Advertisement

ಹಾಲು ಕುಡಿದ ಮಕ್ಕಳೇ ಬದುಕಲ್ಲ, ಇನ್ನು ವಿಷ ಕುಡಿದವರು ಬದುಕ್ತಾರಾ: ಸಿದ್ದರಾಮಯ್ಯ ವ್ಯಂಗ್ಯ

09:54 AM Aug 27, 2019 | keerthan |

ಹುಬ್ಬಳ್ಳಿ: ಬಿಎಸ್ ವೈ ಸರ್ಕಾರ ಬಹಳ ದಿನ ಇರುತ್ತೆ ಅಂತ ಯಾರಿಗೂ ನಂಬಿಕೆ ಇಲ್ಲ. ರೆಬಲ್ಸ್ ಗಳನ್ನಿಟ್ಟುಕೊಂಡು ಸರ್ಕಾರ ಮುನ್ನೆಡೆಸೋಕ್ಕಾಗುತ್ತಾ. ಹಾಲು ಕುಡಿದ ಮಕ್ಕಳೇ ಬದುಕಲ್ಲ. ಇನ್ನು ವಿಷ ಕುಡಿದವರು ಬದಕುತ್ತಾರಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

ಪ್ರವಾಹಪೀಡಿತ ಪ್ರದೇಶಗಳಿಗೆ ತೆರಳುವ ಮುನ್ನ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಸಚಿವರು ನೆರೆ ಪೀಡಿತ ಜಿಲ್ಲೆಗಳಲ್ಲಿ ಇರಬೇಕಿತ್ತು. ಆದರೆ ದೆಹಲಿ-ಬೆಂಗಳೂರು-ದೆಹಲಿ ಮಧ್ಯೆ ಟೂರ್ ಮಾಡುತ್ತಿದ್ದಾರೆ. ಭಾರಿ ಪ್ರಮಾಣದಲ್ಲಿ ನೆರೆ ಹಾನಿಯಾದರು ಕೇಂದ್ರ ಸೂಕ್ತ ಪರಿಹಾರ ತರುವಲ್ಲಿ ಸರ್ಕಾರ ಕೆಲಸ ಮಾಡಿಲ್ಲ. ವಾಮ ಮಾರ್ಗದಿಂದ ಸರ್ಕಾರ ರಚನೆ ಮಾಡಿದ್ದಾರೆ. ಈಗಲಾದರೂ ಜನರ ಕಡೆ ನೋಡಬೇಕು ಎಂದರು.

ದೇವೇಗೌಡರ ಕುಟುಂಬದ ಆರೋಪದ ಬಗ್ಗೆ ನಾನು ಸುದೀರ್ಘವಾಗಿ ಉತ್ತರ ಕೊಟ್ಟಿದ್ದೇನೆ. ಬೈರತಿ ಬಸವರಾಜ, ಸೋಮಶೇಖರ್ ರನ್ನು ನಾನು ಮುಂಬೈಗೆ ಕಳುಹಿಸಿದ್ದೇನೆ ಅಂತಾರೆ, ಹಾಗಾದರೆ ವಿಶ್ವನಾಥ, ನಾರಯಣಗೌಡ, ಗೋಪಾಲಯ್ಯರನ್ನು ಕಳಹಿಸಿದ್ದು ಯಾರು. ಎಚ್ ಡಿಕೆ, ಎಚ್ ಡಿಡಿ ನನ್ನ ಮೇಲೆ ಗೂಬೆ ಕೂರಿಸೋಕೆ‌ ನೋಡುತ್ತಿದ್ದಾರೆ ಎಂದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಬಗ್ಗೆ ನನಗೇನು ಗೊತ್ತಿಲ್ಲ. ಇವತ್ತು ಗುಲಾಮ್‌ನಬಿ ಅಜಾದ್ ಬರ್ತಾರೆ ಅಂತ ಕೇಳಿದ್ದಿನಿ. ಆದರೆ ನೆರೆ ಪಿಡಿತ‌ ಪ್ರದೇಶಗಳ ಪ್ರವಾಸದಲ್ಲಿದ್ದೇನೆ ಎಂದರು. ಮಾಜಿ ಸಚಿವರಾದ ಎಂ.ಬಿ. ಪಾಟೀಲ, ವಿನಯ ಕುಲಕರ್ಣಿ, ಶಾಸಕ ಪ್ರಸಾದ ಅಬ್ಬಯ್ಯ ಜೊತೆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next