Advertisement

ಸಿದ್ದಾಪುರ: ವಾರಾಹಿ ನೀರಿಗಾಗಿ ಗ್ರಾಮ ಮಟ್ಟದಲ್ಲಿ ಜನಾಂದೋಲನ

05:37 PM Jul 11, 2024 | Team Udayavani |

ಸಿದ್ದಾಪುರ: ವಾರಾಹಿ ನೀರಿಗಾಗಿ ಗ್ರಾಮ ಮಟ್ಟದಲ್ಲಿ ಜನಾಂದೋಲನಕ್ಕೆ ಸಿದ್ಧತೆಯ ಬಗ್ಗೆ ಶಾಸಕ ಗುರುರಾಜ್‌ ಗಂಟಿಹೊಳೆ ನೇತೃತ್ವದಲ್ಲಿ ಸಿದ್ದಾಪುರ ಶ್ರೀರಂಗನಾಥ ಸಭಾಭವನದಲ್ಲಿ ಸಭೆ ನಡೆಯಿತು. ವಾರಾಹಿ ನೀರು ಬೈಂದೂರಿನ ಗ್ರಾಮಗಳ ಕೃಷಿ ಚಟುವಟಿಕೆಗೆ ಒದಗಿಸಲು ಆ.15ರ ಅನಂತರ ತೀವ್ರ ಹೋರಾಟದ ಬಗ್ಗೆ ಹೋರಾಟ ಸಮಿತಿ ರಚನೆ ತಯಾರಿಯ ಬಗ್ಗೆ ಚರ್ಚಿಸಲಾಯಿತು.

Advertisement

ವಾರಾಹಿ ನದಿ ನೀರು ಒದಗಿಸುವ ಯೋಜನೆ ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಇದ್ದರೂ ಇಲ್ಲಿನ ಯಾವುದೇ ಗ್ರಾಮಕ್ಕೆ ಇದರ ನೀರು ಸಿಗುತ್ತಿಲ್ಲ. ಕಾಲುವೆಗಳ ಮೂಲಕ ಬೈಂದೂರು ಕ್ಷೇತ್ರದ ಹೆಚ್ಚಿನ ಗ್ರಾಮಗಳ ಕೃಷಿ ಚಟುವಟಿಕೆಗೆ ವಾರಾಹಿ ನೀರು ಒದಗಿಸುವಂತೆ ಮಾಡುವಲು ರಾಜ್ಯ ಸರಕಾರದ ವಿರುದ್ಧ ಜನಾಂದೋಲನ ರೂಪಿಸಲು ಬೈಂದೂರು ಕ್ಷೇತ್ರದ 4 ಜಿ.ಪಂ. ಕ್ಷೇತ್ರದ ಪ್ರಮುಖರ ಪೂರ್ವ ಸಿದ್ಧತ ಸಭೆ ನಡೆಯಿತು.

ಶಾಸಕ ಗುರುರಾಜ್‌ ಗಂಟಿಹೊಳೆ ಅವರು ಮಾತನಾಡಿ, ಯೋಜನೆ ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಇದ್ದರೂ, ವಾರಾಹಿ ನೀರು ಬೈಂದೂರಿನ ಗ್ರಾಮಗಳ ರೈತರ ಕೃಷಿ ಚಟುವಟಿಕೆಗೆ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಜನಾಂದೋಲನದ ಮಾದರಿಯಲ್ಲಿ ಹೋರಾಟ ನಡೆಸುವ ಅಗತ್ಯವಿದೆ ಎಂದರು.

ಸಿದ್ದಾಪುರ ಏತ ನೀರಾವರಿ ಯೋಜನೆಯ ಕಾಮಗಾರಿಗೂ ವೇಗ ಸಿಗಬೇಕು. ವಾರಾಹಿ ಬಲದಂಡೆ ಯೋಜನೆಯ ಅನುಷ್ಠಾನದ ಮೂಲಕ ಕಾಲುವೆಗಳಿಂದ ಬೈಂದೂರಿನ ಗ್ರಾಮಗಳಿಗೆ ವಾರಾಹಿ ನೀರು ಪೂರೈಕೆ ಆಗಬೇಕು ಎಂದರು.

ಸಭೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಬೈಂದೂರು ಕ್ಷೇತ್ರದ ರೈತ ಮೋರ್ಚದ ಪ್ರಕಾಶ್ಚಂದ್ರ ಶೆಟ್ಟಿ, ಸಿದ್ದಾಪುರ ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಪ್ರವೀಣ್‌ಕುಮಾರ ಶೆಟ್ಟಿ ಕೊಡ್ಲಾಡಿ, ಕವ್ರಾಡಿ ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಎಚ್‌. ಸತೀಶ್‌ ಶೆಟ್ಟಿ ಹಡಾಳಿ, ವಂಡ್ಸೆ ಮಹಾ ಶಕ್ತಿ ಕೇಂದ್ರದ ಪ್ರಮುಖ ಡಾ| ಅತುಲ್‌ ಕುಮಾರ್‌ ಶೆಟ್ಟಿ, ಜಿಲ್ಲಾ ಪಂಚಾಯತ್‌
ಮಾಜಿ ಸದಸ್ಯ ರೋಹಿತ್‌ ಶೆಟ್ಟಿ, ಯುವ ಮೋರ್ಚದ ಅಧ್ಯಕ್ಷ ಗಜೇಂದ್ರ, ಮುಖಂಡರಾದ ಬಾಲಚಂದ್ರ ಭಟ್‌ ಕಮಲಶಿಲೆ, ಸಮ್ರಾಟ ಶೆಟ್ಟಿ, ಸುರೇಶ ಹೆಬ್ಬಾರ್‌ ಆಜ್ರಿ, ವೇಣುಗೋಪಾಲ ಶೆಟ್ಟಿ ಆಜ್ರಿ, ರವಿ ಕುಲಾಲ ಶಂಕರನಾರಾಯಣ, ಅಶೋಕ ಕೆ.ಅಂಪಾರು, ರಾಜೇಶ ಹೆಬ್ಟಾರ್‌ ಉಳ್ಳೂರು, ಪ್ರಸಾದ ಶೆಟ್ಟಿ ಕಟ್ಟಿನಬೈಲು, ಪ್ರಾಣೇಶ್‌ ಯಡಿಯಾಳ, ರವಿ ಶೆಟ್ಟಿ ಹೊಸಂಗಡಿ, ಪ್ರಭಾಕರ ಕುಲಾಲ್‌, ಹಟ್ಟಿಯಂಗಡಿ ರಾಜೀವ್‌ ಶೆಟ್ಟಿ, ಹಕ್ಲಾಡಿ ಶುಭಾಶ್‌ ಶೆಟ್ಟಿ, ಹರ್ಕುರು ಮಂಜಯ್ಯ ಶೆಟ್ಟಿ, ಸಿದ್ದಾಪುರ ಗ್ರಾ.ಪಂ. ಉಪಾಧ್ಯಕ್ಷ ಕೃಷ್ಣ ಪೂಜಾರಿ ಮತ್ತು ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.

Advertisement

ಆ.15ರ ಬಳಿಕ ಬೃಹತ್‌ ಹೋರಾಟ
ಆರಂಭದಲ್ಲಿ ಪ್ರತೀ ಗ್ರಾಮದಲ್ಲೂ ಸಭೆ ನಡೆಸುವ ಮೂಲಕ ವಾರಾಹಿ ಯೋಜನೆಯಡಿ ಬೈಂದೂರಿಗೆ ಆಗಿರುವ ಅನ್ಯಾಯ, ನಿರ್ಲಕ್ಷ್ಯದ ಬಗ್ಗೆ ಮಾಹಿತಿ ನೀಡಲಾಗುವುದು. ಆ.15ರ ಅನಂತರ ರಾಜ್ಯ ಸರಕಾರದ ವಿರುದ್ಧ ಬೃಹತ್‌ ಹೋರಾಟ ಅಥವಾ ಜನಾಂದೋಲನ ನಡೆಸಲಾಗುವುದು. ಕಾಲುವೆಗಳ ಮೂಲಕ ಬೈಂದೂರಿನ ಗ್ರಾಮಗಳಿಗೆ ವಾರಾಹಿ ನೀರು ಒದಗಿಸುವುದು, ವಾರಾಹಿ ಬಲದಂಡೆ ಯೋಜನೆ ಮತ್ತು ಸಿದ್ದಾಪುರ ಏತ ನೀರಾವರಿ ಯೋಜನೆ ಶಕ್ತಿ ತುಂಬುವುದು ಇದರ ಉದ್ದೇಶವಾಗಿದೆ ಎಂದು
ಶಾಸಕರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next