Advertisement

ಸಿದ್ದರಾಮಯ್ಯರನ್ನು ಮಾಜಿ ಮುಖ್ಯಮಂತ್ರಿ ಎನ್ನಬೇಡಿ, ಇದು ಅಪಮಾನ ಮಾಡಿದಂತೆ: ರಮೇಶ್ ಕುಮಾರ್

01:46 PM Apr 04, 2021 | Team Udayavani |

ಬೆಂಗಳೂರು: ಸಿದ್ದರಾಮಯ್ಯ ಅವರನ್ನು ಮಾಜಿ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಎಂದು ಕರೆಯಬೇಡಿ.ಇದು ಅವರಿಗೆ ಅಪಮಾನ ಮಾಡಿದಂತೆ ಆಗಲಿದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.

Advertisement

ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದರು. ಬದಲಾದ ಸಂದರ್ಭದಲ್ಲಿ ಅವರು ಮತ್ತೆ ಸಿಎಂ ಆಗಲು ಸಾಧ್ಯವಾಗಲಿಲ್ಲ. ಜನ ಇಷ್ಟ ಪಟ್ಟರೆ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಎಂದರು.

ಜನರ ಕಷ್ಟಕ್ಕೆ ಅವರು ಸ್ಪಂದಿಸಿದ್ದಾಗ, ಅವರು ಹತ್ತಿರ ಆಗುತ್ತಾರೆ. ಮುಂದೆ ಮತ್ತೆ ಒಳ್ಳೆಯದಾಗಬಹುದು. ಮಾಜಿ ಮುಖ್ಯಮಂತ್ರಿ ಎಂದು ಅವರನ್ನ ಕರೆಯಬೇಡಿ ಎಂದು ಮನವಿ ಮಾಡುತ್ತೇನೆ. ಅವರನ್ನ ವಿರೋಧ ಪಕ್ಷದ ನಾಯಕರು ಅಂತ ಕರೆಯಿರಿ ಎಂದು ರಮೇಶ್ ಕುಮಾರ್ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next