Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬದ್ದತೆ ಇದ್ದರೆ ಕಾಂತರಾಜ್ ವರದಿ ನೀಡಿದ್ದು ಜನರ ವಿಷಯಾಂತರ ಮಾಡಲು ಜಾತಿ ಗಣತಿ ಮುನ್ನಲೆಗೆ ತಂದಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಮೀಸಲಾತಿ ವಿರೋಧಿ ಎಂದು ಹೇಳುತ್ತಾರೆ. ಪ್ರಧಾನಿ ನೆಹರೂ ಅವರು ಮೀಸಲಾತಿ ಅಭಿವೃದ್ಧಿ ವಿರೋಧಿ ಎಂದಿದ್ದರು. ಮೀಸಲಾತಿ ವಿರೋಧಿಸಲು ಪತ್ರ ಬರೆದಿದ್ದು ಮೋದಿ ಬಿಡುಗಡೆ ಮಾಡಿದ್ದರು. ಎಸ್ ಸಿ & ಎಸ್ ಟಿ ಮೀಸಲಾತಿ ಹೆಚ್ಚಳ ಮಾಡಿದ್ದು ಬಿಜೆಪಿ ಸರ್ಕಾರ. ಬಡ್ತಿ ಮೀಸಲಾತಿ ಪರವಾಗಿ ನಿಂತು ಸುಪ್ರೀಂ ಕೋರ್ಟ್ ಗೆ ಅಫಡೆವಿಟ್ ಕೊಟ್ಟಿದ್ದು ಬಿಜೆಪಿ. ಪ್ರಾಮಾಣಿಕ ಬದ್ದತೆ ಬಿಜೆಪಿ ಪಕ್ಷಕ್ಕೆ ಇದೆ. ಹಿಂದುಳಿದ ಆಯೋಗಕ್ಕೆ ಸಂವಿಧಾನ ಬದ್ದತೆ ಕೊಟ್ಟಿದ್ದು ಬಿಜೆಪಿ ಸರ್ಕಾರ ಎಂದರು.
Related Articles
Advertisement
ಪಾಕಿಸ್ತಾನದ ಪ್ರಜೆಗಳ ಪತ್ತೆಯಾಗಿ ರಾಜ್ಯದಲ್ಲಿ ನೆಲೆಸಿದ್ದು ಪತ್ತೆಯಾಗಿದೆ. ದೇಶದ ಆಂತರಿಕ ಭದ್ರತೆಗೆ ಇದೊಂದು ಅಪಾಯಕಾರಿ. ಗೂಢಾಚರರು, ಭಯೋತ್ಪಾದಕರು ಈ ರೀತಿಯಾಗಿ ಬರಬಹುದು, ಆರ್ಥಿಕವಾಗಿ ಭಾರತವನ್ನು ದುರ್ಬಳಕೆ ಮಾಡುವ ಸಂಚು ಇರಬಹುದು. ದೇಶದ ಆಂತರಿಕ ಮತ್ತು ಬಾಹ್ಯ ಸುರಕ್ಷತೆ ದೃಷ್ಟಿಯಿಂದ ಎನ್‌ಆರ್ ಸಿ ತನಿಖೆಗೆ ಒಳಪಡಿಸಬೇಕು. ಮಲೆನಾಡಿನ ಕಾಫಿ ತೋಟಗಳಲ್ಲಿ ಬಾಂಗ್ಲಾದೇಶ ನಿವಾಸಿಗಳು ಬರುತ್ತಿದ್ದಾರೆಂಬ ಮಾತಿದೆ. ಇಡೀ ದೇಶದಲ್ಲಿ ಎನ್‌ಆರ್‌ಸಿ ಸಮೀಕ್ಷೆ ನಡೆಸಬೇಕಿದೆ. ವರ್ಕಿಂಗ್ ವೀಸಾ ನೀಡಿ, ಅವರ ಮೇಲೆ ನಿಗಾ ಇಡಲು ಅವಕಾಶ ಆಗುತ್ತದೆ ಎಂದು ಸಿ.ಟಿ ರವಿ ಹೇಳಿದರು.
ಉದ್ಯಮಿ ಸಂತ ಟಾಟಾ
ಖ್ಯಾತ ಉದ್ಯಮಿ ರತನ್ ಟಾಟಾ ನಿಧನರಾಗಿದ್ದಾರೆ. ಉಪ್ಪಿನಿಂದ ಹಡಗು ಕಟ್ಟುವವರೆಗೂ ಉದ್ದಿಮೆ ಸ್ಥಾಪನೆ ಮಾಡಿದ್ದಾರೆ. ಉದ್ಯಮಿ ಸಂತ ರತನ್ ಟಾಟಾ ಸರಳ ಜೀವಿ. ಅವರು ನಮ್ಮನ್ನ ಅಗಲಿದ್ದು ನೋವಾಗಿದೆ.ಸದಾಕಾಲವೂ ದೇಶಕ್ಕಾಗಿ ದುಡಿದು ಭಾರತದ ಪ್ರತಿಷ್ಠೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರಿ, ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ರವಿ ಹೇಳಿದರು.