿಯೂರಪ್ಪನವರೇ ಅವಧಿ ಪೂರ್ಣಗೊಳಿಸಬೇಕೆಂಬುದು ಪಕ್ಷದಲ್ಲಿ ಎಲ್ಲರ ಅಪೇಕ್ಷೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next