Advertisement
ಮೈಸೂರು ಪ್ರಕರಣದಲ್ಲಿ ಎಫ್ಐಆರ್ ತಡವಾಗಿ ದಾಖಲಿಸಲಾಗಿದೆ. ಪೊಲೀಸರಿಂದ ನಿರ್ಲಕ್ಷ್ಯವಾಗಿದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾಗ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಯಾವುದೇ ರೀತಿಯ ನಿರ್ಲಕ್ಷ್ಯ ವಿಳಂಬ ಆಗಿಲ್ಲ. ನಿಮ್ಮ ಕಾಲದಲ್ಲಿ ಇದ್ದ ಪೊಲೀಸರೇ ನಮ್ಮ ಕಾಲದಲ್ಲೂ ಇದ್ದಾರೆ. ಆಗಲೂ, ಈಗಲೂ ಅವರೇ ಕೆಲಸ ಮಾಡುತ್ತಿದ್ದಾರೆ ಎಂದರು.
Related Articles
Advertisement
ಟೀಕೆ ಎದುರಿಸಿ ನನಗೆ ಗೊತ್ತಿಲ್ಲ: ಆರಗ:
“ನನ್ನದು ಕಟುಕ ಹೃದಯವಲ್ಲ…ಟೀಕೆಗಳನ್ನು ಎದುರಿಸಿ ನನಗೆ ಗೊತ್ತಿಲ್ಲ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಭಾವುಕರಾಗಿ ನುಡಿದರು. ಅತ್ಯಾಚಾರ ಪ್ರಕರಣ ಸಂಬಂಧ ನಡೆದ ಚರ್ಚೆ ವೇಳೆ, ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದೆ. ಎಲ್ಲೂ ನಿರ್ಲಕ್ಷ್ಯ ವಹಿಸಿಲ್ಲ, ಲೋಪವಾಗಿಲ್ಲ ಎಂದರು.
ಸಂತ್ರಸ್ತೆ ಹೇಳಿಕೆ ದಾಖಲು: ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಇತ್ತೀಚೆಗೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯು 28 ದಿನಗಳ ಬಳಿಕ ಬುಧವಾರ ಮೈಸೂರಿನ 3ನೇ ಜೆಎಂಎಫ್ಸಿ ಕೋರ್ಟ್‌ನಲ್ಲಿ ನ್ಯಾಯಾಧೀಶರು, ತನಿಖಾಧಿಕಾರಿ, ಟೈಪಿಸ್ಟ್ ಸಮುಖದಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.