Advertisement

ಕೆಲಸ ಮಾಡಿದ್ದು ನಾವು,ವೋಟ್‌ ಅವರಿಗಾ?;ಬಾದಾಮಿಯಲ್ಲಿ ಸಿದ್ದರಾಮಯ್ಯ

10:02 AM Jun 28, 2019 | Vishnu Das |

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಬಾಗಲಕೋಟೆ ಮತ್ತು ಪ್ರತಿನಿಧಿಸುತ್ತಿರುವ ಬಾದಾಮಿ ಕ್ಷೇತ್ರದಲ್ಲಿ ಎಡೆಬಿಡದೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಕಾಮಾಗಾರಿಯೊಂದಕ್ಕೆ ಚಾಲನೆ ನೀಡುವ ವೇಳೆ ಕುಂಕುಮ ಹಚ್ಚಿಕೊಳ್ಳಲು ನಿರಾಕರಿಸಿ ಸುದ್ದಿಯಾಗಿದ್ದಾರೆ.

Advertisement

ಬಾದಾಮಿ ವಿಧಾನಸಭೆ ಕ್ಷೇತ್ರದ ಚಿಮ್ಮನಕಟ್ಟಿ ಗ್ರಾಮದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವ ವೇಳೆ ಈ ಘಟನೆ ನಡೆದಿದೆ. ಅರ್ಚಕರು ಕುಂಕುಮ ಹಚ್ಚಲು ಮುಂದಾದಾಗ ಬೇಡಯ್ಯ ಎಂದರು.

ಬಾದಾಮಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಆಲಿಸಿದರು.

ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ನಿಧನರಾದ ಬಾದಾಮಿಯ ಕಾಕನೂರು ಗ್ರಾಮದ ಯೋಧ ವಿರೂಪಾಕ್ಷ ಅವರ ಮನೆಗೆ ಭೇಟಿ ನೀಡಿ, ಮೃತ ಯೋಧನ ಕುಟುಂಬದವರಿಗೆ ಸಾಂತ್ವನ ಹೇಳಿದರು ಮತ್ತು ವೈಯಕ್ತಿಕವಾಗಿ ಒಂದು ಲಕ್ಷ ರೂ.ಗಳ ಪರಿಹಾರ ನೀಡಿದರು.

ಬಸವ ವಸತಿ ಯೋಜನೆಯಲ್ಲಿ ಬಾದಾಮಿ ವಿಧಾನಸಭೆ ಕ್ಷೇತ್ರಕ್ಕೆ 8,200 ಮನೆಗಳು ಮಂಜೂರಾಗಿದ್ದು, ಅರ್ಹ ಫಲಾನುಭವಿಗಳಿಗೆ ಮನೆಗಳ ಹಂಚಿಕೆಗೆ ಸಂಬಂಧಿಸಿದಂತೆ ಶೀಘ್ರದಲ್ಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

Advertisement

ಪಿಡಿಓಗಳಿಗೆ ಎಚ್ಚರಿಕೆ
ಬಾಲಕೋಟೆಯಲ್ಲಿ ಪಿಡಿಓಗಳಿಗೆ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ ಅವರು ಏನಾದರೂ ರಾಜಕಾರಣ, ತಾರತಮ್ಯ ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಎಲ್ಲಾ ಕೆಲಸ ನಾವು ಮಾಡುವುದು , ವೋಟ್‌ ಮಾತ್ರ ಅವರಿಗೆ
ಕ್ಷೇತ್ರದಲ್ಲಿ ಎಲ್ಲಾ ಅಭಿವೃದ್ಧಿ ಕೆಲಸಗಳನ್ನ , ಯೋಜನೆಗಳನ್ನು ನಾವು ಮಾಡಿದರೂ, ಲೋಕಸಭಾ ಚುನಾವಣೆಯಲ್ಲಿ ಏನೂ ಮಾಡದ ಬಿಜೆಪಿಗೆ ಮತ ಹಾಕಿದ್ದೀರಿ, ಬಾದಾಮಿ ಕ್ಷೇತ್ರದಲ್ಲೂ ಬಿಜೆಪಿಗೆ 9 ಸಾವಿರ ಮತಗಳ ಲೀಡ್‌ ನೀಡಿದ್ದೀರಿ ಎಂದು ಬೇಸರ ವ್ಯಕ್ತ ಪಡಿಸಿದರು.

ಯಾರು ನೀನು ಬಿಜೆಪಿಯವನಾ ?
ಭಾಷಣದ ವೇಳೆ ವೇದಿಕೆ ಬಳಿ ನಿಂತು ಮಾತಾನಾಡುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಗರಂ ಆದ ಸಿದ್ದರಾಮಯ್ಯ ಅವರು , ಏಯ್‌ ಸುಮ್ನಿರಯ್ಯಾ … ಯಾರು ನೀನು ಬಿಜೆಪಿಯವನಾ ಎಂದು ಗರಂ ಆದರು. ಈ ವೇಳೆ ಆತನನ್ನು ಎಳೆದೊಯ್ಯಲು ಆಗಮಿಸಿದ ಪೊಲೀಸರ ಬಳಿ, ಬಿಡ್ರಪ್ಪಾ.. ಅವನನ್ನು ಎಳೆದಾಡಬೇಡಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next