Advertisement

ಸಿದ್ದರಾಮಯ್ಯ, ಡಿಕೆಶಿರವರನ್ನೇ ಜೋಡಿಸಲು ಸಾಧ್ಯವಿಲ್ಲ,ಇನ್ನು..: ನಾರಾಯಣಸ್ವಾಮಿ

07:03 PM Oct 01, 2022 | Team Udayavani |

ಕೊರಟಗೆರೆ: ”ರಾಹುಲ್ ಗಾಂಧಿಯವರ ಭಾರತ್ ಜೋಡೋ ಕಾರ್ಯಕ್ರಮದಿಂದ ಅವರ ಪಕ್ಷದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ರವರನ್ನು ಜೋಡಿಸಲು ಸಾಧ್ಯವಿಲ್ಲ ಇನ್ನು ದೇಶವನ್ನು ಜೋಡಿಸಲು ಸಾಧ್ಯವೆ” ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.

Advertisement

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಪ್ರದಾನಿ ನರೇಂದ್ರ ಮೋದಿ ರವರ ಹುಟ್ಟು ಹುಬ್ಬದ ಅಂಗವಾಗಿ ಕೊರಟಗೆರೆ ವಿಧಾನ ಸಭಾ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ ಡಾ.ಲಕ್ಷೀಕಾಂತ್ ಹಮ್ಮಿಕೊಂಡಿದ್ದ ವಾಲಿಬಾಲ್ ಪಂದ್ಯವಾಳಿಗಳ ಕಾರ್ಯಕ್ರಮದ ಉದ್ಘಾಟನೆಗೂ ಮುಂಚಿತವಾಗಿ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಡನೆ ಮಾತನಾಡಿದರು. ಭಾರತ್ ಜೋಡೋ ಕಾರ್ಯಕ್ರಮ ರಾಹುಲ್ ಗಾಂಧಿಯವರು ಯಾವ ಕಾರಣಕ್ಕಾಗಿ ಮಾಡುತ್ತಿದ್ದಾರೋ ತಿಳಿಯುತ್ತಿಲ್ಲ, ಕರ್ನಾಟಕದಲ್ಲೇ ಕಾಂಗ್ರೆಸ್ ಪಕ್ಷನ್ನು ಜೋಡಿಸಲಾಗದ ಸ್ಥಿತಿ ಇದ್ದು ದೇಶ ಜೋಡಿಸಲು ಹೋಗುವುದು ಪ್ರಯೋಜನವಿದೆಯೇ ಎಂದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನವರು ಬೆಳಗ್ಗೆ ಎದ್ದಾಗ ಅವರು ಮೋದಲು ಜಪ ಮಾಡುವುದು ಆರ್ ಎಸ್ಎಸ್ ಸಂಘಟನೆ ಬಗ್ಗೆಯೇ, ಈ ಸಂಘಟನೆಯನ್ನು ಕಾಂಗ್ರೆಸ್ ಪಕ್ಷ ತಮ್ಮ ಅಧಿಕಾರ ಅವಧಿಗಳಲ್ಲಿ ದುರುದ್ದೇಶ ಪೂರ್ವಕವಾಗಿ ಯಾವುದೇ ತನ ಮಾಡದೆೆ ಕಾರಣ ವಿಲ್ಲದೇ ನಿಷೇದ ಮಾಡಿದ್ದರು. ಆದರೆ ಪಿಎಫ್ ಐ ಸಂಘಟನೆಯನ್ನು ಎನ್ ಐಎ ಸಂಪೂರ್ಣ ತನಿಖೆ ಮಾಡಿ ಸಾಕ್ಷ ಸಂಗ್ರಹಿಸಿ ದೇಶದ ಪ್ರಬುದ್ಧ ಮುಸ್ಲಿಂ ಸಂಘಟನೆಗಳೊಂದಿಗೆ ಚರ್ಚಿಸಿ ನಿಷೇಧಿಸಲಾಗಿದೆ. ಆರ್ ಎಸ್ಎಸ್ ಎಂದಿಗೂ ದೇಶ ದ್ರೋಹದ ಕೆಲಸ ಮಾಡಿಲ್ಲ. ಸಿದ್ದರಾಮಯ್ಯ ಯಾರನ್ನೋ ಮೆಚ್ಚಿಸಲು ಆ ಸಂಘಟನೆಯನ್ನು ನಿಷೇಧಿಸಲು ಒತ್ತಾಯಿಸುತ್ತಿದ್ದಾರೆ ಎಂದರು.

ದೇಶದಲ್ಲಿ ನಿಜವಾದ ದಲಿತ ಮತ್ತು ಸಂವಿಧಾನ ವಿರೋಧಿಗಳು ಕಾಂಗ್ರೆಸ್ ಪಕ್ಷವರು, ಆದರೆ ಅದನ್ನು ಬಿಜೆಪಿ ಮೇಲೆ ಹಾಕಲು ಬಹಳ ಶ್ರಮ ಪಡುತ್ತಿದ್ದಾರೆ, ದೇಶದಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಎಂಪಿ. ಎಎಲ್ಎ,ಸಚಿವರು ಇರುವುದು ಬಿಜೆಪಿಯಲ್ಲಿ, ರಾಜ್ಯದಲ್ಲಿ ದಲಿತ ನಾಯಕ ಗೋವಿಂದ ಕಾರಜೋಳರವರನ್ನು ಉಪಮುಖ್ಯಮಂತ್ರಿ ಮಾಡಿದ್ದೇವೆ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ದುಃಖ ನೀಡಿದ್ದು, ಅವಮಾನಿಸಿದ್ದು, ಸಂವಿಧಾನ ಬದಲಾವಣೆ ಮಾಡಿದ್ದು ಕಾಂಗ್ರೆಸ್ ಪಕ್ಷ ಎನ್ನುವುದು ದಲಿತರು ಮರೆತಿಲ್ಲ ಎಂದರು.

ನಾನು ಸಚಿವನಾದ ಮೇಲೆ ನನ್ನ ಇಲಾಖೆಯಿಂದ ನ್ಯಾಷನಲ್ ಎಸ್ಸಿ/ ಎಸ್ಟಿ ಕಾರ್ಪರೇಷನ್ ನಿಂದ ರಾಜ್ಯಗಳ ಅಭಿವೃದಿಗೆ ಅತಿ ಕಡಿಮೆ ಬಡ್ಡಿ ಸಾಲ ಕೊಡಲಾಗುತ್ತಿದೆ, ಕೇಂದ್ರ ಸರ್ಕಾರದ ಆದರ್ಶ ಗ್ರಾಮಗಳನ್ನು ಗುಡಿಸಲು ಮುಕ್ತ ಮಾಡುವುದು, ಅಲ್ಲಿ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಂ ಭವನ ನಿರ್ಮಾಣ, ದೇಶದಲ್ಲಿ ಪ್ರತಿ ವರ್ಷ 3000 ವಿದ್ಯಾರ್ಥಿಗಳಿಗೆ ಉಚಿತ ಯುಪಿಎಸ್ ಸಿ ತರಬೇತಿ ನೀಡಲಾಗುತ್ತಿದೆ, ಹಾಗೂ ಪ್ರತಿ ರಾಜ್ಯದಲ್ಲೂ ತರಬೇತಿ ಸಂಸ್ಥೆಯನ್ನು ತೆರೆಯಲಾಗುವುದು ಎಂದರು. ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷದಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದು ಪಕ್ಷ ನಾಯಕರು ಮುಖಂಡರು ಅದನ್ನು ಸರಿತೂಗಿಸುವರು ಮತ್ತೆ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದರು.

Advertisement

ಈ ಸಂದರ್ಭದಲ್ಲಿ ಪಕ್ಷದ ವಿಧಾನ ಸಭಾ ಆಕಾಂಕ್ಷಿ ಡಾ.ಲಕ್ಷೀಕಾಂತ್,ಮಧುಗಿರಿ ಜಿಲ್ಲಾದ್ಯಕ್ಷ ಬಿ.ಕೆ.ಮಂಜುನಾಥ್, ತಾಲೂಕು ಅಧ್ಯಕ್ಷ ಪವನ್‌ಕುಮಾರ್, ಮಧುಗಿರಿ ತಾಲೂಕು ಅಧ್ಯಕ್ಷ ನರಸಿಂಹಮೂರ್ತಿ, ಮುಖಂಡರುಗಳಾದ ತಿಮ್ಮಜ್ಜ, ವಿಜಯ್‌ಕುಮಾರ್, ಸುಶೀಲಮ್ಮ, ಮಮತ, ಗುರುದತ್, ದೇವರಾಜು, ಅರುಣ್ ಕುಮಾರ್, ಸ್ವಾಮಿ, ಭಾನುಪ್ರಕಾಶ್, ಸೇರಿದಂತೆ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next