Advertisement
ಜಾತ್ರೆಗೆ ಲಕ್ಷಾಂತರ ಜನ ಭಕ್ತರು ಆಗಮಿಸಿ ಪವಾಡ ಪುರುಷ ಸಿದ್ದಪ್ಪಾಜಿ ಗದ್ದುಗೆಯ ದರ್ಶನ ಪಡೆದರು. ಗುಡಾರ ಹಾಕಿದ್ದವರು ಕಂಡಾಯಕ್ಕೆ ಪೂಜೆ ಸಲ್ಲಿಸಿದ ಬಳಿಕ ಹೊರಗಡೆಯಿಂದ ಸಿದ್ಧಪಡಿಸಿಕೊಂಡು ಬಂದಿದ್ದ ಮಾಂಸಾಹಾರವನ್ನು ಎಡೆ ಇಟ್ಟು ನೈವೇದ್ಯ ಮಾಡಿ ಸಮರ್ಪಿಸಿದರು. ಬಳಿಕ ಪದ್ಧತಿಯಂತೆ ಪಂಕ್ತಿ ಸೇವೆ ಮಾಡಿ ಹರಕೆ ತೀರಿಸಿದರು.
Related Articles
Advertisement
ಪೊಲೀಸ್, ಕಂದಾಯ, ಅಬಕಾರಿ ಇಲಾಖೆ ಅಧಿಕಾರಿಗಳು ಹರಕೆಗೆಂದು ತಂದಿದ್ದ 3 ಕುರಿ, 32 ಆಡು, 80 ಕೋಳಿಗಳನ್ನು ವಶಪಡಿಸಿ ಕೊಂಡರು.
ಪೂಜೆ: ವಿವಿಧ ಜಿಲ್ಲೆಗಳಿಂದ ಆಗಮಿಸಿದ ಭಕ್ತರು ದೇವಸ್ತಾನದ ಹಳೇಮಠ ಮತ್ತು ಹೊಸಮಠಗಳಲ್ಲಿ ಭಕ್ತರು ದೇವಸ್ಥಾನದ ಮುಂದೆ ದೂಪಹಾಕಿ, ಬಿಡಾರಗಳಲ್ಲಿ ತಯಾರಿಸಿದ್ದ ಫಂಕ್ತಿಭೋಜನ ನೆರವೇರಿಸಿ ತಮ್ಮ ಹರಕೆ ಪೂರೈಸಿಕೊಂಡರು.
ತಪಾಸಣೆ: ದೇವಸ್ಥಾನಕ್ಕೆ ತೆರಳುವ ಸುಮಾರು 6 ಕಡೆಗಳಿಂದ ಬರುವ ವಾಹನ ಗಳನ್ನು ತಪಾಸಣೆ ಮಾಡಿದ ಅಧಿಕಾರಿ ಗಳು ವಾಹನಗಳಲ್ಲಿ ಕುರಿ, ಕೋಳಿ ಕಂಡು ಬಂದ ಕೂಡಲೇ ವಶಕ್ಕೆ ಪಡೆಯುತ್ತಿದ್ದರು. ಸುದ್ದಿ ವ್ಯಾಪಕವಾಗಿ ಹರಡುತ್ತಿದ್ದಂತೆ ದೇವಸ್ಥಾನಕ್ಕೆ ಬರುತ್ತಿದ್ದ ಮತ್ತಷ್ಟು ಭಕ್ತರು ಜಾತ್ರೆಗೆ ಬರಲು ಹಿಂಜರಿಯುತ್ತಿದ್ದರು.
ಆದರೂ ಸಂಪ್ರದಾಯದಂತೆ ದೇವಾಲಯಕ್ಕೆ ಹೋಗಲೇ ಬೇಕು ಎಂದು ಹಲವಾರು ಭಕ್ತರು ಕತ್ತರಿಸಿದ ಮಾಂಸವನ್ನು ಬೇರೆಡೆಗಳಿಂದ ತಂದು ಹೊರ ವಲಯಗಳಲ್ಲಿ ಕದ್ದುಮುಚ್ಚಿ ಅಡುಗೆ ತಯಾರಿಸುತ್ತಿದ್ದರು. ಶುಕ್ರವಾರ ಮುತ್ತುರಾಯನ ಸೇವೆ ಯೊಂದಿಗೆ ಬೃಹತ್ 5 ದಿನದ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.