Advertisement

ಸಿದ್ದರಾಮಯ್ಯ, ಬೆಂಕಿ ರಾಮಯ್ಯ: ಅಶೋಕ್‌

07:05 AM Oct 02, 2017 | Team Udayavani |

ಬೆಂಗಳೂರು: “ಕೈಯಲ್ಲಿ ಪೆಟ್ರೋಲ್‌ ಮತ್ತು ಬೆಂಕಿಪೊಟ್ಟಣ ಹಿಡಿದುಕೊಂಡು ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಪಾಲಿಗೆ ಬೆಂಕಿರಾಮಯ್ಯ ಆಗಿದ್ದಾರೆ’ ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ವಿಧಾನಸಭೆ ಪ್ರತಿಪಕ್ಷ ಉಪನಾಯಕ ಆರ್‌.ಅಶೋಕ್‌ ಹೇಳಿದ್ದಾರೆ.

Advertisement

ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ನೇಮಕಗೊಂಡಿರುವ ಪೂರ್ಣಾವಧಿ ವಿಸ್ತಾರಕರಿಗೆ
ಭಾನುವಾರ ಆರಂಭಗೊಂಡ ಎರಡು ದಿನಗಳ ಪ್ರಶಿಕ್ಷಣ ವರ್ಗಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
“ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ರಾಜ್ಯಕ್ಕೆ ಬಂದುಹೋದ ಮೇಲೆ ಕಾಂಗ್ರೆಸ್‌ ನಿದ್ದೆಗೆಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಸೇರಿ ಬಿಜೆಪಿ ನಾಯಕರನ್ನು ನೇರವಾಗಿ ಎದರಿಸಲಾಗದೆ ವೀರಶೈವ,
ಲಿಂಗಾಯತರ ಮಧ್ಯೆ ಒಡಕು ಮೂಡಿಸುತ್ತಿದ್ದಾರೆ. ನಾಡಿನ ಧ್ವಜದ ಬಗ್ಗೆ ಪ್ರತ್ಯೇಕತೆ ಕೂಗು ಎಬ್ಬಿಸಿ ಗೊಂದಲ ಮೂಡಿಸುತ್ತಿದ್ದಾರೆ. ಎಲ್ಲಿ ಹೋದರೂ ಕೈಯ್ಯಲ್ಲಿ ಪೆಟ್ರೋಲ್‌ ಮತ್ತು ಬೆಂಕಿ ಪೊಟ್ಟಣ ಹಿಡಿದುಕೊಂಡು ಬೆಂಕಿ ಹಚ್ಚಿ ಮಜಾ ತೆಗೆದುಕೊಳ್ಳುವ ಸಿದ್ದರಾಮಯ್ಯ ಅವರು ರಾಜ್ಯದ ಪಾಲಿಗೆ ಬೆಂಕಿರಾಮಯ್ಯ ಆಗಿದ್ದಾರೆ’ ಎಂದು ಕಿಡಿ ಕಾರಿದರು.

ವ್ಯಕ್ತಿ ವಿಚಾರ ಆಧಾರಿತ ಪಕ್ಷ: ಕಾಂಗ್ರೆಸ್‌ ಮತ್ತು ಜೆಡಿಎಸ್‌ ವ್ಯಕ್ತಿಯ ವಿಚಾರ ಆಧಾರಿತ ಪಕ್ಷವೇ ಹೊರತು ರಾಷ್ಟ್ರೀಯ ಪರಿಕಲ್ಪನೆಯ ಪಕ್ಷವಲ್ಲ. ಕಾಂಗ್ರೆಸ್‌ನಲ್ಲಿ ಸೋನಿಯಾ ಗಾಂಧಿ ಇಲ್ಲವೆಂದರೆ ಪಕ್ಷ ಬಂದ್‌ ಆಗುತ್ತದೆ. ಜೆಡಿಎಸ್‌ನಲ್ಲಿ ದೇವೇಗೌಡ ಮತ್ತು ಕುಟುಂಬ ಸದಸ್ಯರು ಇಲ್ಲದಿದ್ದರೆ ಪಕ್ಷದ ಬಾಗಿಲು ಮುಚ್ಚುತ್ತದೆ. ಆದರೆ, ಬಿಜೆಪಿ ತತ್ವ, ಸಿದಾಟಛಿಂತಗಳ ಮೇಲೆ ಸದಾ ಹರಿಯುವ ನದಿಯಂತೆ ಮುಂದುವರಿ ಯುತ್ತಿರುವ ಪಕ್ಷ ಎಂದರು. ಹಿಂದೂ ಜಾಗರಣಾ
ವೇದಿಕೆ ಮುಖಂಡ ಜಗದೀಶ ಕಾರಂತ್‌ ಬಂಧನ ಕುರಿತು ಪ್ರತಿಕ್ರಿಯಿಸಿದ ಆರ್‌.ಅಶೋಕ್‌, “ಕಾಂಗ್ರೆಸ್‌ ಸರ್ಕಾರ ಹಿಂದೂ
ವಿರೋಧಿ ಸರ್ಕಾರವಾಗಿದೆ. ಹಿಂದೂಗಳ ಮೇಲೆ ಮಲತಾಯಿ ಧೋರಣೆ ತೋರಿಸುತ್ತಿದ್ದಾರೆ ಎಂದರು.

ಎರಡು ದಿನಗಳ ಕಾಲ ನಡೆಯುವ ಪ್ರಶಿಕ್ಷಣ ವರ್ಗದಲ್ಲಿ ಬಿಜೆಪಿಯ 250 ಚುನಾವಣೆ ವಿಸ್ತಾರಕರು ಪಾಲ್ಗೊಂಡಿದ್ದಾರೆ. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌, ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌, ಮಾಜಿ ಸಚಿವ ಅರವಿಂದ ಲಿಂಬಾವಳಿ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next