Advertisement
ತಾಲೂಕಿನ ಸುಗಟೂರು ಗ್ರಾಮದಲ್ಲಿ ಸುದ್ದಿ ಗಾರರ ಜೊತೆ ಮಾತನಾಡಿದ ಅವರು, ಪ್ರತಿಪಕ್ಷ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡುವ ಯಾವ ಚರ್ಚೆಯೂ ನಡೆದಿಲ್ಲ, ಎಲ್ಲವೂ ಊಹಾಪೋಹ ಅಷ್ಟೇ. ಮೇಲ್ಮಟ್ಟದಲ್ಲಿ ಪಕ್ಷದ ನಾಯಕರು ಕುಳಿತು ಕೊಂಡು ತೀರ್ಮಾನ ಮಾಡುತ್ತಾರೆ. ಸ್ವೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಪುನಃ ಕಾಂಗ್ರೆಸ್ ಪಕ್ಷದಲ್ಲಿ ಸದಸ್ಯತ್ವ ಪಡೆದುಕೊಂಡಿದ್ದೇನೆ. ನಾನು ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತ, ಪಕ್ಷ ವಹಿಸಿದ ಕೆಲಸ ನಿರ್ವಹಿಸುವುದಷ್ಟೇ ನನ್ನ ಜವಾಬ್ದಾರಿ ಎಂದು ಸ್ಪಷ್ಟನೆ ನೀಡಿದರು.
Related Articles
Advertisement
ಬಿಎಸ್‌ವೈಗೆ ಏನ್ ಕಷ್ಟ ಇದೆಯೋ?: ಸಂಪುಟ ವಿಸ್ತರಣೆಗೆ ಯಡಿಯೂರಪ್ಪ ಅವರಿಗೆ ಏನು ಕಷ್ಟ ಇದೆಯೋ ನಮಗೇನು ಗೊತ್ತು,ಬಹುಶಃ ನಾನೊಬ್ಬನೇ ರಾಜ್ಯವನ್ನು ನಿಭಾಯಿಸಬಲ್ಲೆ ಎಂಬ ನಂಬಿಕೆ ಇರಬಹುದು, ಮಂತ್ರಿ ಮಂಡಲ ರಚ ನೆಯೂ ಆಗದಿರಬಹುದು, ಇದೂ ಒಂದು ಹೊಸ ಪ್ರಯೋಗ ಆಗುತ್ತದೆ ನೋಡೋಣ ಎಂದರು.
ರಾಜ್ಯ ಬಿಜೆಪಿ ಸರ್ಕಾರಕ್ಕೆ ಟಿಪ್ಪು ಜಯಂತಿ ಮಾಡಲು ಇಷ್ಟ ಇಲ್ಲ, ಅದಕ್ಕೆ ರದ್ದುಪಡಿಸಿದ್ದಾರೆಯೇ ವಿನಃ ಜನರ ತೀರ್ಮಾನ ಅಲ್ಲ.ಇಷ್ಟ ಬಂದಂತೆ ಮಾಡುವುದು ಲಕ್ಷಣವೇ ಎಂದು ಪ್ರಶ್ನಿಸಿದ ಅವರು, ಸರ್ಕಾರದ ಕ್ರಮ ಸರಿಯೋ ಎಂಬ ತೀರ್ಮಾನವನ್ನು ಜನ ನೀಡಬೇಕು, ಸಮಯ ಬಂದಾಗ ಜನ ಉತ್ತರ ಕೊಡಲಿದ್ದಾರೆ ಎಂದರು.
ಬಿಜೆಪಿ ಸರ್ಕಾರದ ಆಯಸ್ಸು ಕುರಿತು ನಾನು ಜ್ಯೋತಿಷ್ಯ ಹೇಳುವುದಿಲ್ಲ. ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಕೆಲಸ ಮಾಡಲಿ, ಬಹುಮತ ಸಿಕ್ಕಿ ಆಡಳಿತ ಮಾಡುತ್ತಿದ್ದಾರೆ.ಜನರಿಗೆ ಒಳ್ಳೆಯದು ಮಾಡಲಿ ನೋಡೋಣ, ನಾವ್ಯಾಕೆ ಅಪಶಕುನ ಹೇಳಬೇಕು, ಅಧಿಕಾರದಲ್ಲಿ ನಾವೇ ಇರಬೇಕೆಂದು ಯಾರೂ ಜಹಂಗೀರ್ ಬರೆದುಕೊಟ್ಟಿಲ್ಲ ಎಂದು ಹೇಳಿದರು.
ಒಳ್ಳೆಯ ಕೆಲಸ ಮಾಡಲಿ, ಪ್ರೋತ್ಸಾಹ ನೀಡೋಣ, ಜನರಿಗೆ ಒಳ್ಳೆಯದು ಮಾಡುವುದು ಮುಖ್ಯ. ಒಳ್ಳೆಯ ಕೆಲಸ ಮಾಡಿದರೆ ಆಯ್ತಪ್ಪಾ… ಎಂದು ಅವರಿಗೇ ಶಹಬಾಶ್‌ಗಿರಿ ಕೊಡೋಣ. ಪ್ರಜಾ ಪ್ರಭುತ್ವ ಎಂದರೆ 24 ಗಂಟೆಯೂ ಜಗಳ ಆಡ ಬೇಕೆಂದು ಇಲ್ಲವಲ್ಲ, ಸಕಾರಾತ್ಮಕವಾಗಿ ಮಾತ ನಾ ಡೋಣ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.