Advertisement

ಸಿದ್ದರಾಮಯ್ಯ- ಡಿಕೆಶಿ ಆಲಿಂಗನ: ಯತ್ನಾಳ್ ವ್ಯಂಗ್ಯವಾಗಿ ಹೇಳಿದ್ದೇನು?

03:05 PM Aug 08, 2022 | Team Udayavani |

ವಿಜಯಪುರ : ದಾವಣಗೆರೆಯಲ್ಲಿ ಜರುಗಿದ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಸೇರಿದಷ್ಟು ಜನರನ್ನು ಎಂದೂ ನೋಡಿರದ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಿಗೆ ಆಲಿಂಗನಕ್ಕೆ ಸೂಚಿಸಿದ್ದಾರೆ. ಈಗಾಗಲೇ ದೇಶದಲ್ಲಿ ನಾನು ನಾಶವಾಗಿದ್ದೇನೆ, ರಾಜ್ಯದಲ್ಲಿ ನೀವಿಬ್ಬರೂ ಸರ್ವ ನಾಶವಾಗಿ ಎಂಬ ಆಶಯದಿಂದ ಆಲಿಂಗನಕ್ಕೆ ಸೂಚಿಸಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.

Advertisement

ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಜನ್ಮೋತ್ಸವದ ದಾವಣಗೆರೆ ಕಾರ್ಯಕ್ರಮದಿಂದ ಬಿಜೆಪಿ ಭಯಪಡುವ ಅಗತ್ಯವಿಲ್ಲ. ಸಿದ್ದರಾಮಯ್ಯ ಜನ್ಮೋತ್ಸವಕ್ಕೆ ಸೇರಿದ ಜನರನ್ನು ಕಂಡು ಸರ್ಕಾರ ಬಂದಿದೆ ಎಂಬ ಹುಚ್ಚು ಭ್ರಮೆಯಲ್ಲಿ ಯಾರೂ ಇರುವುದು ಬೇಡ. ಕರ್ನಾಟಕದ ಜನ ಬಹಳ ಬುದ್ದಿವಂತರಿದ್ದಾರೆ ಯಾವಾಗ ಯಾವ ನಿರ್ಣಯ ತೆಗೆದುಕೊಳ್ಳಬೇಕೆಂಬ ಶಕ್ತಿಯಿದೆ ಅದನ್ನು ಮಾಡುತ್ತಾರೆ ಎಂದರು.

ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಕೊಲೆ ವಿಚಾರದಲ್ಲಿ ಮುಖ್ಯಮಂತ್ರಿ, ಗೃಹ ಸಚಿವರು, ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ನನಗೆ ಯಾವುದೇ ಮಾಹಿತಿಯಿಲ್ಲ. ಆದರೆ ಕಾರ್ಯಕರ್ತರ ಪರಿಶ್ರಮದಿಂದ ನಾನು, ನನ್ನಂತೆ ಬಿಜೆಪಿ ಶಾಸಕರು, ಸಂಸದರು ಅಧಿಕಾರ ಪಡೆದಿದ್ದೇವೆ. ನಾನು, ಮೋದಿ, ಅಮಿತ್ ಶಾ ಎಲ್ಲರೂ ಕಾರ್ಯಕರ್ತರ ಪರಿಶ್ರಮದಿಂದ ಅಧಿಕಾರದಲ್ಲಿ ಇದ್ದೇವೆ. ಹೀಗಾಗಿ ಕಾರ್ಯಕರ್ತರ ಭಾವನೆಗಳಿಗೆ, ನೋವಿಗೆ ಪ್ರಧಾನಿ, ಕೇಂದ್ರ ಗೃಹ ಸಚಿವ, ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯತ್ನಾಳ ಹೆಸರು ಕೇಳಿ ಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್ , ನಾನು ಯಾವುದನ್ನೂ ಆಪೇಕ್ಷೆ ಮಾಡಿಲ್ಲ, ವಿಜಯಪುರದಲ್ಲಿ ಸುಮ್ಮನೇ ಕುಳಿತಿದ್ದೇನೆ. ಆದರೆ ಪಕ್ಷದ ವರಿಷ್ಠರು ಸಮರ್ಥರಿದ್ದು, ಕಾಲ ಕಾಲಕ್ಕೆ ಸೂಕ್ತ ನಿರ್ಣಯ ಕೈಗೊಳ್ಳುತ್ತಾರೆ ಎಂದರು.

ಪಕ್ಷದ ಸಂಘಟನೆ ವಿಷಯ ಬಂದಾಗ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಘಟನಾ ಕಾರ್ಯದರ್ಶಿ ಒಂದೇ ಜಿಲ್ಲೆಯವರು ಎಂದೇನೂ ಇರುವುದಿಲ್ಲ. ಸಂಘಟನಾ ಶಕ್ತಿ ಇರುವವರಿಗೆ ಅವಕಾಶ ನೀಡುತ್ತಾರೆ. ಅದು ಒಂದೇ ಜಿಲ್ಲೆ ಒಂದೇ ತಾಲೂಕಿಗೆ ಸೇರಿದವರಾದರೆ ತಪ್ಪೇನಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next