Advertisement

ಸಿದ್ದಾಪುರ: ಕಾಲುವೆ ಸ್ವಚ್ಛತೆಗೆ ಚಾಲನೆ

02:53 PM Jun 17, 2019 | Team Udayavani |

ಸಿದ್ದಾಪುರ: ಜಿಪಂ, ತಾಪಂ, ಗ್ರಾಪಂ ಮತ್ತು ಗ್ರಾಮಸ್ಥರು, ಯುವಕರು, ಸಂಘ ಸಂಸ್ಥೆಗಳು ಎಲ್ಲರೂ ಸೇರಿಕೊಂಡು ಕಾಲುವೆಯಲ್ಲಿರುವ ತ್ಯಾಜ್ಯವನ್ನು ಸ್ವಚ್ಛಗೊಳಿಸುವ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯ ಎಂದು ಜಿಪಂ ಅಧ್ಯಕ್ಷ ವಿಶ್ವನಾಥರಡ್ಡಿ ಹೊಸಮನಿ ಹೇಳಿದರು.

Advertisement

ಅವರು ರವಿವಾರ ಸಮೀಪದ ಶ್ರೀರಾಮನಗರದಲ್ಲಿ ‘ನಮ್ಮೂರು ನಮ್ಮ ಹೆಮ್ಮೆ, ನಮ್ಮ ಕಾಲುವೆ ನಮ್ಮ ಬದುಕು’ ಕಾರ್ಯಕ್ರಮದಡಿ ಶ್ರೀರಾಮನಗರದ ಹೃದಯ ಭಾಗದಲ್ಲಿರುವ ಕಾಲುವೆ ಸ್ವಚ್ಛತೆ ಕಾರ್ಯಕ್ರಮಕ್ಕೆ ಸ್ವತಃ ಜಿಪಂ ಅಧ್ಯಕ್ಷ ವಿಶ್ವನಾಥರಡ್ಡಿ ಅವರು ತ್ಯಾಜ್ಯ ಸ್ವಚ್ಛಗೊಳಿಸುವ ಮೂಲಕ ಚಾಲನೆ ನೀಡಿದರು. ಕಾಲುವೆಯಲ್ಲಿ ಹರಿಯುವ ನೀರು ಸ್ವಚ್ಛವಾಗಿರಬೇಕು, ಕುಡಿಯುವುದಕ್ಕೆ ಯೋಗ್ಯವಾಗಿರಬೇಕು ಎಂಬ ಉದ್ದೇಶದಿಂದ ಈ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಕಾಲುವೆಯೂ ಸಹ ನಮ್ಮ ಆಸ್ತಿ ಇದ್ದಂತೆ. ಸಾರ್ವಜನಿಕರು ಈ ಕಾಲುವೆಯಲ್ಲಿ ಕಸ, ಮಲಿನ ನೀರು ಬಿಡದಂಡೆ ಸ್ವಚ್ಛತೆ ಕಾಪಾಡಿಕೊಳ್ಳಬೇಕೆ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯಬಾರದು. ಎಲ್ಲೆಂದರಲ್ಲಿ ಕಸ ಹಾಕುವುದರಿಂದ ಅನೇಕ ರೋಗ ರುಜಿನಗಳು ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮೊದಲು ನಮ್ಮ ಮನೆ, ನಮ್ಮ ಬೀದಿ, ನಮ್ಮ ಗ್ರಾಮ ಎನ್ನುವಂತೆ ಸ್ವಚ್ಛತೆಯ ಬಗ್ಗೆ ಗಮನ ಕೊಟ್ಟು ಸ್ವಚ್ಛ ಸುಂದರ ಗ್ರಾಮವನ್ನಾಗಿ ಮಾಡುವುದು ನಮ್ಮ, ನಿಮ್ಮೆಲ್ಲರ ಕರ್ತವ್ಯ ಎಂದರು.

ಮರಳಿ ಜಿಪಂ ಸದಸ್ಯೆ ವಿಜಯಲಕ್ಷ್ಮೀ ಪ್ರಭಾಕರ, ತಾಪಂ ಸದಸ್ಯ ಮಹಮ್ಮದ್‌ ರಫಿ, ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಕರಟೂರಿ ಸೇರಿದಂತೆ ಶ್ರೀರಾಮನಗರದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next