ಅರಕಲಗೂಡು: “ಸಿದ್ದರಾಮಯ್ಯನವರೇ ನನ್ನ ನಾಯಕರು ನಾನು ಎಂದೂ ಅವರಿಗೆ ಮೋಸವೆಸಗುವುದಿಲ್ಲ, ಆದರೆ ಜಿಲ್ಲೆಯ ನೊಂದ ಮತದಾರರ ಧ್ವನಿಯಾಗಲು ಈ ಚುನಾವಣೆಗೆ ಸ್ಪರ್ಧೆ ಅನಿವಾರ್ಯವಾಗಿದೆ’ ಎಂದು ಬಿಜೆಪಿ ಅಭ್ಯರ್ಥಿ ಎ.ಮಂಜು ತಿಳಿಸಿದರು.
ಪಟ್ಟಣದ ಚನ್ನಬಸವೇಶ್ವರ ಸಮುದಾಯಭವನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನುದೇಶಿಸಿ ಮಾತನಾಡಿ,ಹಾಸನ ಲೋಕಸಭಾ ಕ್ಷೇತ್ರವು ಸುಮಾರು 40 ವರ್ಷಗಳಿಂದ ಕುಟುಂಬ ರಾಜಕಾರಣದಲ್ಲಿ ಸಂಸ್ಕೃತಿಇಲ್ಲದ ವ್ಯಕ್ತಿಗಳಿಂದ ನೊಂದಿದ್ದು, ಇದಕ್ಕೆ ಕಳೆದ ಸಾಲಿನ ಲೋಕಸಭಾಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ಚಲಾಯಿಸಿದ 6 ಲಕ್ಷ ಮತಗಳೇಸಾಕ್ಷಿ’ಎಂದರು.
ಆದಾಯದ ಮೂಲ ಯಾವುದು: ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ತಮ್ಮ ಆದಾಯವನ್ನು 9.78ಕೋಟಿ ರೂ. ಎಂದು ಘೋಷಿಸಿಕೊಂಡಿದ್ದಾರೆ. ಆದರೆ ಈತ ಇಷ್ಟು ಆಸ್ತಿಯನ್ನು ಘೋಷಿಸಲು ಯಾವ ಮೂಲದಿಂದ ಬಂದಿದೆ ಎಂದು ತಿಳಿಸಿರುವುದು ಹಾಸ್ಯಾಸ್ಪದವಾಗಿದೆ. 10 ಹಸುಗಳನ್ನು ಸಾಕಿದ್ದು ಇವುಗಳಿಂದ ಬಂದ ಆದಾಯ ಎಂಬ ಸತ್ಯಕ್ಕೆ ದೂರವಾದ ಮಾಹಿತಿ ನೀಡಿದ್ದಾರೆ ಎಂದರು.
ಪ್ರಜ್ವಲ್ ರೇವಣ್ಣ ಮತ್ತು ಅವರ ತಾಯಿ ಭವಾನಿ ಖಾಸಗಿ ಕಂಪನಿಯೊಂದರ ಷೇರುದಾರರಾಗಿದ್ದರು, ಇದರ ಮಾಹಿತಿಯನ್ನು ನೀಡದೆ ಕಾನೂನಿನ ಕಣ್ಣಿಗೆ ಮಣ್ಣೆರಚಿದ್ದಾರೆ. ಮುಂದಿನ ದಿನಗಳಲ್ಲಿ ಇದರ ವಿರುದ್ಧ ಕಾನೂನು ಹೋರಾಟ ಮಾಡಲು ಮುಂದಾಗುತ್ತೇನೆ ಎಂದರು.