Advertisement

ತುಮಕೂರು; ಕಾರು ಒಳಬಿಟ್ಟಿದ್ಯಾಕೆ-ಬೆಳ್ತಂಗಡಿ ಮೂಲದ ಖಡಕ್ ಐಪಿಎಸ್ ಅಧಿಕಾರಿ ಅನೂಪ್

09:49 AM Jan 03, 2020 | Nagendra Trasi |

ತುಮಕೂರು: ಪ್ರಧಾನಿ ನರೇಂದ್ರ ಮೋದಿ ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಭಾರೀ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ಈ ವೇಳೆ ಸಚಿವ ವಿ.ಸೋಮಣ್ಣ ಕಾರನ್ನು ಮಠದೊಳಕ್ಕೆ ಬಿಟ್ಟ ಪೊಲೀಸರ ಮೇಲೆ ಎಸ್ಪಿ ಅನೂಪ್ ಶೆಟ್ಟಿ ಕೆಂಡಾಮಂಡಲರಾದ ಘಟನೆ ಗುರುವಾರ ನಡೆಯಿತು.

Advertisement

ಸಿದ್ದಗಂಗಾ ಮಠದ 2ನೇ ಗೇಟ್ ನಲ್ಲಿ ಸೋಮಣ್ಣ ಕಾರನ್ನು ಒಳಗೆ ಬಿಟ್ಟಿದ್ದಕ್ಕೆ, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಎಸ್ಪಿ ಅನೂಪ್ ಶೆಟ್ಟಿ, ಬ್ಯಾಡ್ಜ್ ಕಾಣಿಸುತ್ತಾ ನಿನಗೆ. ಒಂದು ರಿಹರ್ಸಲ್ ಬರಲ್ಲ. ಒಂದು ಮೀಟಿಂಗ್ ಗೆ ಬರುವ ಯೋಗ್ಯತೆ ಇಲ್ಲ. ಟೈಮ್ ಪಾಸ್ ಮಾಡೋಕೆ ಬರುತ್ತೀರಾ ಇಲ್ಲಿ ಎಂದು ಆಕ್ರೋಶ ವ್ಯಕ್ತಪಡಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಯಾವುದೇ ಗಾಡಿ(ವಾಹನ) ಬಿಡಬಾರದು ಎಂದು ಹತ್ತು ಸಲ ಹೇಳಿದ್ದೀನಿ. ಮೂರು ದಿನಗಳಿಂದ ಏನು ಕಸ ಗುಡಿಸುತ್ತಿದ್ದೇವಾ ಇಲ್ಲಿ. ಅಯೋಗ್ಯ…ನಮಗೆ ಮಾಡೋಕೆ ಬೇರೆ ಕೆಲಸ ಇಲ್ವಾ? ಗಾಡಿ ಬಿಡಬಾರದು ಅಂದರೆ ಬಿಡಬಾರದು ಅಷ್ಟೇ ಎಂದು ತರಾಟೆಗೆ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.

ನಮ್ಮವರದ್ದೇ ಸ್ವಲ್ಪ ಜಾಸ್ತಿಯಾಯ್ತು:

ಮಠದಿಂದ ಹೊರ ಹೋಗುವ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಸೋಮಣ್ಣ, ನಾನು ಎಸ್ ಪಿಜಿಯವರಿಗೆ ಮನವರಿಕೆ ಮಾಡುತ್ತಿದ್ದೆ. ಆದರೆ ನಮ್ಮವರದ್ದೇ (ಅನೂಪ್ ಶೆಟ್ಟಿ) ಸ್ವಲ್ಪ ಜಾಸ್ತಿಯಾಯ್ತು ಎಂದು ಪರೋಕ್ಷವಾಗಿ ಅಸಮಧಾನವ್ಯಕ್ತಪಡಿಸಿದರು.

Advertisement

ಬೆಳ್ತಂಗಡಿ ಮೂಲದ ಖಡಕ್ ಐಪಿಎಸ್ ಅಧಿಕಾರಿ ಅನೂಪ್ ಶೆಟ್ಟಿ:

2013ರ ಐಪಿಎಸ್ ಬ್ಯಾಚ್ ಅಧಿಕಾರಿ ಅನೂಪ್ ಶೆಟ್ಟಿ ದಕ್ಷಿಣ ಕನ್ನಡದ ಬೆಳ್ತಂಗಡಿ ಮೂಲದವರು. ಈ ಹಿಂದೆ ಕೊಪ್ಪಳದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ನಂತರ ಬೆಂಗಳೂರಿನ ಸಿಐಡಿಯಲ್ಲಿ ಕೆಲಸ ನಿರ್ವಹಿಸಿದ್ದರು. 2019ರ ಆಗಸ್ಟ್ ನಲ್ಲಿ ರಾಮನಗರ ಎಸ್ಪಿಯಾಗಿ ಅನೂಪ್ ಶೆಟ್ಟಿ ಅವರನ್ನು ವರ್ಗಾವಣೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next