Advertisement
ನಗರದಲ್ಲಿ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವರಾದ ಈಶ್ವರಪ್ಪ ಹಾಗೂ ಎಸ್.ಟಿ.ಸೋಮಶೇಖರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಹಿಂದ ವರ್ಗಕ್ಕೆ ನ್ಯಾಯ ಸಿಗಬೇಕೆಂಬುದು ನನ್ನ ಉದ್ದೇಶ. ಕಾಂಗ್ರಸ್ ಪಕ್ಷ ಸಹ ಅದಕ್ಕೆ ಬದ್ಧವಾಗಿ ಅಹಿಂದ ಪರ ಇದೆ. ಕೆಲವರಿಗೆ ನನ್ನ ಬಗ್ಗೆ ಭಯವಿದೆ, ಆ ಭಯಕ್ಕಾಗಿ ಸಿದ್ದರಾಮಯ್ಯ ಅಹಿಂದ ಸಮಾವೇಶ ಮಾಡುತ್ತಾರೆ ಎಂದು ಕಲ್ಪಿಸಿಕೊಂಡು ಹೇಳುತ್ತಾರೆ. ನಾನು ಅಹಿಂದ ಸಮಾವೇಶದ ಬದಲು ರಾಜ್ಯಾದ್ಯಂತ ಕಾಂಗ್ರೆಸ್ ಸಮಾವೇಶ ಮಾಡುವೆ ಎಂದರು.
Related Articles
Advertisement
ಶಾಸಕರ ತೀರ್ಮಾನ:
ಮುಂದಿನ ಸಿಎಂ ನಾನೇ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು. ಆ ನಂತರ ಯಾರು ಸಿಎಂ ಆಗಬೇಕೆಂಬುದನ್ನು ಶಾಸಕರು ತೀರ್ಮಾನ ಮಾಡುತ್ತಾರೆ. ಬಳಿಕ ಅದಕ್ಕೆ ಹೈಕಮಾಂಡ್ ಮುದ್ರೆ ಒತ್ತಲಿದೆ. ಇದು ಕಾಂಗ್ರೆಸ್ ಪಕ್ಷದ ನಿಯಮ ಎಂದು ತಿಳಿಸಿದರು.
ವಿಶ್ವನಾಥ್ ಗಂಭೀರ ರಾಜಕಾರಣಿಯಲ್ಲ:
ಸಿದ್ದು ಕರ್ನಾಟಕದ ಡೋನಾಲ್ಡ್ ಟ್ರಂಪ್ ಎಂಬ ಎಚ್.ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಎಚ್.ವಿಶ್ವನಾಥ್ ಒಬ್ಬ ಸೀರಿಯಸ್ ಪಾಲಿಟೀಷಿಯನ್ ಅಲ್ಲ. ಆತನ ಬಗ್ಗೆ ನಾನು ಪದೇ ಪದೇ ಉತ್ತರ ಕೊಡಲ್ಲ. ನನ್ನ ಬಗ್ಗೆ ಅವರಿಗೆ ಭಯ ಇರಬೇಕು. ಹಾಗಾಗಿ ನನ್ನ ಕನವರಿಕೆ ಮಾಡುತ್ತಲೇ ಇರುತ್ತಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯ ಬಜೆಟ್ ಬಗ್ಗೆ ನಿರೀಕ್ಷೆ ಇಲ್ಲ:
ರಾಜ್ಯ ಬಜೆಟ್ ವಿಚಾರದಲ್ಲಿ ಯಾವುದೇ ನಿರೀಕ್ಷೆ ಇಲ್ಲ. ಖಜಾನೆಯಲ್ಲಿ ಹಣವೇ ಇಲ್ಲ. 35 ಸಾವಿರ ಕೋಟಿಗೂ ಅಧಿಕ ಸಾಲ ಮಾಡಿದ್ದಾರೆ. ಸಾಲ, ಬಡ್ಡಿ, ಚಕ್ರ ಬಡ್ಡಿ ಮನ್ನಾ ಮಾಡುವುದೇ ಆಗುತ್ತದೆ. ಇನ್ನೇನು ಉತ್ತಮ ಯೋಜನೆ ನೀಡಲು ಸಾಧ್ಯ. ತೈಲ ಬೆಲೆ ಹೆಚ್ಚಲು ಅಬಕಾರಿ ಸುಂಕ ಹೆಚ್ಚು ಮಾಡಿರುವುದು ಕಾರಣ ಎಂದು ಹೇಳಿದರು.
ಹಿಂದಿ ಹೇರಿಕೆ ಮಾಡಿದ್ರೆ ರಕ್ತಪಾತವಾಗುತ್ತದೆ:
ದೇಶದಲ್ಲಿ ಹಿಂದಿ ಹೇರಿಕೆ ಮಾಡಿದ್ರೆ ರಕ್ತಪಾತವಾಗುತ್ತದೆ. ಕನ್ನಡವನ್ನು ಪಕ್ಕಕ್ಕೆ ತಳ್ಳಿ ಹಿಂದಿ ಭಾಷೆ ಬರಲು ಸಾಧ್ಯವೇ ಇಲ್ಲ. ಹಿಂದಿ ಭಾಷೆ ಉತ್ತರ ಭಾರತದ ಒಂದೈದು ರಾಜ್ಯಗಳಲ್ಲಿ ಮಾತ್ರ ಇದೆ. ಇನ್ನುಳಿದ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳಿವೆ. ಅದು ಹೇಗೆ ಹಿಂದಿ ರಾಷ್ಟçಭಾಷೆಯಾಗುತ್ತೆ ಎಂದು ಪ್ರಶ್ನಿಸಿದ ಅವರು, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂದರು.
ಇದನ್ನೂ ಓದಿ : ಶಿಕ್ಷಣದಲ್ಲಿ ಭಾರತೀಯತೆ ಬರಬೇಕು, ವ್ಯಾಪಾರೀಕರಣ, ಪಾಶ್ಚಾತ್ಯೀಕರಣ ತಡೆಯಬೇಕು : ಕಾಗೇರಿ