Advertisement
ಈ ನಡುವೆ ಬುಧವಾರವೂ ಸಹ ಅನೇಕ ಗಣ್ಯರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಶ್ರೀಗಳ ಶ್ವಾಸಕೋಶದ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗಿದೆ. ಶ್ರೀಗಳ ಸಹ ವೈದ್ಯರು ರಕ್ತ ಪರೀಕ್ಷೆ ನಡೆಸಿದ್ದು, ವರದಿಯಲ್ಲಿ ಸೋಂಕು ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿರುವುದು ದೃಢಪಟ್ಟಿದೆ. ದಿನನಿತ್ಯದಂತೆ ಶ್ರೀಗಳಿಗೆ ಚಿಕಿತ್ಸೆ ಮುಂದುವರಿದಿದ್ದು, ಸದ್ಯ ಶ್ರೀಗಳ ಆರೋಗ್ಯಇನ್ನಷ್ಟು ಸುಧಾರಿಸಿರುವುದು ಭಕ್ತರಲ್ಲಿ ಹರ್ಷ ತಂದಿದೆ.
ಬಿಜಿಎಸ್ ವೈದ್ಯರಿಂದ ತಪಾಸಣೆ: ಸಿದ್ಧಗಂಗಾ ಮಠದ ಹಿರಿಯ ಶ್ರೀಗಳ ಆರೋಗ್ಯವನ್ನು ಬುಧವಾರ ಸಂಜೆ ಬಿಜಿಎಸ್ ವೈದ್ಯ ಡಾ.ರವೀಂದ್ರ ತಪಾಸಣೆ ನಡೆಸಿದರು. ನಂತರ ವರದಿಗಾರರೊಂದಿಗೆ ಮಾತನಾಡಿ, ಶ್ರೀಗಳಿಗೆ ಶ್ವಾಸಕೋಶದ ಸೊಂಕಿದ್ದು, ಅದರಲ್ಲಿ ಸ್ವಲ್ಪ ನೀರು ಸೇರಿಕೊಂಡಿದೆ. ಅದನ್ನು ತೆಗೆಯುವ ಕೆಲಸ ನಡೆತ್ತಿದೆ. ಡಾ.ಪರಮೇಶ್ ನೇತೃತ್ವದ ತಂಡ ಶ್ರೀಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಬೆಂಗಳೂರಿನಿಂದ ಬಿಜಿಎಸ್ ಆಸ್ಪತ್ರೆಯಿಂದ ಡಾ.ರವೀಂದ್ರನಾಥ ರೆಡ್ಡಿ, ಡಾ ಸಂದೀಪ್, ಜಯದೇವ ಆಸ್ಪತ್ರೆ ಯಿಂದ ಡಾ.ನಾಗೇಶ್ ಬಂದುಶ್ರೀಗಳಿಗೆ ಹೃದಯ ಪರೀಕ್ಷಿಸಿದ್ದು ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದರು.
Related Articles
Advertisement
ಪ್ರೋಟೀನ್ ದೇಹದಲ್ಲಿ ಕನಿಷ್ಠ 3.5 ಇರಬೇಕು , ಆದರೆ ಶ್ರೀ ಗಳ ದೇಹದಲ್ಲಿ 2.5 ಪ್ರೋಟೀನ್ ಮಾತ್ರ ಇದೆ. ಇದರಿಂದ ನೀರು ಸೇರಿದೆ, ಶ್ರೀಗಳಿಗೆ ಇನ್ನೂ ಹೆಚ್ಚಿನ ವಿಶ್ರಾಂತಿ ಬೇಕು ಎಂದು ಬಿಜಿಎಸ್ ಆಸ್ಪತ್ರೆ ವೈದ್ಯ ಡಾ.ರವೀಂದ್ರ ಹೇಳಿದರು.
ಸಿದ್ದಗಂಗಾ ಮಠಕ್ಕೆ ವಿವಿಧ ಗಣ್ಯರು ಭೇಟಿ ಬುಧವಾರ ಶ್ರೀಮಠಕ್ಕೆ ವಿಧಾನ ಪರಿಷತ್ ನ ವಿರೋಧ ಪಕ್ಷದ ಮುಖ್ಯಸಚೇತಕ ಮಹಂತೇಶ್ ಕೌಟಗಿ ಮಠ, ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ, ಮಾಜಿ ಸಚಿವ ವಿ.ಸೋಮಣ್ಣ, ಸೊಗಡು ಎಸ್.ಶಿವಣ್ಣ ಕುಮಾರ್ ಬಂಗಾರಪ್ಪ, ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಶ್ರೀಗಳು ಸೇರಿದಂತೆ ವಿವಿಧ ಗಣ್ಯರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಇದೇ ವೇಳೆ ಮಾಧ್ಯಮಗಳೊಂದಿಗೆ ರಾಜ್ಯ ಸಭಾ ಸದಸ್ಯ ಪ್ರಭಾಕರ್ ಕೋರೆ ಮಾತನಾಡಿ, ಶ್ರೀಗಳ ಜೊತೆಗೆ ಮಾತನಾಡುವ ಪ್ರಯತ್ನ ಮಾಡಿದೆವು ಅವರ ಮಾತುಗಳು ಸರಿಯಾಗಿ ಕೇಳಿಸಲಿಲ್ಲ. ಶ್ರೀಗಳಿಗೆ ಸೋಂಕು ಕಡಿಮೆಯಾಗಿದ್ದು, ಆರೋಗ್ಯ ಇನ್ನೂ ಸ್ವಲ್ಪ ದಿನಗಳಲ್ಲಿ ಸರಿ ಹೋಗಲಿದೆ. ಅವರ ಆಶೀರ್ವಾದ ರಾಜ್ಯಕ್ಕೆ ಬೇಕು, ಅವರ ಆಯುಷ್ಯ ವೃದ್ಧಿಯಾಗಲಿ ಎಂದರು.
ಶ್ರೀಗಳಿಂದ ಮಂತ್ರ ಪಠಣ ಶ್ರೀಗಳು ತಮ್ಮ ವಿಶ್ರಾಂತಿ ನಡುವೆಯೂ ಹಾಸಿಗೆ ಯಲ್ಲೇ ಮಂತ್ರ ಪಠಿಸಿ ಇಡೀ ಭಕ್ತ ಸಮೂಹ ವನ್ನು ನಿಬ್ಬೆರಗಾಗಿಸಿದ್ದಾರೆ. ಇಷ್ಟಲಿಂಗ ಪೂಜೆ ವೇಳೆ ಶಿಷ್ಯರ ಶಿವಸ್ತುತಿಗೆ ಧ್ವನಿಗೂಡಿಸಿದ ಶ್ರೀಗಳು, ಅವರು ಹೇಳುತ್ತಿದ್ದ ಮಂತ್ರವನ್ನ ತಾವೂ ಸಹ ಪಠಿಸಿದ್ದಾರೆ. ಶ್ರೀಗಳ ಮಂತ್ರ ಪಠಣ ಮಾಡಿದರು ಎಂದು ಶ್ರೀಗಳ ಆರೋಗ್ಯ ನೋಡಿಕೊಳ್ಳುವರಿಂದ ತಿಳಿದು ಬಂದಿದ್ದು ಇದು ಭಕ್ತರಲ್ಲಿ ನಿರಾಳ ಭಾವ ಮೂಡಿಸಿದೆ. ಈ ಮೂಲಕ ಶ್ರೀಗಳ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆಯಾಗಿದೆ ಅನ್ನೋದು ಸ್ಪಷ್ಟ ಪಡಿಸಿದೆ.