Advertisement
ತಿರುಮಕುಡಲು ಶ್ರೀ ಅಗಸ್ತೇಶ್ವರ ಸ್ವಾಮಿ ದೇವಸ್ಥಾನ ಸಮೀಪದ ಎದುರಿನಲ್ಲಿ ಪ್ರತ್ಯೇಕವಾದ ಚಪ್ಪರ ನಿರ್ಮಿಸಿ ಅದರೊಳಗೆ ಸುಮಾರು 1.50 ಟನ್ ಮರಳು ಬಳಸಿ ಕಲಾವಿದ ಎನ್.ರಘುನಂದನ್ ಮತ್ತು ತಂಡದವರು ಈ ಕಲಾಕೃತಿಗಳನ್ನು ರಚಿಸಿದ್ದಾರೆ.
Related Articles
Advertisement
ಸಿದ್ಧಗಂಗೆಯ ಡಾ.ಶಿವಕುಮಾರ ಸ್ವಾಮೀಜಿಯ ಸ್ಮರಣೆಯನ್ನು ಮಣ್ಣಿನ ಕಲಾಕೃತಿ ಮೂಲಕ ಮಾಡಿದ್ದೇನೆ. ಹಾಗೆಯೇ ದೇಶಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಸೈನಿಕರಿಗೆ ಸಲಾಂ ಸಲ್ಲಿಸಲು ಹಾಗೂ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಹೀನ ಕೃತ್ಯ ಖಂಡಿಸಿ, ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸುವ ಪ್ರಯತ್ನ ಕಲೆಯ ಮೂಲಕ ಮಾಡಿದ್ದೇನೆ ಎಂದು ವಿವರಿಸಿದರು.
1.50 ಟನ್ ಮರಳು: ಯುವಬ್ರಿಗೇಡ್ ಸಂಘಟನೆಯವರು ಮರಳು ಮತ್ತು ಸ್ಥಳದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಸುಮಾರು 1.50 ಟನ್ ಮರಳು ಬಳಸಲಾಗಿದೆ. ನಿರಂತರ 12 ಗಂಟೆಗಳ ಶ್ರಮದಿಂದ ಇದು ಸಾಧ್ಯವಾಗಿದೆ. ಫೆ.19ರ ತನಕವೂ ಇರಲಿದೆ.
ಮರಳು ಒಣಗಿದರೆ ಕಲಾಕೃತಿಗೆ ಹಾನಿಯಾಗುವ ಸಾಧ್ಯತೆ ಇರುವುರಿಂದ ಸದಾ ಎಚ್ಚರ ವಹಿಸುತ್ತಿರಬೇಕು. ಮರಳಿನಲ್ಲಿ ನೀರಿನ ಅಂಶ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಮೂರು ದಿನವೂ ಕಲಾಕೃತಿಯ ಬಳಿ ಇರಲಿದ್ದೇನೆ ಎಂದು ಹೇಳಿದರು.
ಸಿದ್ಧಗಂಗಾ ಸ್ವಾಮೀಜಿ ಹಾಗೂ ಹುತಾತ್ಮರಾದ ಸೈನಿಕರಿಗೆ ಈ ಮೂಲಕ ಶ್ರದ್ಧಾಂಜಲಿ ಸಲ್ಲಿಸುವ ಸಣ್ಣ ಪ್ರಯತ್ನ ಮಾಡಿದ್ದೇನೆ. ಸಿದ್ಧಗಂಗಾ ಶ್ರೀಗಳ ಕುತ್ತಿಗೆಯಿಂದ ಕೆಳ ಭಾಗಕ್ಕೆ ಕೇಸರಿ ಬಣ್ಣ ಹಚ್ಚಿದ್ದೆವೆ. ಸ್ವಾಮೀಜಿ ಸದಾ ಖಾವಿ ಧಿರುತ್ತಿದ್ದರಿಂದ ಈ ಬಣ್ಣ ಹಾಕಿದ್ದೇವೆ ಎಂದು ಮಾಹಿತಿ ನೀಡಿದರು.