Advertisement
ಶಾಲಾ ಸುಧಾರಣಾ ಸಮಿತಿ ಸಹಕಾರ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಿಂದ ಹಿಡಿದು ಎಲ್ಲ ಶಿಕ್ಷಕರ ಶ್ರಮದ ಫಲವಾಗಿ ಸುಸಜ್ಜಿತ ಶಾಲೆಯಾಗಿ ಗಮನ ಸೆಳೆದಿದೆ. ಹೀಗಾಗಿ ಈ ಶಾಲೆಯಲ್ಲಿ ಸುಮಾರು 260 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಮೊದಮೊದಲು ಗುಡಿಸಲಿನಿಂದಲೇ ಆರಂಭವಾದ ಈ ಶಾಲೆ ಇಂದು 10 ಕೋಣೆಗಳನ್ನು ಹೊಂದಿದ್ದು, ಪ್ರತಿ ಕೋಣೆಯೂ ಸಾಕಷ್ಟು ಗಾಳಿ, ಬೆಳಕು ಹೊಂದಿದೆ. ಶೌಚಾಲಯ ಇದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. 1600 ಪುಸ್ತಕಗಳನ್ನು ಒಳಗೊಂಡ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ ಒಳಗೊಂಡಿದೆ.
ಔಷ ಧೀಯ ಗಿಡಮೂಲಿಕೆಗಳನ್ನು ಬೆಳೆಸಲಾಗಿದೆ. ಪ್ರಾಣಿ, ಪಕ್ಷಿಗಳಿಗೆಂದೇ ಕುಡಿಯುವ ನೀರು ಹಾಗೂ ಆಹಾರದ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳನ್ನು ಆಕರ್ಷಿಸಲು ಶಿಕ್ಷಕರು
ಕ್ವಿಜ್ ಸ್ಪರ್ಧೆ, ನಾಟಕ ರೂಪದಲ್ಲಿ ಕೆಲವೊಂದಿಷ್ಟು ವಿಷಯಗಳನ್ನು ತೋರಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಶಾಲೆಯ ಅನೇಕ ವಿದ್ಯಾರ್ಥಿಗಳು ರಾಜ್ಯ-ರಾಷ್ಟ್ರಮಟ್ಟದ ಖೋಖೋ ಸ್ಪರ್ಧೆ ಮತ್ತು ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಅಶೋಕ ಸಿದ್ದಾಪುರ, ಕಾಡಪ್ಪ ಹೊಸೂರ, ಮಹಾಲಿಂಗಪ್ಪ
ಹಿಪ್ಪರಗಿ, ಹನಮಂತ ಗುಂಜಿಗಾಂವಿ, ಪಾಂಡು ಸಿದ್ದಾಪುರ, ಸತ್ಯಪ್ಪ ಸಿದ್ದಾಪುರ, ಮಲ್ಲಪ ಸಿದ್ದಾಪುರ, ಮುತ್ತಪ್ಪ ಕಣಬೂರ, ಶಿವಪ್ಪ ಗರಗದ, ಶ್ರೀಶೈಲ ಸಿದ್ದಾಪುರ, ರಾಮಪ್ಪ ಕುಂಬಾಳೆ ಅವರ ಜತೆಗೆ ಊರ ಹಿರಿಯರ ಸಹಾಯ-ಸಹಕಾರದಿಂದ ಶಾಲೆ ಉತ್ತರೋತ್ತರ ಅಭಿವೃದ್ಧಿ ಸಾಧಿಸುತ್ತಿದೆ. ಶಾಲಾ ಮುಖ್ಯಗುರು ಬಿ.ಆರ್.ಕರೆನ್ನವರ ಹಾಗೂ ಶಿಕ್ಷಕರಾದ ಕೆ.ಎಸ್.ಸಿದ್ನಾಳ, ಪಿ.ವೈ. ಘಂಟಿ, ಬಿ.ಡಿ.ಗದಗ, ಎಂ.ಎಚ್.ಗುಗ್ರಿ ಅವರು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ
ಶ್ರಮಿಸುತ್ತಿದ್ದು, ಕಲಿಕೆಯ ಹೊಸ ವಿಧಾನಗಳನ್ನು ಅಳವಡಿಸಿಕೊಂಡಿದ್ದಾರೆ. ಮಕ್ಕಳ ಮನಸ್ಥಿತಿ ಅರಿತು ಹೊಸ ಹೊಸ ವಿಧಾನಗಳ ಮೂಲಕ ಮಕ್ಕಳ ಜ್ಞಾನಾರ್ಜನೆಗೆ ಸಹಕಾರಿಯಾಗಿದ್ದಾರೆ.
Related Articles
ಈ ಶಾಲೆ ಇಂದು ಸೌಕರ್ಯಗಳನ್ನು ಪಡೆದು ಉತ್ತರೋತ್ತರ ಅಭಿವೃದ್ಧಿ ಸಾಧಿಸುತ್ತಿದೆ. ಬಿ.ಆರ್.ಕರೆನ್ನವರ, ಮುಖ್ಯಗುರುಗಳು,
ಸಿದ್ದಾಪುರ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.
Advertisement
ಬಂದಿವೆ ಹಲವು ಪ್ರಶಸ್ತಿ: ಈ ಶಾಲೆಯು ಎರಡು ಸಲ ಜಿಲ್ಲಾಮಟ್ಟದ ಹಸಿರು ಶಾಲೆ ಪ್ರಶಸ್ತಿ, ಎರಡು ಬಾರಿ ಜಿಲ್ಲಾ ಮಟ್ಟದ ಹಳದಿ ಶಾಲೆ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೊಡ ಮಾಡುವ ಪರಿಸರ ಮಿತ್ರ ಹಸಿರು ಶಾಲೆ ಪ್ರಶಸ್ತಿ ಪಡೆದುಕೊಂಡ ಹೆಮ್ಮೆ ಇದೆ.
ಚಂದ್ರಶೇಖರ ಮೋರೆ