Advertisement
ಈತ ತನ್ನ ಕಾರ್ಕಳದ ವಿದ್ಯಾಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳೊಂದಿಗೆ ಸೇರಿಕೊಂಡು ರವಿವಾರ ಸಂಜೆ ವೇಳೆ ಕರಂಬಳ್ಳಿಯ ಕೆರೆಗೆ ಹೋಗಿದ್ದರು. ನೀರು ನೋಡಿದ ತತ್‌ಕ್ಷಣ ಈತ ಶರ್ಟ್ ಬಿಚ್ಚಿ ಹಾರಿದ್ದಾರೆ. ಉಳಿದ ಇಬ್ಬರು ಮೇಲೆಯೇ ನಿಂತುಕೊಂಡು ನೋಡುತ್ತಿದ್ದರು. 15ಕ್ಕೂ ಅಧಿಕ ಅಡಿ ಆಳವಾದ ಕೆರೆ ಇದಾಗಿದ್ದು, ಈಜಾಡಲೂ ಬಾರದ ಕಾರಣ ಆತ ಮೇಲೆ ಬಂದಿರಲಿಲ್ಲ. ಕೂಡಲೇ ಇವರು ಸ್ಥಳೀಯರಿಗೆ ಮಾಹಿತಿ ನೀಡಿದ ಮೇರೆಗೆ ಅಗ್ನಿಶಾಮಕದಳದ ಸಿಬಂದಿ ಹಾಗೂ ಸ್ಥಳೀಯರು ಸೇರಿಕೊಂಡು ರಕ್ಷಣಾ ಕಾರ್ಯಾಚರಣೆ ನಡೆಸಿದರು.
Related Articles
ಅಲೆವೂರಿನ ನೈಲಪಾದೆಯಲ್ಲಿ ನದಿಯಲ್ಲಿ ಈಜಾಡಲು ತೆರಳಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ತ್ರಿವೆಂಡಮ್‌ನ ಆರೊನ್ ರೋಜರ್ ಲೀನ್(17) ಹಾಗೂ ಕಲ್ಕತ್ತಾದ ಮಾಧವ್(18) ಅವರ ಸ್ಥಿತಿ ಗಂಭೀರವಾಗಿದ್ದು, ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋನ್ ರೋಜರ್ ಲೀನ್ ಅನ್ನು ಡಯಾಲಿಸಿಸ್‌ಗೆ ಒಳಪಡಿಸಲಾಗಿದೆ. ಮಾಧವ್ ಅವರಿಗೆ ಲಘುಹೃದಯಾಘಾತ ಉಂಟಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement