Advertisement
ಠಾಣೆಯ ಎಲ್ಲ ಸಿಬಂದಿಯ ಗಂಟಲ ದ್ರವವನ್ನು ಪರೀಕ್ಷೆಗಾಗಿ ಕಳೆದ 10 ದಿನಗಳ ಹಿಂದೆ ಕಳುಹಿಸಲಾಗಿದ್ದು, ಅನೇಕ ಸಿಬಂದಿಯ ವರದಿ ಬರಬೇಕಾಗಿದೆ. ಮೇ 31ರಂದು ಮಹಿಳಾ ಸಿಬಂದಿಯ ವರದಿ ಬಂದಿದ್ದು, ಕೋವಿಡ್ ಪಾಸಿಟಿವ್ ಆಗಿದೆ. ವರದಿ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಸೋಮವಾರ ಮರು ಪರೀಕ್ಷೆಗೆ ಕಳುಹಿಸಲಾಗಿದೆ.
ನಕ್ಸಲ್ ಪೀಡಿತ ಪ್ರದೇಶದ ಶಂಕರನಾರಾಯಣ ಪೊಲೀಸ್ ಠಾಣೆಗೆ ಭದ್ರತೆಗಾಗಿ ಬಂದಿದ್ದ ಕೊಪ್ಪಳದ ಮುನಿರಾಬಾದ್‌ನ ಇಂಡಿಯನ್ ರಿಸರ್ವ್ ಬೆಟಾಲಿಯನ್‌ನ 8 ಮಂದಿ ಸಿಬಂದಿ ಠಾಣೆಯ ಮೇಲ್ಭಾಗದ ಕೊಠಡಿಯಲ್ಲಿ ವಾಸ್ತವ್ಯವಿದ್ದು, ಅವರಿಗೂ ಆತಂಕ ಶುರುವಾಗಿದೆ. ಇವರನ್ನು ಜೂ. 2ರಂದು ಠಾಣೆಯಿಂದ ಬಿಡುಗಡೆಗೊಳಿಸಲಾಗಿದ್ದು, ಮುನಿ ರಾಬಾದ್‌ನಲ್ಲಿರುವ ಇಂಡಿಯನ್ ರಿಸರ್ವ್ ಬೆಟಾಲಿಯನ್‌ನಲ್ಲಿ ಕ್ವಾರಂಟೈನ್‌ಗೆ ಒಳಪಡಲಿದ್ದಾರೆ ಎನ್ನುವ ಮಾಹಿತಿ ದೊರಕಿದೆ.