Advertisement

ವಾಲೀಕಿ ಸಮಾಜಕ್ಕೆ ಸಿದ್ದು ಅನ್ಯಾಯ ಮಾಡಿಲ್ಲ

05:54 PM Feb 09, 2022 | Team Udayavani |

ಬಾದಾಮಿ: ಮಾಜಿ ಮುಖ್ಯಮಂತ್ರಿ, ಶಾಸಕ ಸಿದ್ಧರಾಮಯ್ಯ ವಾಲ್ಮೀಕಿ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ ಎಂಬ ಬಿಜೆಪಿ ಎಸ್‌ಟಿ ಘಟಕದ ಮುಖಂಡರ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದು ಕಾಂಗ್ರೆಸ್‌ ಎಸ್‌.ಟಿ.ಮುಖಂಡರು ಹೇಳಿದ್ದಾರೆ.

Advertisement

ಮಂಗಳವಾರ ಪಟ್ಟಣದ ಕಾನಿಪ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಎಸ್‌.ಟಿ.ಘಟಕದ ತಾಲೂಕಾಧ್ಯಕ್ಷ ಸಿದ್ದನಗೌಡ ಗೌಡರ ಮತ್ತು ಮುಖಂಡರು ಮಾತನಾಡಿ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಎಸ್‌.ಸಿ, ಎಸ್‌.ಟಿ. ಹಿಂದುಳಿದ ವರ್ಗಗಳಿಗೆ ಸಾಕಷ್ಟು ಯೋಜನೆಗಳನ್ನು ಅನುಷ್ಟಾನಗೊಳಿಸಿದ್ದಾರೆ. ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಜಾರಿಗೆ ತಂದವರೇ ಸಿದ್ದರಾಮಯ್ಯ ನವರು. ಎಸ್‌.ಸಿ, ಎಸ್‌.ಟಿ ಗುತ್ತಿಗೆದಾರರಿಗೆ
ಗುತ್ತಿಗೆಯಲ್ಲಿ ಮೀಸಲಾತಿ, ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ 1ವರ್ಷಕ್ಕೆ 24 ಸಾವಿರ ಕೋಟಿ ಮಂಜೂರು ಮಾಡಿದ್ದಾರೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಪಡೆದ ಎಲ್ಲ ಸಾಲ ಮನ್ನಾ ಮಾಡಿದ್ದಾರೆ ಎಂದರು.

ಈಗ ತಾಲೂಕಿನ 12 ಗ್ರಾಮಗಳು, 2 ನಗರಗಳಲ್ಲಿ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಅಂದಾಜು 3.60 ಕೋಟಿ ಅನುದಾನ ಮಂಜೂರು ಮಾಡಿದ್ದಾರೆ. ಶಾಸಕರು ಮತಕ್ಷೇತ್ರದ ಎಲ್ಲ ಜನರಿಗೆ ಸಾಕಷ್ಟು ಕಾಮಗಾರಿ ಮತ್ತು ಅಭಿವೃದ್ಧಿ ಮಾಡಿದ್ದಾರೆ. ಅವರು  ವಾಲ್ಮೀಕಿ ಸಮಾಜಕ್ಕೆ ಅನ್ಯಾಯ ಮಾಡಿಲ್ಲ. ಆಡಳಿತಾರೂಢ ಬಿಜೆಪಿ ಸರಕಾರ ಕಳೆದ 2 ವರ್ಷಗಳಿಂದ ಕೋವಿಡ್‌ ಪ್ರಯುಕ್ತ ಯಾವುದೇ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದರು. ಆಡಳಿತಾರೂಢ ಬಿಜೆಪಿ ಸರಕಾರದಲ್ಲಿ ಎಸ್‌ಟಿ ಸಮುದಾಯದವರು ಸಚಿವರಾದರೂ ಸಮುದಾಯಕ್ಕೆ 7.5 ಮೀಸಲಾತಿ ಅನುಷ್ಟಾನವಾಗಿಲ್ಲ. ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮಾರುತಿ ವಾಲೀಕಾರ, ಶಿವು ಮಣ್ಣೂರ, ಕೋನಪ್ಪ ಕಾಟನ್ನವರ, ಮಹೇಶ ಪೂಜಾರ, ಬಸವರಾಜ ಪೂಜಾರ, ಭೀಮಸಿ ಶೆಟ್ಟೆಪ್ಪನವರ, ಚಿದಾನಂದ ತಳವಾರ, ಗಚ್ಚಪ್ಪ ಕಾಟನ್ನವರ, ಮಲ್ಲಪ್ಪ ಯಾವಗಲ್‌, ಹುಲಿಯಪ್ಪ ತಳವಾರ, ಹುಲ್ಲಪ್ಪ ಕೊಳ್ಳನ್ನವರ, ಬಸವರಾಜ ಪೂಜಾರ, ಯಲ್ಲಪ್ಪ ಮನ್ನಿಕಟ್ಟಿ, ಗುರುನಾಥ ಹುದ್ದಾರ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next