Advertisement

Chithrakoota ಚಿಕಿತ್ಸಾಲಯದ ಪಾರ್ಶ್ವವಾಯು ಪುನರ್ವಸತಿ ವಿಭಾಗ ಉದ್ಘಾಟನೆ

12:14 AM Sep 06, 2024 | Team Udayavani |

ಕುಂದಾಪುರ: ಚಿತ್ರಕೂಟ ಆಯುರ್ವೇದ ಸಂಸ್ಥೆಯನ್ನು ಆರಂಭಿಸುವ ಮೂಲಕ ಆಲೂರಿಗೆ ಡಾ| ಬಾಯರಿ ಅವರು ದೊಡ್ಡ ಕೊಡುಗೆ ನೀಡಿದ್ದಾರೆ. ಇದರ ಯಶಸ್ಸು ಕೇವಲ ಅವರಿಗೆ ಮಾತ್ರವಲ್ಲ, ಇಡೀ ಊರಿಗೆ ಸಲ್ಲುತ್ತದೆ. ಈ ಪುಟ್ಟ ಊರಿಗೆ ಚಿಕಿತ್ಸೆಗಾಗಿ ವಿದೇಶಿಗರು ಕೂಡ ಬರುತ್ತಿರುವುದು ಹೆಮ್ಮೆಯ ವಿಚಾರ. ಸಂಸ್ಥೆ ಇನ್ನಷ್ಟು ಪ್ರಗತಿ ಕಾಣಲಿ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

Advertisement

ಅವರು ಗುರುವಾರ ಆಲೂರಿನ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ಪಾರ್ಶ್ವ ವಾಯು ಪುನರ್ವಸತಿ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದರು.

ಸಮ್ಮಾನ ಸ್ವೀಕರಿಸಿದ ಆಯುರ್ವೇದ ಗುರು ಡಾ| ರಘುರಾಮ ಶಾಸ್ತ್ರಿ ಮಾತನಾಡಿ, ಎಲ್ಲರೂ ಕನಸು ಕಾಣು ವುದು ಸಹಜ. ಆದರೆ ಅದನ್ನು ನನಸು ಮಾಡುವುದು ಮುಖ್ಯ. ಆ ಕಾರ್ಯವನ್ನು ಡಾ| ರಾಜೇಶ್‌ ಬಾಯರಿ ಮಾಡಿದ್ದಾರೆ ಎಂದರು.

ಗ್ರಾಮೀಣ ಭಾಗದಲ್ಲಿ ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿರುವುದರ ಹಿಂದೆ ಅವರ ಅಪಾರ ಪರಿಶ್ರಮ, ಸೇವಾ ಮನೋಭಾವ ಇದೆ ಎಂದು ಉಡುಪಿ ಎಸ್‌ಡಿಎಂಸಿ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ನಾಗರಾಜ್‌ ಪೂಜಾರಿ ಹೇಳಿದರು.

ಕುಂದಾಪುರದ ಉದ್ಯಮಿ ಅಭಿನಂದನ್‌ ಶೆಟ್ಟಿ ಮಾತನಾಡಿ, ನಗರದ ವ್ಯಾಮೋಹ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲೂ ಡಾ| ಬಾಯರಿಯವರು ತನ್ನೂರಿನಲ್ಲೇ ಆಯುರ್ವೇದ ಸಂಸ್ಥೆಯನ್ನು ಸ್ಥಾಪಿಸಿ, ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿರುವುದು ಖುಷಿಯ ವಿಚಾರ.ಚಿತ್ರಕೂಟದ ಮೂಲಕ ಆಲೂರು, ಚಿತ್ತೂರು ಗ್ರಾಮಗಳು ಎಲ್ಲೆಡೆ ಗುರುತಿಸು ವಂತಾಗಲಿ ಎಂದು ಹಾರೈಸಿದರು.

Advertisement

“ಲಾವಣ್ಯ’ ಕಾಸ್ಮೆಟಿಕ್‌ ವಿಭಾಗವನ್ನು ಆಲೂರು ಗ್ರಾ.ಪಂ. ಅಧ್ಯಕ್ಷ ರಾಜೇಶ್‌ ದೇವಾಡಿಗ ಉದ್ಘಾಟಿಸಿದರು. ಮಹಾ ಬಲ ಬಾಯರಿ ಉಪಸ್ಥಿತರಿದ್ದರು.

ವ್ಯವಸ್ಥಾಪಕ ನಿರ್ದೇಶಕ ಡಾ| ರಾಜೇಶ್‌ ಬಾಯರಿ ಪ್ರಸ್ತಾವಿಸಿ, ಚಿತ್ರಕೂಟದ ಚಿಕಿತ್ಸಾ ಪದ್ಧತಿ, ಸಂಸ್ಥೆ ನಡೆದು ಬಂದ ಹಾದಿ ಬಗ್ಗೆ ವಿವರಿಸಿದರು.ಸ್ಥಳೀಯ ಶಾಲಾ ಶಿಕ್ಷಕಿ ಶ್ರೀಮತಿ ಜಿ. ಹೆಗ್ಗಡೆ ಅವರನ್ನು ಸಮ್ಮಾನಿಸಲಾಯಿತು.

ಆದ್ಯಾ ಬಾಯರಿ ಪರಿಚಯಿಸಿ, ಡಾ| ಅನುಲೇಖಾ ಬಾಯರಿ ವಂದಿಸಿದರು. ಭಾಗ್ಯಶ್ರೀ ಐತಾಳ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next