Advertisement

ಅಧಿಕಾರ ನಡೆಸುವುದು ಕಷ್ಟವಾಗಿದ್ದರೆ ಯಡಿಯೂರಪ್ಪ ರಾಜೀನಾಮೆ ನೀಡಲಿ; ಸಿದ್ದರಾಮಯ್ಯ

09:49 AM Oct 01, 2019 | keerthan |

ರಾಯಚೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರ ನಡೆಸುವುದು ತಂತಿ ಮೇಲೆ ನಡೆದಷ್ಟು ಕಷ್ಟವಾಗಿದ್ದರೆ ರಾಜೀನಾಮೆ ನೀಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

Advertisement

ಇಲ್ಲಿನ ವಿಐಪಿ ಸರ್ಕ್ಯೂಟ್ ಹೌಸ್ ನಲ್ಲಿ ಸೋಮವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ತಂತಿ ಮೇಲೆ ನಡೆವಾಗ ಬಿದ್ದುಗಿದ್ದಾರು ಎಂದು ಲೇವಡಿ ಮಾಡಿದರು.

ಅವರೊಬ್ಬ ವೀಕ್ ಚೀಫ್ ಮಿನಿಸ್ಟರ್. ಪಕ್ಷದಲ್ಲಿ ಅವರ ಆಟ ನಡೆಯುತ್ತಿಲ್ಲ. ರೆಕ್ಕೆ ಪುಕ್ಕ ಕತ್ತರಿಸಿಬಿಟ್ಟಿದ್ದಾರೆ ಎಂದರು.

ಉಪಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನ ಗೆಲ್ಲುವ ವಿಶ್ವಾಸವಿದೆ. ಆಗ ಸರ್ಕಾರ ವಿಸರ್ಜಿಸಿ ಮಧ್ಯಂತರ ಚುನಾವಣೆ ಎದುರಿಸುವುದು ಅನಿವಾರ್ಯವಾಗಲಿದೆ. ಜೆಡಿಎಸ್ ಜತೆ ಹೊಂದಾಣಿಕೆ ಬಗ್ಗೆ ಏನು ಹೇಳುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ನನಗೆ ದಸರಾಕ್ಕೆ ಆಹ್ವಾನ ಬಂದಿಲ್ಲ
ಮೈಸೂರು ದಸರಾ ಉತ್ಸವಕ್ಕೆ ನನಗೆ ಅಧಿಕೃತ ಆಹ್ವಾನ ಬಂದಿಲ್ಲ. ಕರೆಯದೆ ಬರುವವರನ್ನು ಏನಂತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

Advertisement

ಬಿಜೆಪಿಯವರ ಅಧಿಕಾರವಿದೆ ಅವರು ಮಾಡಿಕೊಳ್ಳಲಿ. ನಾನು ಹಿಂದೆ ಅಧಿಕಾರದಲ್ಲಿದ್ದಾಗ ಸಾಕಷ್ಟು ಬಾರಿ ದಸರಾ ಮಾಡಿದ್ದೇನೆ. ಈಗ ಅವರು ಮಾಡ್ತಿದಾರೆ ಮಾಡಿಕೊಳ್ಳಲಿ ಎಂದರು.

ವಿಜಯನಗರ ಜಿಲ್ಲೆ ರಚಿಸುವುದು ನನಗೆ ವೈಯಕ್ತಿಕವಾಗಿ ಇಷ್ಟವಿಲ್ಲ. ಆದರೆ ಬೆಳಗಾವಿಯಂಥ ದೊಡ್ಡ ಜಿಲ್ಲೆಯನ್ನು ಭಾಗ ಮಾಡಬೇಕಿತ್ತು. ಆನಂದ ಸಿಂಗ್ ಇಂಥ ವಿಚಾರಗಳಿಂದ ಸುದ್ದಿಯಾಗಿದ್ದಾರೆ. ಅವರ ಚುನಾವಣೆಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಜಿಲ್ಲೆಯನ್ನು ಇಬ್ಭಾಗ ಮಾಡಲಾಗುತ್ತಿದೆಯಷ್ಟೆ ಎಂದರು.

ಕೆ.ಎಚ್.ಮುನಿಯಪ್ಪರ ಹೇಳಿಕೆಗೆ ಪ್ರತಿಕ್ರಿಯೆ ಅಗತ್ಯವಿಲ್ಲ. ಅದು ಪಕ್ಷದ ಆಂತರಿಕ ವಿಚಾರ. ಅದನ್ನು ಬಹಿರಂಗವಾಗಿ ಚರ್ಚಿಸೋಕೆ ಆಗುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next